Russia & Ukraine: ಹೊಸ ವರ್ಷದ ದಿನವೇ ಎಲ್ಲಾ ಧೂಳ್ ಧೂಳ್, ಉಕ್ರೇನ್ ಉಡೀಸ್!
ರಷ್ಯಾ & ಉಕ್ರೇನ್ ಕದನ ಮತ್ತಷ್ಟು ರಕ್ತಸಿಕ್ತವಾಗಿದ್ದು, ಹೊಸ ವರ್ಷದ ದಿನ ಕೂಡ ಉಕ್ರೇನ್ ವಿರುದ್ಧ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಮಿಲಿಟರಿ ಭಾರಿ ಘೋರ ದಾಳಿ ಮುಂದುವರಿಸಿದೆ. ಇದರ ಪರಿಣಾಮ ಓರ್ವ ಮೃತಪಟ್ಟು ಹಲವರು ಗಾಯೊಂಡಿದ್ದಾರೆ.
ಕ್ರಿಸ್ಮಸ್ ದಿನ ಕೂಡ ರಷ್ಯಾ ಸೇನೆ ಭಾರಿ ಘೋರ ಅಟ್ಯಾಕ್ ಮಾಡಿತ್ತು. ಇದೀಗ ಮತ್ತೆ ಹೊಸ ವರ್ಷದ ದಿನವೇ ಡೆಡ್ಲಿ ಅಟ್ಯಾಕ್ ನಡೆದಿದ್ದು, ಉಕ್ರೇನ್ ರಾಜಧಾನಿ ಜನರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಸುತ್ತುವರಿದಿರುವ ರಷ್ಯಾ ಸೇನೆ ಯಾವುದೇ ಕ್ಷಣದಲ್ಲಿ ಕೀವ್ ನ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಪಾಶ್ಚಿಮಾತ್ಯ ದೇಶಗಳ ಕಾಲು ಹಿಡಿಯುತ್ತಿದ್ದಾರೆ!
ರಷ್ಯಾ ಸೇನೆ ಉಕ್ರೇನ್‌ಗೆ ಕೊಡುತ್ತಿರುವ ಒಂದೊಂದು ಏಟು ಕೂಡ ಸರಿಯಾಗೇ ಬೀಳುತ್ತಿದೆ. ಈ ಕಾರಣಕ್ಕೆ ಉಕ್ರೇನ್ ನಲುಗಿ ಹೋಗಿದ್ದು, ಏನು ಮಾಡೋದು? ಎಂಬ ಆತಂಕದಲ್ಲಿ ಉಕ್ರೇನ್‌ನ ಸೇನೆ & ಜನ ನಲುಗಿ ಹೋಗಿದ್ದಾರೆ. ಅದರಲ್ಲೂ ರಷ್ಯಾ ಸೇನೆ ಇದೀಗ ನುಗ್ಗಿ ನುಗ್ಗಿ ಉಕ್ರೇನ್ ಒಳಗೆ ಬರುತ್ತಿರುವ ವೇಗಕ್ಕೆ ಬೆಚ್ಚಿ ಬಿದ್ದು ಓಡಿ ಹೋಗಿದ್ದಾರೆ ಉಕ್ರೇನ್ ಸೈನಿಕರು. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳ ಕಾಲು ಹಿಡಿದಿದ್ದಾರೆ. ಮತ್ತೊಂದು ಕಡೆ ಹೊಸ ವರ್ಷದ ದಿನ ಕೂಡ ಉಕ್ರೇನ್ ನೆಲದಲ್ಲಿ ರಕ್ತಪಾತ ನಡೆದಿದ್ದು, ರಷ್ಯಾ ಸೇನೆ ಈ ರೀತಿ ದಾಳಿ ಮಾಡಿರುವ ಆರೋಪ ಕೇಳಿ ಬಂದಿದೆ.
ಲಕ್ಷ ಲಕ್ಷ ಜನರ ಸಾವು?
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿ ಹೆಚ್ಚಿಸುತ್ತಿದೆ ಈ ತಿಕ್ಕಾಟದಲ್ಲಿ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಯುದ್ಧದಿಂದ ಇದುವರೆಗೆ 50,000 ಜನರು ಮೃತಪಟ್ಟಿದ್ದು, ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ.
ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಜೀವ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದ್ದು, ನಮಗೆ ಶಾಂತಿ ಬೇಕು ಅಂತಿದ್ದಾರೆ ಉಕ್ರೇನ್ ಅಧ್ಯಕ್ಷ. ಇದೇ ಕಾರಣಕ್ಕೆ ಈಗ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಒಂದಾಗಿ ಶಾಂತಿ ಒಪ್ಪಂದ ಮಾಡಿಸಲಿ ಅಂತಾ ಒತ್ತಡ ಹೇರುತ್ತಿದ್ದಾರಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ.












Click it and Unblock the Notifications