ಉಕ್ರೇನ್ ವಿರುದ್ಧ ಇನ್ನಷ್ಟು ಭೀಕರ ದಾಳಿ ನಡೆಸಲು ರಷ್ಯಾ ಮಿಲಿಟರಿ ಸನ್ನದ್ಧ?

ರಷ್ಯಾ & ಉಕ್ರೇನ್ ಯುದ್ಧ 3 ವರ್ಷ ಯಶಸ್ವಿಯಾಗಿ ಮುಗಿಸಿ, 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಬೆನ್ನಲ್ಲೇ ಹೊಸ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಈ ಯುದ್ಧ ಇಡೀ ಜಗತ್ತಿಗೆ ತಲೆನೋವು ತರಿಸಿದ್ದು, ಎಲ್ಲಿ ಪರಮಾಣು ಬಾಂಬ್ ಬಳಕೆಯಾಗುತ್ತೋ? ಎಂಬ ಚಿಂತೆ ಕಾಡುತ್ತಿದೆ. ಇಂತಹ ಸಮಯದಲ್ಲೇ ರಷ್ಯಾ ಈ ಯುದ್ಧವನ್ನು ಇನ್ನಷ್ಟು ಭೀಕರ ಸ್ವರೂಪಕ್ಕೆ ಕೊಂಡೊಯ್ಯುವ ಸಾಧ್ಯತೆ ದಟ್ಟವಾಗಿದೆ.

ಉಕ್ರೇನ್ ಈಗಾಗಲೇ ರಷ್ಯಾ ಕೊಟ್ಟಿರುವ ಏಟು ತಡೆಯಲು ಆಗದೆ ವಿಲವಿಲ ಒದ್ದಾಡಿ ಅನೇಕ ಪ್ರದೇಶಗಳನ್ನು ಕಳೆದುಕೊಂಡಿದೆ. ಇಂತಹ ಸಮಯದಲ್ಲೇ ರಷ್ಯಾ ಇನ್ನಷ್ಟು ಭೀಕರ ದಾಳಿಗೆ ಸಜ್ಜಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಾರಿ ಉಕ್ರೇನ್ ವಿರುದ್ಧ ರಷ್ಯಾ ತನ್ನ ಹೊಸ ಹೊಸ ಅಸ್ತ್ರಗಳನ್ನು ಬಳಕೆ ಮಾಡಬಹುದು ಎಂಬ ಭಯ ಮೂಡಿದೆ. ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಅಮೆರಿಕ ಪ್ರಯತ್ನ ಪಡುವಾಗಲೇ ಈ ರೀತಿ ಬೆಳವಣಿಗೆ ನಡೆಯುತ್ತಿದೆ. ಹೀಗಾಗಿ ಉಕ್ರೇನ್ ಕೂಡ ಚಿಂತೆಯಲ್ಲಿ ಮುಳುಗಿದೆ.

Russia May Start More Deadly Attack Against Ukraine In Upcoming Days

ರಷ್ಯಾ ಅಧ್ಯಕ್ಷರ ಪ್ಲಾನ್ ಏನು?

ಉಕ್ರೇನ್‌ಗೆ ಬುದ್ಧಿ ಕಲಿಸಿರುವ ರಷ್ಯಾ ಸೇನೆಯ ಮುಂದಿನ ಗುರಿ ಕೀವ್, ಅರ್ಥಾತ್ ಉಕ್ರೇನ್ ರಾಜಧಾನಿ ವಶಕ್ಕೆ ಪಡೆಯುವುದು. ಉಕ್ರೇನ್ ಯಾವಾಗ ಗಡಿ ಪ್ರದೇಶಗಳನ್ನು ಕಳೆದುಕೊಂಡು ಒದ್ದಾಡಲು ಶುರು ಮಾಡಿತ್ತೋ ಆ ನಂತರ ತನ್ನ ಸೇನೆಯನ್ನ ನೇರವಾಗಿ ರಾಜಧಾನಿ ಹೃದಯ ಭಾಗಕ್ಕೆ ಕರೆಸಿಕೊಂಡಿದೆ. ಈ ಮೂಲಕ ಕೀವ್ ರಕ್ಷಣೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದೆ ಉಕ್ರೇನ್. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಕೀವ್ ವಶಕ್ಕೆ ಪಡೆಯಲು ಬೇರೊಂದು ಪ್ಲಾನ್ ಮಾಡಿದ್ದು, ಯುದ್ಧ ಇನ್ನಷ್ಟು ಹೆಚ್ಚಾಗುವ ಭೀತಿ ಆವರಿಸಿದೆ.

ಬೇಡುವ ಸ್ಥಿತಿಯಲ್ಲಿ ಉಕ್ರೇನ್ ದೇಶ

ಸಣ್ಣ ವಿಚಾರವೇ ದೊಡ್ಡದಾಗಿ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ಶುರುವಾಗಿತ್ತು. ಉಕ್ರೇನ್ ನ್ಯಾಟೋ ಒಕ್ಕೂಟ ಸೇರಲಿದೆ ಎನ್ನುವ ಆರೋಪ ಹೊರಿಸಿದ್ದ ರಷ್ಯಾ ಯುದ್ಧ ಸಾರಿತ್ತು ರಷ್ಯಾ & ಉಕ್ರೇನ್ ಯುದ್ಧ ನೋಡುತ್ತಿದ್ದರೆ ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ.

ಇಂತಹ ಸಮಯದಲ್ಲಿ ಅಮೆರಿಕ ನೀಡುತ್ತಿದ್ದ ನೆರವು ಬಂದ್ ಆಗಿದ್ದು, ರಷ್ಯಾ ವಿರುದ್ಧ ಹೋರಾಟ ನಡೆಸಲು ಉಕ್ರೇನ್ ನರಳುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಉಕ್ರೇನ್ ನಾಯಕರು ಯುರೋಪ್ ದೇಶಗಳ ಎದುರು ಮಂಡಿ ಊರಿ ಬೇಡುತ್ತಿದ್ದಾರೆ. ಹೀಗಿದ್ದಾಗಲೇ ರಷ್ಯಾ ತನ್ನ ದಾಳಿಯನ್ನು ಇದೀಗ ಇನ್ನಷ್ಟು ಹೆಚ್ಚು ಮಾಡುವ ಆತಂಕ ಉಕ್ರೇನ್‌ಗೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+