ಉಡೀಸ್.. ಉಡೀಸ್.. ಉಕ್ರೇನ್ ಡ್ರೋನ್ಸ್ ರಷ್ಯಾದಲ್ಲಿ ಉಡೀಸ್!

ರಷ್ಯಾ ರೊಚ್ಚಿಗೆದ್ದು ತೊಡೆತಟ್ಟಿ ನಿಂತಿದ್ದು, ಉಕ್ರೇನ್ ಸರ್ವನಾಶಕ್ಕೆ ಏನು ಬೇಕೋ ಎಲ್ಲಾ ರೀತಿ ತಯಾರಿ ಆರಂಭ ಮಾಡಿದೆ. ನೋಡ್ ನೋಡುತ್ತಲೇ ರಷ್ಯಾ ತನ್ನ ಉಗ್ರಾಣದಲ್ಲಿಟ್ಟಿದ್ದ ನ್ಯೂಕ್ಲಿಯರ್ ಬಾಂಬ್‌ಗಳನ್ನ ಹೊರಗೆ ತೆಗೆದು ವಾರ್ನಿಂಗ್ ಕೊಟ್ಟಿದೆ. ಇಷ್ಟಾದರೂ ಉಕ್ರೇನ್ ಸೈಲೆಂಟ್ ಆಗ್ತಿಲ್ಲ, ಹೀಗಾಗಿ ಉಕ್ರೇನ್ ರಷ್ಯಾ ವಿರುದ್ಧ ಹಾರಿಬಿಟ್ಟಿದ್ದ 100ಕ್ಕೂ ಹೆಚ್ಚು ಉಕ್ರೇನ್ ಡ್ರೋನ್‌ಗಳನ್ನ ಢಂ.. ಢಂ.. ಅನ್ನಿಸಿದೆ ರಷ್ಯಾ ಮಿಲಿಟರಿ.

ರಷ್ಯಾ ಈಗಾಗಲೇ ಉಕ್ರೇನ್‌ನ ಪ್ರಮುಖ ಪ್ರಾಂತ್ಯಗಳ ಪೈಕಿ ಒಂದಾಗಿರುವ ಖಾರ್ಕೀವ್ ಮೇಲೆ ಭಾಗಶಃ ಹಿಡಿತ ಸಾಧಿಸಿದೆ. ಈ ಸಮಯದಲ್ಲಿ ಉಕ್ರೇನ್ ಕೂಡ ಮರು ದಾಳಿ ಆರಂಭಿಸಿದ್ದು, ರಷ್ಯಾ ನೆಲಕ್ಕೆ ನುಗ್ಗಿ ಹೊಡೆಯುವ ಸಾಹಸಕ್ಕೆ ಕೈ ಹಾಕಿದ್ದು. ಇದು ಈಗ ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ರಷ್ಯಾ ಕೂಡ ತಕ್ಕ ಉತ್ತರ ನೀಡುತ್ತಿದೆ. 100ಕ್ಕೂ ಹೆಚ್ಚು ಉಕ್ರೇನ್ ಡ್ರೋನ್ ರಷ್ಯಾ ಗಡಿಗೆ ಬರುತ್ತಿದ್ದಂತೆ ಅಲರ್ಟ್ ಆದ ರಷ್ಯಾ ಸೇನೆ ಅವುಗಳನ್ನ ಧೂಳ್ ಧೂಳ್ ಮಾಡಿ ಹಾಕಿದೆ. ಈ ಮೂಲಕ ಉಕ್ರೇನ್ ಬೆಚ್ಚಿಬಿದ್ದಂತಾಗಿದ್ದು, ಏನೇ ಮಾಡಿದರೂ ರಷ್ಯಾ ನೆಲಕ್ಕೆ ನುಗ್ಗಲು ಉಕ್ರೇನ್ ಸೇನೆ ಕೈಯಲ್ಲಿ ಆಗುತ್ತಿಲ್ಲ.

Russia Destroyed More Than 100 Drones Which Launched By Ukraine

ರಷ್ಯಾ ಅಧ್ಯಕ್ಷರ ಚೀನಾ ಸ್ನೇಹ!

ಒಂದು ಕಡೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರವಾಗಿ ಒಗ್ಗಟ್ಟಾಗುತ್ತಿದ್ದು, ಈ ಮೂಲಕ ರಷ್ಯಾ ತುಳಿಯಲು ಸ್ಕೆಚ್ ಹಾಕಿವೆ. ಆದರೆ ಇದಕ್ಕೆ ಕೌಂಟರ್ ಕೊಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಚೀನಾ ಜೊತೆಗೆ ದೋಸ್ತಿ ಗಟ್ಟಿ ಮಾಡಿಕೊಳ್ಳುತ್ತಿದ್ದು ಸಂಚಲನ ಸೃಷ್ಟಿ ಮಾಡಿದೆ. ಹಾಗೇ ರಷ್ಯಾ ಈಗ ಮತ್ತೊಂದು ಘೋರ ಯುದ್ಧಕ್ಕೆ, ಉಕ್ರೇನ್ ಮೂಲಕ ಸಜ್ಜಾದಂತೆ ಕಾಣುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಸೇನೆ ಸಂಪೂರ್ಣ ಹಿಡಿತ ಸಾಧಿಸುವ ನಿರೀಕ್ಷೆ ಇದೆ.

ಲಕ್ಷ ಲಕ್ಷ ಜನರ ಸಾವು

ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯನ್ನ ಹೆಚ್ಚಿಸುತ್ತಿದೆ ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಹೀಗೆ ಯುದ್ಧದಿಂದಾಗಿ ಇದುವರೆಗೆ 50,000 ನಾಗರಿಕರು ಮೃತಪಟ್ಟು, 70,000 ಉಕ್ರೇನ್‌ ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಪ್ರಾಣವೇ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಕಳೆದ 2 ವರ್ಷಗಳಿಂದ ಎರಡೂ ದೇಶಗಳು ಕಚ್ಚಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+