Breaking; ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ಮಿಸೈಲ್ ದಾಳಿ
ಮಾಸ್ಕೋ, ಏಪ್ರಿಲ್ 29 ; ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದೆ. ಅದರಲ್ಲೂ ಅಮೆರಿಕ ಉಕ್ರೇನ್‌ಗೆ ಹೊಸ ಮಿಲಿಟರಿ ನೆರವು ಘೋಷಣೆ ಮಾಡಿದ ಬಳಿಕ ರಷ್ಯಾ ದಾಳಿಯನ್ನು ಹೆಚ್ಚಸಿದೆ.
ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಎರಡು ಮಿಸೈಲ್ ದಾಳಿಗಳನ್ನು ನಡೆಸಿದೆ. ಈ ದಾಳಿಯಲ್ಲಿ 10 ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಕೀವ್ ಮತ್ತು ಅದರ ಸುತ್ತಮುತ್ತಲು ರಷ್ಯಾದ ದಾಳಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಗೆ ಕೀವ್ ತೊರೆದು ಬೇರೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಲಹೆಗಾರರು ಗುರುವಾವೇ ಹೇಳಿದ್ದಾರೆ. ಆದರೆ ಕೀವ್ ತೊರೆಯಲು ಅವರು ನಿರಾಕರಿಸಿದ್ದಾರೆ.

ಏಪ್ರಿಲ್ 25ರಂದು ಉಕ್ರೇನ್‌ಗೆ ಹೊಸ ಮಿಲಿಟರಿ ನೆರವನ್ನು ಅಮೆರಿಕ ಘೋಷಣೆ ಮಾಡಿತ್ತು. ಕೀವ್‌ನಲ್ಲಿ ಗುರುವಾರ ಅಮೆರಿಕ ಮಿಲಿಟರಿಯ ಹಿರಿಯ ಅಧಿಕಾರಿಯೊಬ್ಬರು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ಸಭೆಯ ಬಳಿಕ ರಷ್ಯಾ ಕೀವ್ ಮೇಲೆ ಮಿಸೈಲ್ ದಾಳಿಯನ್ನು ಮಾಡಿದೆ. ನ್ಯಾಟೋ ಪಡೆಗಳು ಕೀವ್‌ನಲ್ಲಿ ಪುನಃ ಕಾರ್ಯಾಚರಣೆ ಆರಂಭಿಸುವುದಾಗಿ ಘೋಷಣೆ ಮಾಡಿವೆ. ಉಕ್ರೇನ್ ಪರಮಾಣು ಸ್ಥಾವರಗಳ ಭದ್ರತೆ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದೆ.
ರಷ್ಯಾ ಕೀವ್ ಮೇಲೆ ದಾಳಿಯನ್ನು ನಡೆಸುತ್ತಿದ್ದರೂ ಅದರ ಮುಖ್ಯ ಗುರಿ ಮಾರಿಯಾಪೋಲ್ ಆಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ತಿಂಗಳು ಕೀವ್ ಹೊರವಲಯದಿಂದ ಪಡೆಗಳನ್ನು ವಾಪಸ್ ಕರೆಸಿಕೊಂಡಿದ್ದ ರಷ್ಯಾ ಈಗ ಮತ್ತೆ ದಾಳಿ ಆರಂಭಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications