Ukraine: ಉಕ್ರೇನ್ ವಿರುದ್ಧ ಭೀಕರ ದಾಳಿ ಆರಂಭಿಸಿದ ರಷ್ಯಾ, ಪರಿಸ್ಥಿತಿ ಹೇಗಿದೆ?
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದ್ರೂ ಪ್ರಯೋಜನಕ್ಕೆ ಬರ್ತಾನೆ ಇಲ್ಲ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ಮತ್ತೆ, ಮತ್ತಷ್ಟು ಜೋರಾಗುತ್ತಾ ಇದ್ದು ಧಗಧಗಿಸುತ್ತಾ ಇದೆ. ಹೀಗೆ ರಷ್ಯಾ ಮತ್ತು ಉಕ್ರೇನ್ ಬಡಿದಾಡುತ್ತಿದ್ರೆ ಅತ್ತ ಅಮೆರಿಕ ತನಗೆ ಏನು ಬೇಕು ಅದನ್ನ ಮಾತ್ರ ನೋಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಈಗ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ಉಕ್ರೇನ್ ವಿರುದ್ಧ ಭೀಕರ ದಾಳಿ ಆರಂಭಿಸಿದೆ ರಷ್ಯಾ ಸೇನೆ.
ಯುದ್ಧದಾಹ ಇನ್ನೂ ಕಡಿಮೆ ಆಗಿಲ್ಲ, ಈ ಕಾರಣ ಮನುಷ್ಯರು ಪದೇ ಪದೇ ಯುದ್ಧ ಮಾಡುತ್ತಾ ಭೂಮಿ ಮೇಲೆ ವಿನಾಶ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ದೊಡ್ಡ ಯುದ್ಧಗಳ ನೋಡಿ ಬೆಚ್ಚಿ ಬಿದ್ದಿರುವ ಜಗತ್ತು ಇನ್ನಾದರೂ ಸೈಲೆಂಟ್ ಆಗಬಹುದು ಅನ್ನೋ ನಂಬಿಕೆ ಸುಳ್ಳಾಗಿದೆ. ಅದ್ರಲ್ಲೂ ರಷ್ಯಾ, ಉಕ್ರೇನ್ ಯುದ್ಧ ಹಾಗೂ ಇರಾನ್ & ಇಸ್ರೇಲ್ ಯುದ್ಧ ಇಡೀ ಜಗತ್ತಲ್ಲಿ ಆತಂಕ ಮೂಡಿಸಿದ್ದವು. ಆದರೆ ಇರಾನ್ & ಇಸ್ರೇಲ್ ಯುದ್ಧ ನಿಂತು ಹೋಗಿದ್ದರೂ ರಷ್ಯಾ & ಉಕ್ರೇನ್ ಯುದ್ಧದ ಬೆಂಕಿ ಮಾತ್ರ ಹಾಗೇ ಉಳಿದಿದೆ. ಈಗ ಮತ್ತೆ ರಷ್ಯಾ ಮಿಲಿಟರಿ ಉಕ್ರೇನ್‌ಗೆ ತನ್ನ ತಾಕತ್ ತೋರಿಸಿದೆ.

ಉಕ್ರೇನ್ ವಿರುದ್ಧ ದಿಢೀರ್ ಅಟ್ಯಾಕ್
ಹೌದು, ರಷ್ಯಾ ಸೇನೆಯಿಂದ ಇದೀಗ ದಿಢೀರ್ ಅಟ್ಯಾಕ್ ನಡೆದಿದ್ದು ಉಕ್ರೇನ್ ದೇಶದ ವಿವಿಧ ಭಾಗ & ಪ್ರಾಂತ್ಯಗಳ ಮೇಲೆ ಶಕ್ತಿಶಾಲಿ ಮಿಸೈಲ್ & ಡ್ರೋನ್ ಬಳಸಿ ದಾಳಿ ಮಾಡಲಾಗಿದೆ. 574 ಡ್ರೋನ್‌ಗಳ ಜೊತೆಗೆ 40 ಕ್ಷಿಪಣಿಗಳನ್ನ ಕೂಡ ಬಳಸಿ ಹೀಗೆ ಅಟ್ಯಾಕ್ ಮಾಡಲಾಗಿದೆ. 15ಕ್ಕೂ ಹೆಚ್ಚು ಜನ ದಾಳಿ ವೇಳೆ ಗಾಯಗೊಂಡಿದ್ದು, ಯುರೋಪ್ ಪ್ರವಾಸಕ್ಕೆ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ತೆರಳಿದ ಸಮಯದಲ್ಲೇ ಈ ಘಟನೆ ನಡೆದಿದೆ. ಇದಕ್ಕೂ ಮೊದಲು ಉಕ್ರೇನ್ ಸೇನೆ ರಷ್ಯಾ ವಿರುದ್ಧ 614 ಡ್ರೋನ್‌ಗಳ ಬಳಸಿ ದಾಳಿ ಮಾಡಿತ್ತು.
ಜಾಗತಿಕ ಮಟ್ಟದಲ್ಲಿ ಮತ್ತೊಂದು ತಿಕ್ಕಾಟ
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರಮುಖ ನಗರಗಳು ಇದೀಗ ನಾಶವಾಗಿ ಹೋಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಿದ್ದಾಗ ಪರಿಸ್ಥಿತಿ ಸುಧಾರಿಸಲು ಹಲವು ದೇಶಗಳು ಪ್ರಯತ್ನವನ್ನು ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ, ಇನ್ನೊಂದು ಕಡೆ ಉಕ್ರೇನ್ ಕೂಡ ತನ್ನ ಹಠವನ್ನ ಮುಂದುವರಿಸಿರುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಕಾಡುತ್ತಿದೆ.












Click it and Unblock the Notifications