Ukraine: ಉಕ್ರೇನ್ ವಿರುದ್ಧ ಮತ್ತೆ ಭೀಕರ ದಾಳಿ ನಡೆಸಿದ ರಷ್ಯಾ ಸೇನೆ, ಎಲ್ಲಾ ಪೀಸ್ ಪೀಸ್!
ಯುದ್ಧ, ಹಿಂಸೆ, ಸಾವು... ಇದು ಈಗ ರಷ್ಯಾ & ಉಕ್ರೇನ್ ಕದನದಲ್ಲಿ ಕಾಮನ್ ಆಗಿ ಹೋಗಿದೆ. ರಷ್ಯಾ ಸೇನೆ ಮತ್ತೊಮ್ಮೆ ತನ್ನ ಶತ್ರು ಉಕ್ರೇನ್ ವಿರುದ್ಧ ರೊಚ್ಚಿಗೆದ್ದು ದಾಳಿ ನಡೆಸುತ್ತಾ ಇದೆ. ಸಂಧಾನ ಸಭೆಗೆ ಮುಂದಾಗಿದ್ದರೂ ಉಕ್ರೇನ್ ಮಾತ್ರ ಅದಕ್ಕೆ ಕೇರ್ ಮಾಡುತ್ತಿಲ್ಲ ಎಂಬ ಆರೋಪ ಹಾಗೂ ಆಕ್ರೋಶದ ನಡುವೆ ದಿಢೀರ್ ರಷ್ಯಾ ಮಿಲಿಟರಿ ಘನಘೋರ ದಾಳಿ ಮಾಡಲು ಮುಂದೆ ಬಂದಿದೆ. ಈ ಮೂಲಕ ಉಕ್ರೇನ್ ದೇಶಕ್ಕೆ ಸೇರಿದ ಪ್ರದೇಶಗಳ ಮೇಲೆ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿದೆ. ಹಾಗಾದ್ರೆ ಈ ದಾಳಿಯಲ್ಲಿ ಏನೆಲ್ಲಾ ನಷ್ಟ ಉಂಟಾಗಿದೆ? ಬನ್ನಿ ತಿಳಿಯೋಣ.
ರಷ್ಯಾ & ಉಕ್ರೇನ್ ನಡುವೆ ಸಂಧಾನ ಮಾತುಕತೆ ನಡೆಸಿ, ಹೇಗಾದರೂ ಮಾಡಿ ಈ ಯುದ್ಧವನ್ನ ನಿಲ್ಲಿಸಬೇಕು ಅಂತಾ ಆ ಕಡೆ ಅಮೆರಿಕ ಒದ್ದಾಡುತ್ತಿದೆ. ಆದರೆ ಇದಕ್ಕೆಲ್ಲಾ ಕೇರ್ ಮಾಡದ ರಷ್ಯಾ ಮತ್ತು ಉಕ್ರೇನ್ ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಹಾಗೂ ಪ್ರತಿದಾಳಿ ಮಾಡುತ್ತಾ ಇದ್ದಾರೆ. ಆ ಮೂಲಕ ಇನ್ನಷ್ಟು ಘನಘೋರ ಪರಿಸ್ಥಿತಿ ನಿರ್ಮಾಣ ಆಗಿದೆ. ಶುಕ್ರವಾರ ಕೂಡ ಇದೇ ರೀತಿಯ ದಾಳಿ ಮಾಡಿರುವ ರಷ್ಯಾ ಸೇನೆ, ಉಕ್ರೇನ್‌ನ ನಿರ್ಣಾಯಕ ಮೂಲಸೌಕರ್ಯ ಕ್ಷೇತ್ರಗಳ ಮೇಲೆ ಈಗ ರಣಭೀಕರ ದಾಳಿ ಮಾಡಿದೆ. ಈ ಮೂಲಕ, ಚಳಿಗಾಲದಲ್ಲಿ ಇನ್ನೊಂದು ದೊಡ್ಡ ಸಮಸ್ಯೆಯೇ ಎದುರಾಗಿದೆ.

ಉಕ್ರೇನ್ ಜನರಲ್ಲಿ ಶುರುವಾಯ್ತಾ ಭಯ?
ರಷ್ಯಾ ದಿಢೀರ್ ಅಂತಾ ಉಕ್ರೇನ್ ಮೇಲೆ ಎರಗಿದ್ದು, ಇದೀಗ ಸುಮಾರು 632 ಸುತ್ತಿನಲ್ಲಿ ಕ್ಷಿಪಣಿ ಹಾಗೂ ಡ್ರೋನ್ ಬಳಸಿ ದಾಳಿಯನ್ನ ಮಾಡಿದೆ. ಕುರ್ಸ್ಕ್, ಓರಿಯೊಲ್, ಮಿಲ್ಲೆರೊವೊ ಸೇರಿದಂತೆ ಉಕ್ರೇನ್ ದೇಶದ ಹಲವು ಪ್ರದೇಶಗಳ ಮೇಲೆ ಇದೀಗ ರಷ್ಯಾ ರಾತ್ರೋರಾತ್ರಿ ದಾಳಿಯನ್ನ ಮಾಡಿ ಭಯ ಹುಟ್ಟಿಸಿದೆ. ಒಂದು ಕಡೆ ಉಕ್ರೇನ್ ಮೇಲೆ, ಶಾಂತಿ ಮಾತುಕತೆ ನಡೆಸಲು ಅಮೆರಿಕದಿಂದ ಒತ್ತಡ ಹೆಚ್ಚುತ್ತಿರುವ ಸಮಯದಲ್ಲೇ ಈ ರೀತಿಯ ದಾಳಿಯನ್ನ ರಷ್ಯಾ ನಡೆಸಿರುವುದು ಸಹಜವಾಗಿ ಉಕ್ರೇನ್ ಪ್ರಜೆಗಳ ಎದೆಯಲ್ಲಿ ಭಯ ಮೂಡಿಸಿದೆ.
ಉಕ್ರೇನ್ ಕಡೆಯಿಂದಲೂ ಪ್ರತಿದಾಳಿ ನಿರೀಕ್ಷೆ?
ಅಮೆರಿಕ ಬಾಯಿ ಬಾಯಿ ಬಡಿದುಕೊಂಡು ಕೇಳಿದರೂ ಉಪಯೋಗಕ್ಕೆ ಬರುತ್ತಿಲ್ಲ, ಯುದ್ಧವನ್ನ ನಿಲ್ಲಿಸಿ ಶಾಂತಿ ಕಾಪಾಡಿ ಎಂಬ ಮನವಿಗೂ ಸ್ಪಂದನೆ ಸಿಗುತ್ತಿಲ್ಲ. ರಷ್ಯಾ & ಉಕ್ರೇನ್ ನಡುವೆ ಈ ಸಮಯದಲ್ಲಿ ಮತ್ತಷ್ಟು ತಿಕ್ಕಾಟ ಏರ್ಪಟ್ಟಿದೆ. ಅಂದಹಾಗೆ ಎರಡೂ ದೇಶಗಳು ಶಾಂತಿ ಒಪ್ಪಂದ ಮಾತುಕತೆ ಮಾಡಿ ಯುದ್ಧ ನಿಲ್ಲಿಸುವ ಬದಲು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮುಂದುವರಿಸಿ ಭಯ ಹೆಚ್ಚಿಸಿದ್ದಾರೆ. ಇದೀಗ ರಷ್ಯಾ ರಾತ್ರೋರಾತ್ರಿ ನಡೆಸಿರುವ ದಾಳಿಗೆ ಪ್ರತಿಯಾಗಿ ಉಕ್ರೇನ್‌ನ ಕಡೆಯಿಂದ ಕೂಡ ದಾಳಿ ನಡೆಯುವ ಆತಂಕ ಆವರಿಸಿದೆ.












Click it and Unblock the Notifications