ಉಕ್ರೇನ್‌ನ 12 ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ, ತಿಕ್ಕಾಟ ಮತ್ತಷ್ಟು ತೀವ್ರ | Russia Military

ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಮಾತ್ರ ಮಾಡುತ್ತಿಲ್ಲ, ಇದರ ಜೊತೆಗೆ ಉಕ್ರೇನ್‌ಗೆ ಸೇರಿರುವ ದೊಡ್ಡ ದೊಡ್ಡ ಪ್ರದೇಶವನ್ನೇ ತನ್ನ ವಶಕ್ಕೆ ಪಡೆಯುತ್ತಿದೆ. ಚಳಿಗಾಲದ ಸಮಯದಲ್ಲಿ ರಷ್ಯಾ & ಉಕ್ರೇನ್‌ನ ನಡುವೆ ತೀವ್ರಗೊಂಡ ತಿಕ್ಕಾಟದಲ್ಲಿ ಜನರು ನಲುಗಿ ಹೋಗಿದ್ದಾರೆ. ಇದರ ಜೊತೆಗೆ ಉಕ್ರೇನ್ ಕೂಡ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, ಭವಿಷ್ಯದಲ್ಲಿ ಈ ಪೆಟ್ಟಿನಿಂದ ಸುಧಾರಿಸಿಕೊಳ್ಳಲು ಭಾರಿ ಸಮಯ ಅನಿವಾರ್ಯ ಆಗಿದೆ. ಇಂತಹ ಸಮಯದಲ್ಲೇ ಉಕ್ರೇನ್‌ನ 12 ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ ಮತ್ತಷ್ಟು ಆಘಾತ ನೀಡಿದೆ ಉಕ್ರೇನ್‌ಗೆ.

ರಷ್ಯಾ ಹಾಗೂ ಉಕ್ರೇನ್ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ಕ್ರೂರವಾಗುತ್ತಾ ಸಾಗುತ್ತಿದೆ ಇದೀಗ. ಉಕ್ರೇನ್ ಮತ್ತು ರಷ್ಯಾ ಆಜನ್ಮ ವೈರಿಗಳ ರೀತಿ ಕಿತ್ತಾಡುತ್ತಿದ್ದರೂ 3 ದಶಕದ ಹಿಂದೆ ಇದೇ ಉಕ್ರೇನ್ ರಷ್ಯಾ ಭಾಗವಾಗಿತ್ತು. ಆದರೆ ಎಲ್ಲಾ ಈಗ ಹಾಳಾಗಿ ಹೋಗಿದ್ದು ಎರಡು ದೇಶಗಳು ಬಡಿದಾಡುತ್ತಿವೆ. ಹೀಗಿದ್ದಾಗ ಜಗತ್ತಿನ ಶಾಂತಿಗೆ ಭಂಗ ಬಂದಿದ್ದು, ಹೇಗಾದರೂ ಮಾಡಿ ಈ ಇಬ್ಬರ ನಡುವೆ ಮಾತುಕತೆ ಮಾಡಿಸಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಟ್ರಂಪ್ ಅವರ ಆಸೆಯಾಗಿತ್ತು. ಆದರೆ ಎಲ್ಲಾ ಆಸೆಗಳು ಕೈಕೊಟ್ಟ ಸಮಯದಲ್ಲಿ, ನೇರ ಉಕ್ರೇನ್ ನೆಲಕ್ಕೆ ನುಗ್ಗುತ್ತಿರುವ ರಷ್ಯಾ ಸೇನೆ ಮತ್ತಷ್ಟು ಪ್ರದೇಶಗಳನ್ನು ಇದೀಗ ತನ್ನ ವಶಕ್ಕೆ ಪಡೆಯುತ್ತಿದೆ. ಅದೇ ರೀತಿಯಾಗಿ ಈಗ ಫೆಬ್ರವರಿ ತಿಂಗಳಲ್ಲಿ ಉಕ್ರೇನ್‌ನ 12 ಹಳ್ಳಿಗಳನ್ನು ವಶಪಡಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ.

Russia Military

ಜೂನ್ ತಿಂಗಳ ಒಳಗೆ ಯುದ್ಧ ನಿಲ್ಲುತ್ತಾ?

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಕೆಲ ದಿನಗಳ ಹಿಂದೆ ಯುದ್ಧ ನಿಲ್ಲಿಸುವ ಕುರಿತು ಈಗ ಅಮೆರಿಕ ಹಾಕಿರುವ ಪ್ಲಾನ್ ಬಗ್ಗೆ ಮಾತನಾಡಿದ್ದರು. ಝಲೆನ್‌ಸ್ಕಿ ಹೇಳಿದ್ದಂತೆ ಇದೇ ವರ್ಷದ ಜೂನ್ ತಿಂಗಳ ಒಳಗೆ ಯುದ್ಧ ನಿಲ್ಲಲಿದೆಯಂತೆ. ರಷ್ಯಾ & ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ 4 ವರ್ಷ ತುಂಬುತ್ತಿದ್ದು, 2022 ಫೆಬ್ರವರಿ 24 ಗುರುವಾರ ಭೀಕರ ಯುದ್ಧ ಶುರುವಾಗಿತ್ತು. ಕೆಲ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ ಯುದ್ಧ ಈಗಾಗಲೇ 4 ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಆದರೆ 2026ರ ಜೂನ್ ತಿಂಗಳ ಒಳಗೆ ಯುದ್ಧ ನಿಲ್ಲಿಸಬೇಕು ಎಂಬುದು ಟ್ರಂಪ್ ಅವರ ಪ್ಲಾನ್ ಆಗಿದೆ.

ಕಪ್ಪು ಸಮುದ್ರದ ಮೇಲೆ ದಾಳಿ

ಹೀಗಿದ್ದರೂ ರಷ್ಯಾ & ಉಕ್ರೇನ್ ಮಾತ್ರ ತಿಕ್ಕಾಟ ನಿಲ್ಲಿಸಿಲ್ಲ, ಇನ್ನೊಂದು ಕಡೆ ಉಕ್ರೇನ್ ಕೂಡ ತನ್ನ ಬಳಿ ಇರುವ ಡ್ರೋನ್‌ಗಳನ್ನ ಬಳಸಿ ದಾಳಿ ಮಾಡುತ್ತಿದೆ. ಇದೀಗ ಕಪ್ಪು ಸಮುದ್ರದ ತೈಲ ಘಟಕಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ಮಾಡಿದೆ ಎಂದು ವರದಿಯಾಗಿದೆ. ಹಾಗೇ ಇನ್ನೊಂದು ಕಡೆಯಲ್ಲಿ ರಷ್ಯಾ ತನ್ನ ಬೃಹತ್ ಸೇನೆಯ ಸಹಾಯದಿಂದ ಉಕ್ರೇನ್‌ನ ಒಂದೊಂದೇ ಹಳ್ಳಿಗಳನ್ನು ತನ್ನ ವಶಕ್ಕೆ ಪಡೆದು ಆಘಾತ ನೀಡುತ್ತಿದೆ. ಈ ಇಬ್ಬರ ತಿಕ್ಕಾಟದಲ್ಲಿ ಅಮೆರಿಕ ಮಾತ್ರ ಹೈರಾಣಾಗಿ ಹೋಗುತ್ತಿದ್ದು, ಮುಂದೆ ಏನಾಗುತ್ತೋ? ಎಂಬ ಟೆನ್ಷನ್ ಯುರೋಪ್ ಒಕ್ಕೂಟದ ದೇಶಗಳಿಗೆ ಹೆಚ್ಚಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಂದುಕೊಂಡ ಕೆಲಸವನ್ನ ಸಾಧಿಸುವ ತನಕ ಕೂಡ ಪದೇ ಪದೇ ಆ ವಿಚಾರ ಜಪ ಮಾಡುತ್ತಾ ಇರುತ್ತಾರೆ. ಇದರಿಂದ ಎಷ್ಟೊ ಕೆಲಸಗಳು ಆಗಿಯೂ ಹೋಗಿವೆ, ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಅವರು ಪದೇ, ಪದೇ ಮಾತನಾಡಿದ್ದರು. ಆದರೆ ಈ ಯುದ್ಧ ಮಾತ್ರ ಇನ್ನೂ ನಿಂತಿಲ್ಲ, ಇದರ ಜೊತೆಗೆ ತಿಕ್ಕಾಟ ಇನ್ನಷ್ಟು ಹೆಚ್ಚಾಗಿರುವುದು ಚಿಂತೆ ಕಾಡುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+