Breaking: ಉಕ್ರೇನ್‌ನಲ್ಲಿ ನಾಗರಿಕರಿಗಾಗಿ ಕದನ ವಿರಾಮ ಘೋಷಿಸಿದ ರಷ್ಯಾ

ಕೀವ್, ಮಾರ್ಚ್ 5: ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ನಿರಂತರ ಆಕ್ರಮಣ ನಡೆಸುತ್ತಿದ್ದ ರಷ್ಯಾ ಶನಿವಾರ ಕದನ ವಿರಾಮ ಘೋಷಿಸಿದೆ. ಉಕ್ರೇನ್ ನೆಲದಲ್ಲಿ ಸಿಲುಕಿರುವ ಬೇರೆ ರಾಷ್ಟ್ರಗಳ ಪ್ರಜೆಗಳ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕದನ ವಿರಾಮವನ್ನು ಘೋಷಿಸಲಾಗಿದೆ.

ಉಕ್ರೇನ್‌ನ ಮರಿಯುಪೋಲ್ ಮತ್ತು ವೊಲ್ನೋವಾಖಾ ಪ್ರದೇಶದಿಂದ ನಾಗರಿಕರನ್ನು ಸ್ಥಳಾಂತರಿಸಲು ಅವಕಾಶ ನೀಡುವುದಕ್ಕಾಗಿ ಮಾಸ್ಕೋ ಸಮಯದ ಪ್ರಕಾರ, ಬೆಳಗ್ಗೆ 10 ಗಂಟೆಗೆ ರಷ್ಯಾ ಕದನ ವಿರಾಮವನ್ನು ಘೋಷಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಿರಂತರ ಹತ್ತು ದಿನಗಳ ಯುದ್ಧದ ನಂತರದಲ್ಲಿ ಕದನ ವಿರಾಮ ಘೋಷಿಸಲಾಗಿದೆ.

Russia declares ceasefire to allow civilians to leave Mariupol and Volnovakha

ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕಾಗಿ ರಷ್ಯಾ ಕೊಂಚ ವಿರಾಮ ನೀಡಿದೆ. ಭಾರತೀಯ ಕಾಲಾವಧಿ ಪ್ರಕಾರ ಬೆಳಗ್ಗೆ 11.30ರಿಂದ ಕದನ ವಿರಾಮ ಘೋಷಿಸಲಾಗಿದೆ. ಇದನ್ನು ಉಕ್ರೇನ್ ಕಾಲಮಾನದಲ್ಲಿ ನೋಡುವುದಾದರೆ ಬೆಳಗ್ಗೆ 6 ಗಂಟೆ ಆಗಿರುತ್ತದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್:
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಉಕ್ರೇನ್ ರಾಷ್ಟ್ರದಾದ್ಯಂತ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ. ಈ ಕದನ ವಿರಾಮದ ಬಗ್ಗೆ ರಷ್ಯಾ ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.
ಮಾಸ್ಕೋ ಮಿಲಿಟರಿ ಆಕ್ರಮಣ ಹೆಚ್ಚಿಸಿದ್ದರಿಂದ 10ನೇ ದಿನ ನಾಗರಿಕರು ಯುದ್ಧ ವಲಯವನ್ನು ತೊರೆಯಲು ಅವಕಾಶ ಮಾಡಿಕೊಡಲಾಗಿದೆ. ಉಕ್ರೇನಿಯನ್ ನಗರಗಳಾದ ಮಾರಿಯುಪೋಲ್ ಮತ್ತು ವೊಲ್ನೋವಾಖಾದಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಲಾಗಿದೆ.

Recommended Video

      ರಷ್ಯಾ ಭಯಕ್ಕೆ ಉಕ್ರೇನ್ ಗೆ ಕೈ ಕೊಟ್ಟ NATO: ಉಕ್ರೇನ್ ಪತನ ಗ್ಯಾರೆಂಟಿ!! | Oneindia Kannada

      ರಷ್ಯಾದಿಂದ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿ
      ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ನಿರಂತರ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+