ಯುದ್ಧದ ಭೀಕರತೆಗೆ 2 ತುಂಬಿ 3: ಉಕ್ರೇನ್‌ಗೆ ಸಿಕ್ಕಿದೆ ಭರ್ಜರಿ ಗಿಫ್ಟ್

ಸುಮ್ಮನೆ ಸಣ್ಣ ಕಿತ್ತಾಟದಂತೆ ಶುರುವಾಗಿದ್ದ ಉಕ್ರೇನ್ VS ರಷ್ಯಾ ಯುದ್ಧ ಇದೀಗ ಭೀಕರತೆ ಸ್ವರೂಪ ಪಡೆದಿದೆ. ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ ಎನ್ನುವ ಆರೋಪಗಳನ್ನ ಒಂದು ಕಡೆ ಮಾಡುವಾಗಲೇ, ಹತ್ತಾರು ಲಕ್ಷ ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ಇದೀಗ 2 ವರ್ಷ ಮುಗಿಸಿ 3ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಈ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಭರ್ಜರಿ ಬೆಂಬಲ ಸಿಕ್ಕಿದೆ.

ಅಂದಹಾಗೆ 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾಗಿ, ಲಕ್ಷಾಂತರ ಜನರು ಕೂಡ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ.

Russia & Ukraine War Completed 2 Years And Entered To 3rd Year

ಹೀಗಿದ್ದರೂ ಯುದ್ಧವನ್ನ ನಿಲ್ಲಿಸಲು ರಷ್ಯಾ ತಯಾರಿಲ್ಲ. ಹಾಗೇ ಉಕ್ರೇನ್ ಕೂಡ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ರಷ್ಯಾಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ, ಅದು ಹೇಗೆ?

1 ಲಕ್ಷ 20 ಸಾವಿರ ಜನರ ಸಾವು?

ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯನ್ನ ಹೆಚ್ಚಿಸುತ್ತಿದೆ. ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಹೀಗೆ ಈ ಯುದ್ಧದಿಂದ ಇದುವರೆಗೆ 50,000 ನಾಗರಿಕರು ಮೃತಪಟ್ಟಿದ್ದು, ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ.

ಈ ಮೂಲಕ ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಜೀವ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಈ ಎಲ್ಲಾ ಸಂಕಷ್ಟಗಳ ಮಧ್ಯೆ ಇದೀಗ ಉಕ್ರೇನ್ & ರಷ್ಯಾ ಯುದ್ಧ 2 ವರ್ಷ ಪೂರೈಸಿದೆ. ಇದೇ ಸಮಯದಲ್ಲಿ ಉಕ್ರೇನ್‌ಗೆ ಬ್ರಿಟನ್ ಭರ್ಜರಿ ಗಿಫ್ಟ್ ಕೊಟ್ಟಿದೆ.

Russia & Ukraine War Completed 2 Years And Entered To 3rd Year

ಉಕ್ರೇನ್‌ಗೆ ಬ್ರಿಟನ್ ಸಹಾಯ ಏನು?

ಈಗಿನ ಮಾಹಿತಿಗಳ ಪ್ರಕಾರ ಬ್ರಿಟನ್ ಸರ್ಕಾರವು ಉಕ್ರೇನ್‌ಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ನೀಡಲು ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾಗೆ ಕೂಡ, ಇದೀಗ ದೊಡ್ಡ ಆಘಾತವನ್ನೇ ನೀಡಿದೆ ಬ್ರಿಟನ್.

ಈ ಹಿಂದೆ ಬ್ರಿಟನ್ ಪ್ರಧಾನಿ & ಉಕ್ರೇನ್ ಅಧ್ಯಕ್ಷರ ನಡುವೆ ಈ ವಿಚಾರವಾಗಿ ದೊಡ್ಡ ಚರ್ಚೆ ನಡೆದಿತ್ತು. ಹಾಗೇ ಉಕ್ರೇನ್‌ಗೆ ದೊಡ್ಡ ಮೊತ್ತದ ಸೇನಾ ನೆರವು ಘೋಷಣೆ ಮಾಡಿತ್ತು ಇಂಗ್ಲೆಂಡ್. ಹೀಗೆ ತಾನು ಮಾತು ಕೊಟ್ಟಂತೆ ಸಹಾಯ ಮಾಡಲು ಮುಂದಾಗುತ್ತಿದೆ ಇಂಗ್ಲೆಂಡ್.

ಯುದ್ಧದ ಮಧ್ಯೆ 500 ಹೊಸ ನಿರ್ಬಂಧ!

ರಷ್ಯಾ VS ಉಕ್ರೇನ್​ ಸಂಘರ್ಷಕ್ಕೆ 2 ವರ್ಷ ಪೂರ್ಣಗೊಂಡು 3ನೇ ವರ್ಷಕ್ಕೆ ಈಗ ಕಾಲಿಟ್ಟಿರುವ ಹೊತ್ತಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡನ್, ರಷ್ಯಾ ವಿರುದ್ಧ 500 ಹೊಸ ನಿರ್ಬಂಧಗಳನ್ನೂ ವಿಧಿಸಿದ್ದಾರೆ. ಈ ಮೂಲಕ ಅಮೆರಿಕ ಈಗ ರಷ್ಯಾಗೆ ಹೊಸ ಹೊಸ ರೀತಿಯ ಆಘಾತ ನೀಡುತ್ತಿದೆ. ಈಗಾಗಲೇ ರಷ್ಯಾ ವಿರುದ್ಧ ಅಮೆರಿಕ ವಿಧಿಸಿರುವ ನಿರ್ಬಂಧ ಭಾರಿ ದೊಡ್ಡ ಸಮಸ್ಯೆಯ ತಂದಿವೆ ಈ ಹೊತ್ತಲ್ಲೇ, ಮತ್ತಷ್ಟು ನಿರ್ಬಂಧ ವಿಧಿಸಿದೆ ಜೋ ಬೈಡನ್‌ ನೇತೃತ್ವದ ಅಮೆರಿಕ ಸರ್ಕಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+