2023 ಭವಿಷ್ಯ: ಇಡೀ ಜಗತ್ತಿಗೆ ಬಾಬಾ ವಂಗಾ ನೀಡಿರುವ ಎಚ್ಚರಿಕೆ ನಿಜವಾಯಿತಾ?
ಬಲ್ಗೇರಿಯಾದ ಬಾಬಾ ವಂಗಾ ಇದುವರೆಗೂ ನೀಡಿರುವ ಭವಿಷ್ಯಗಳಲ್ಲಿ ಬಹುತೇಕ ಅಂಶಗಳು ಸತ್ಯವಾಗಿವೆ.
ಭವಿಷ್ಯವನ್ನು ಪರಿಪೂರ್ಣವಾಗಿ ಊಹಿಸುವವರಲ್ಲಿ ವಂಗಾ ಬಾಬಾ ಕೂಡ ಒಬ್ಬರು. ದೃಷ್ಟಿಯೇ ಇಲ್ಲದವರು, ಕಣ್ಣು ಮುಚ್ಚಿ ಆಕಾಶ ನೋಡುತ್ತಾ ಭವಿಷ್ಯ ನುಡಿಯುತ್ತಾರೆ. ವೀರಬ್ರಹ್ಮೇಂದ್ರಸ್ವಾಮಿ, ನಾಸ್ಟ್ರಡಾಮಸ್ ಅವರಂತೆ ಆಕೆಯೂ ನಡೆಯಲಿರುವ ಬಹುತೇಕ ಸಂಗತಿಗಳನ್ನು ಭವಿಷ್ಯ ನುಡಿದಿದ್ದರು. 2022 ರಲ್ಲಿ ಅವರು ಪ್ರಸ್ತಾಪಿಸಿದ 6 ವಿಷಯಗಳಲ್ಲಿ 2 ನಿಜವಾಗಿ ಸಂಭವಿಸಿದೆ. ಆದ್ದರಿಂದ, 2023 ರಲ್ಲಿ ಏನಾಗುತ್ತದೆ ಎಂದು ಬಾಬಾ ನುಡಿದಿದ್ದ ಭವಿಷ್ಯ ಸದ್ಯ ನೆನಪಾಗುತ್ತಿದೆ.
ಬಲ್ಗೇರಿಯಾದ ಬಾಬಾ ವಂಗಾ ಇದುವರೆಗೂ ನೀಡಿರುವ ಭವಿಷ್ಯಗಳಲ್ಲಿ ಬಹುತೇಕ ಅಂಶಗಳು ಸತ್ಯವಾಗಿವೆ. 2023 ವರ್ಷದಲ್ಲೂ ಅದು ನಿಜವಾಗುತ್ತದೆ ಎಂದು ಅವರ ಶಿಷ್ಯಂದಿರು ಹೇಳುತ್ತಿದ್ದಾರೆ. 2023ರ ಬಗ್ಗೆ ವಂಗಾ ನೀಡಿದ ಭವಿಷ್ಯವಾಣಿ ಹೇಗಿತ್ತು ಎಂಬುದು ಇದೀಗ ಕುತೂಹಲ ಕೆರಳಿಸಿದೆ.
ಅಷ್ಟಕ್ಕೂ ಬಾಬಾ ವಂಗಾ ನುಡಿದ ಭವಿಷ್ಯ ಏನು ಅನ್ನೋದನ್ನು ನೋಡೋಣ. ಬಾಬಾ ವಂಗಾ ಅವರು ಈ ವರ್ಷ ಮಾನವ ಜೀವನ ಮತ್ತು ವಿಶ್ವ ದೇಶಗಳ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 2023ನೇ ವರ್ಷ ಕೆಲವು ತಿಂಗಳು ಕತ್ತಲೆ ಇರುತ್ತದೆ. ಮಾನವ ಜೀವನ ನಾಶವಾಗುತ್ತದೆ ಎಂದು ಅವರು ಹೇಳಿದ್ದರು. ಮಾತ್ರವಲ್ಲದೆ ಭೂಮಿಯ ಮೇಲೆ ಹಲವಾರು ಬದಲಾವಣೆಗಳಾಗಲಿವೆ ಎಂದಿದ್ದರು. ಸೋಲಾರ್ ಚಂಡಮಾರುತ ಸೇರಿದಂತೆ ಹಲವಾರು ಪ್ರಕೃತಿ ವಿಕೋಪಗಳು ಸಂಭವಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು. ಅತ್ಯಂತ ಶಕ್ತಿಶಾಲಿ ಬಿರುಗಾಳಿಗಳು ತಂತ್ರಜ್ಞಾನವನ್ನು ನಾಶಪಡಿಸುತ್ತವೆ ಎಂದಿದ್ದರು. ಸದ್ಯ ಬಾಬಾ ವಂಗಾ ಭವಿಷ್ಯ ವಾಣಿ ನೆನಪಿಸಿಕೊಳ್ಲಲು ಕಾರಣವೂ ಇದೆ. ಅದು ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪ.

ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ಈವರೆಗೆ ಸಾವಿನ ಸಂಖ್ಯೆ 11000ಕ್ಕೂ ಹೆಚ್ಚಾಗಿದೆ. ಈಶಾನ್ಯ ಸಿರಿಯಾದ ಆಫ್ರಿನ್‌ನ ಗ್ರಾಮಾಂತರದಲ್ಲಿರುವ ಜೆಂಡರೆಸ್‌ನಲ್ಲಿ ಕತ್ತಲೆ ಆವರಿಸಿದೆ. ಮಳೆ ಮತ್ತು ಚಳಿ ಆವರಿಸಿದ್ದರಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಸೋಮವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಈ ಮಾರಣಾಂತಿಕ ನೈಸರ್ಗಿಕ ವಿಕೋಪದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಕಟ್ಟಡಗಳು ನೆಲಸಮವಾಗಿವೆ. ಆರಂಭಿಕ ಭೂಕಂಪದ ನಂತರ 7.7 ತೀವ್ರತೆಯ ಭೂಕಂಪ ಎರಡನೆಯ ಬಾರಿಗೆ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಪೂರ್ವ ಟರ್ಕಿಯನ್ನು ನಲುಗಿ ಹೋಗಿದೆ.
ಈ ಘಟನೆಯಿಂದಾಗಿ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗುತ್ತಿದಿಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಬಾಬಾ ವಂಗಾ ನುಡಿದ ಭವಿಷ್ಯವನ್ನು ನಂಬುವವರಲ್ಲಿ ಇದು ಆತಂಕವನ್ನು ಸೃಷ್ಟಿ ಮಾಡಿದೆ.

ಜೊತೆಗೆ ಬಾಬಾ ವಂಗಾ ಮತ್ತಷ್ಟು ಭಯಾನಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜೈವಿಕ ಅಸ್ತ್ರಗಳ ದಾಳಿಯಿಂದ ಕೋಟಿಗಟ್ಟಲೆ ಜನರು ಸಾವನ್ನಪ್ಪಲಿದ್ದಾರೆ. ಅಣು ವಿದ್ಯುತ್ ಸ್ಥಾವರ ಸ್ಪೋಟಗೊಳ್ಳುವ ಸಾಧ್ಯತೆ ಇದೆಯಂತೆ. ರಷ್ಯಾ ಉಕ್ರೇನ್ ಮೇಲಿನ ದಾಳಿಯೇ ಬಾಬಾ ವಂಗಾ ಭವಿಷ್ಯ ಎಮದು ಹಲವರು ನಂಬುತ್ತಾರೆ.2023 ರಲ್ಲಿ ಜನನ ಪ್ರಮಾಣವು ಕುಸಿಯಲಿದೆಯಂತೆ. ಇನ್ನೂ 2023 ರಲ್ಲಿ ನಡೆಯಲಿರುವ ದುರಂತಗಳ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಲಿದೆ ಎಂದು ಬ್ರಿಟಿಷ್ ಪತ್ರಿಕೆ 'ದಿ ಮಿರರ್' ದೃಢಪಡಿಸಿದೆ. ಒಟ್ಟಿನಲ್ಲಿ ಈವರೆಗೂ ನಡೆದ ದುರಂತ ಘಟನೆಗಳ ಬಗ್ಗೆ ಈಗಾಗಲೇ ಬಾಬಾ ವಂಗಾ ಭವಿಷ್ಯ ನುಡಿದಿದ್ದರು ಎಂದು ನಂಬಲಾಗುತ್ತಿದೆ. ಮುಂದೆ ಕೆಲ ಆಪತ್ತು ಬಂದೊದಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಬಾಬಾ ವಂಗಾ ಭವಿಷ್ಯ ನಿಜವಾಗುತ್ತಾ ಕಾದು ನೊಡಬೇಕಿದೆ.
-
ಅಕ್ಷಯ ತೃತೀಯದ ದಿನವೇ ಅಕ್ಷಯ ಯೋಗ: ಮೂರು ರಾಶಿಯವರಿಗೆ ಒಲಿದು ಬರುವುದು ಧನ ಸಂಪತ್ತು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications