ರಷ್ಯಾದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಾವು

ರಷ್ಯಾ: ರಷ್ಯಾದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ 10,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ರಷ್ಯಾ ಶನಿವಾರ ಹೇಳಿದೆ.

Recommended Video

      ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

      ಶನಿವಾರ 6,632 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ರಷ್ಯಾ ವರದಿ ಮಾಡಿದೆ, ಇದು ದೇಶಾದ್ಯಂತ ಸೋಂಕಿನ ಪ್ರಮಾಣವನ್ನು 6,74,515 ಕ್ಕೆ ಏರಿಸಿದೆ. ಕಳೆದ 24 ಗಂಟೆಗಳಲ್ಲಿ 168 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಅಧಿಕೃತ ಸಾವಿನ ಸಂಖ್ಯೆ 10,027 ಕ್ಕೆ ತಲುಪಿದೆ.

      ರಷ್ಯಾ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿರುವ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಆದರೂ ಕಳೆದ ತಿಂಗಳಿನಿಂದ ದೈನಂದಿನ ಸೋಂಕಿನ ಪ್ರಮಾಣ ಕುಸಿಯುತ್ತಿದೆ.

      Russia Covid-19 Deaths Crossed 10,000

      ದೊಡ್ಡ ಸಾವು-ನೋವು ಹೊಂದಿರುವ ಇತರ ದೇಶಗಳಿಗಿಂತ ದೇಶದ ಸಾವಿನ ಸಂಖ್ಯೆ ತೀರಾ ಕಡಿಮೆ, ಇದು ಸಾವುಗಳನ್ನು ಕಡಿಮೆ ವರದಿ ಮಾಡುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

      ಸರ್ಕಾರಿ ವೆಬ್‌ಸೈಟ್‌ನಲ್ಲಿನ ಸಾವಿನ ಅಂಕಿ ಅಂಶವು ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಮುಖ್ಯ ಕಾರಣವೆಂದು ವೈರಸ್ ಅನ್ನು ವರ್ಗೀಕರಿಸಿದ ಪ್ರಕರಣಗಳನ್ನು ಮಾತ್ರ ಒಳಗೊಂಡಿದೆ ಎಂದು ರಷ್ಯಾ ಒಪ್ಪಿಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+