ಕಾಶ್ಮೀರ ಮತ್ತೊಂದು ಪ್ಯಾಲೆಸ್ಟೈನ್ ವರದಿ ತಳ್ಳಿ ಹಾಕಿದ ರಷ್ಯಾ

ಮಾಸ್ಕೋ, ಫೆಬ್ರವರಿ 8: ಕಾಶ್ಮೀರವನ್ನು ಮತ್ತೊಂದು ಪ್ಯಾಲೆಸ್ಟೈನ್ ಎಂದು ಬಣ್ಣಿಸುವ ರಷ್ಯಾದ ಮಾಧ್ಯಮ ವರದಿಯನ್ನು ರಷ್ಯಾ ತಳ್ಳಿಹಾಕಿದೆ.

ರೆಡ್ ಫಿಶ್ ಮೀಡಿಯಾ ಟ್ವೀಟರ್ ನಲ್ಲಿ ರಷ್ಯಾದ ಸಂಯೋಜಿತ ಮಾಧ್ಯಮ ಎಂದು ವರ್ಗೀಕರಿಸಲಾಗುತ್ತದೆ. ಕಾಶ್ಮೀರದ ವಿಷಯದ ಬಗ್ಗೆ ರಷ್ಯಾದ ಅಧಿಕೃತ ನಿಲುವು ಮತ್ತು ದ್ವಿಪಕ್ಷೀಯ ವಿವಾದಗಳಲ್ಲಿ ಹಸ್ತಕ್ಷೇಪ ಮಾಡದಿರುವ ರಷ್ಯಾದ ತತ್ವಬದ್ಧ ನಿಲುವು ಬದಲಾಗದೆ ಉಳಿಯುತ್ತದೆ ಎಂದು ರಷ್ಯಾದ ರಾಯಭಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಶ್ಮೀರ ವಿವಾದಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಣ ಮಾತ್ರ ಪರಿಹಾರ ಕಂಡುಹಿಡಿಯಬೇಕಾಗಿದೆ. ಅದು 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಘೋಷಣೆ ಒಳಗೊಂಡಂತೆ ಸಾಧಿಸಲಾದ ಒಪ್ಪಂದಗಳನ್ನು ಆಧರಿಸಬೇಕಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

Russia State Agency Film Equates Kashmir With Palestine, Moscow Goes Into damage-Control

ಇದು ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಚಾರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ. ಕಾಶ್ಮೀರದಲ್ಲಿನ ಹೊಸ ಸಾಕ್ಷ್ಯಚಿತ್ರವೊಂದರ ಟ್ರೈಲರ್ ಒಂದನ್ನು ಟ್ವೀಟ್ ಮಾಡಿದ್ದ ರೆಡ್ ಫಿಶ್ ಡಿಜಿಟಲ್ ಮೀಡಿಯಾ ಸಂಸ್ಥೆ ಕಾಶ್ಮೀರ ಮತ್ತೊಂದು ಪ್ಯಾಲೆಸ್ತೀನ್ ಎಂದು ಬಣ್ಣಿಸಿತ್ತು. ಇದರ ಬೆನ್ನಲ್ಲೇ, ರಷ್ಯಾ ಈ ರೀತಿಯಲ್ಲಿ ಸಮರ್ಥಿಸಿಕೊಂಡಿದೆ.

ಟ್ವಿಟ್ಟರ್‌ನಲ್ಲಿ ರೆಡ್ ಫಿಶ್ ಮಾಧ್ಯಮ ಸಂಸ್ಥೆ ರಷ್ಯಾದು ಎಂಬ ಲೆಬಲ್ ಅಧಿಕೃತವಲ್ಲ, ಹಾದಿ ತಪ್ಪಿಸುವಂತಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಚಾನೆಲ್ ತನ್ನ ಸಂಪಾದಕೀಯ ನೀತಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ ಇದರ ಸಂಕೀರ್ಣತೆ ಹಾಗೂ ಐತಿಹಾಸಿಕ ಹಿನ್ನೆಲೆ ಮತ್ತಿ ಇತರೆ ಪ್ರಾದೇಶಿಕ ಸಮಸ್ಯೆಗಳಿಗೆ ಸರಿಯಾದ ತಿಳಿವಳಿಕೆ ನೀಡಲಾಗುವುದು ಎಂದಿದೆ. ರೆಡ್‌ಫಿಶ್ ಬಹು ಪ್ರಶಸ್ತಿ ವಿಜೇತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದೆ.

Recommended Video

      ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜಿನಲ್ಲಿ ಕೇಸರಿ ಶಾಲು vs ನೀಲಿ ಶಾಲು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+