ಉಕ್ರೇನ್ ವಿರುದ್ಧ ವಿಜಯ ಘೋಷಣೆ ಮಾಡಲು ರಷ್ಯಾ ಭರ್ಜರಿ ಪ್ಲಾನ್?
ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕದನ ಇನ್ನೇನು ಅಂತಿಮ ಹಂತವನ್ನು ತಲುಪುತ್ತಿದೆ. ಅಮೆರಿಕ ಖುದ್ದಾಗಿ ಅಖಾಡಕ್ಕೆ ಇಳಿದು, ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ರಷ್ಯಾ ಜೊತೆಗೆ ಮಾತ್ರ ಮಾತುಕತೆ ನಡೆಸುತ್ತಾ, ಅತ್ತ ಉಕ್ರೇನ್‌ಗೆ ಭಾರಿ ಸಿಟ್ಟು ತರಿಸುತ್ತಿದೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ. ಆದರೆ ಇದೇ ಸಮಯದಲ್ಲಿ, ರಷ್ಯಾ ಅಧ್ಯಕ್ಷರಾದ ಪುಟಿನ್ ಮಾಸ್ಟರ್ ಸ್ಟ್ರೋಕ್ ಕೊಡಲು ಸಜ್ಜಾಗಿದ್ದಾರೆ!
ಹೌದು, ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 3 ದಿನಕ್ಕೆ 3 ವರ್ಷ ಮುಗಿಯಲಿದೆ. ಹೀಗಾಗಿ 3 ವರ್ಷ ತುಂಬುವ ಮೊದಲೇ ಯುದ್ಧ ನಿಲ್ಲುತ್ತದೆ ಎನ್ನುವ ನಿರೀಕ್ಷೆಯನ್ನು ಇಡೀ ಜಗತ್ತು ಇಟ್ಟುಕೊಂಡಿದೆ. ಇಂತಹ ಸಮಯದಲ್ಲೇ ರಷ್ಯಾ ಕೂಡ ಹುಮ್ಮಸ್ಸು ತುಂಬಿಕೊಂಡು ಕಾಯುತ್ತಿದೆ. ಡೊನಾಲ್ಡ್ ಟ್ರಂಪ್ ಆಡಳಿತ ಕೂಡ ರಷ್ಯಾಗೆ ಮಹತ್ವದ ಸ್ಥಾನ ನೀಡುತ್ತಿದೆ. ಹೀಗಿದ್ದಾಗಲೇ, ಉಕ್ರೇನ್ ವಿರುದ್ಧ ವಿಜಯ ಘೋಷಣೆ ಮಾಡಲು ರಷ್ಯಾ ಭರ್ಜರಿ ಪ್ಲಾನ್‌ನ ಮಾಡಿದೆಯಾ? ಎಂಬ ಅನುಮಾನ ಮೂಡಿದೆ.

ಪರಮಾಣು ಬಾಂಬ್ ಭಯ ಶುರುವಾಗಿತ್ತು!
ಆಧುನಿಕ ಕಾಲದಲ್ಲಿ ರಷ್ಯಾ ನಡೆಸಿದ ಘೋರ ಯುದ್ಧ ಅದು ಉಕ್ರೇನ್ ವಿರುದ್ಧದ ಕಾಳಗ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಇಡೀ ಜಗತ್ತೇ ನಲುಗಿ ಹೋಗುವಂತೆ ಮಾಡಿಬಿಟ್ಟಿದೆ. ಇಬ್ಬರ ನಡುವಿನ ಈ ಜಗಳ ಒಂದು ಕ್ಷಣ ಇಡೀ ಪ್ರಪಂಚದ ಎದೆ ನಡುಗುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಬಳಕೆ ಮಾಡಿ, ಮತ್ತೊಂದು ಮಹಾಯುದ್ಧಕ್ಕೂ ಆಹ್ವಾನ ನೀಡಲಾಗುತ್ತದಾ? ಎನ್ನುವ ಪ್ರಶ್ನೆ ಮೂಡಿತ್ತು. ಆದರೆ ಈಗ ರಷ್ಯಾ ಇಟ್ಟಿರುವ ಬಾಂಬ್‌ಗೆ ಉಕ್ರೇನ್ ಬುಡ ಅಲುಗಾಡಿ ಹೋಗಿದೆ.












Click it and Unblock the Notifications