ಮಾತು ತಪ್ಪಿತಾ ರಷ್ಯಾ; ಉಕ್ರೇನ್ ನೆಲದ ಯುದ್ಧ ಸ್ಥಿತಿ ವಿವರಿಸಿದ ಸಚಿವ ಡಿಮಿಟ್ರೋ ಕುಲೆಬಾ!

ಕೀವ್, ಮಾರ್ಚ್ 31: ರಷ್ಯಾ ಉಕ್ರೇನ್ ನಡುವಿನ ಶಾಂತಿ-ಸಂಧಾನ ಸಭೆಯ ನಂತರದಲ್ಲೂ ಉಕ್ರೇನ್ ಮೇಲೆ ರಷ್ಯಾ ಪಡೆಗಳ ದಾಳಿ ಮುಂದುವರಿದಿದೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.

ಬುಧವಾರ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಅವರು, ಕೆಲವು ಪ್ರದೇಶಗಳಲ್ಲಿ ರಷ್ಯಾ ಪಡೆಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ರಷ್ಯಾ ಪಡೆಗಳ ದಾಳಿ ಮುಂದುವರಿದಿದೆ ಎಂದರು.

"ನಾವು ರಷ್ಯಾಕ್ಕೆ ಕೆಲವು ಉತ್ತಮ ಪ್ರಸ್ತಾಪಗಳನ್ನು ಮಾಡಿದ್ದೇವೆ, ಆದರೆ ನಾವು ನೆಲದ ಪರಿಸ್ಥಿತಿಯನ್ನು ನೋಡಬೇಕಾಗಿದೆ. ಏಕೆಂದರೆ ಈಗಲೂ ದಾಳಿಗಳು ನಡೆಯುತ್ತಿವೆ. ಕೆಲವು ಪ್ರದೇಶಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತುಕತೆ ನಡೆಸಲೂ ಸಾಧ್ಯವಾಗದಂತೆ ಸಂಪರ್ಕ ಕಡಿತಗೊಂಡಂತೆ ತೋರುತ್ತಿದೆ. ಕೀವ್ ಮತ್ತು ಚಿರ್ನಿಹಿವ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇನೆಯನ್ನು ಹಿಂತೆಗೆದುಕೊಂಡಂತೆ ಕಾಣುತ್ತಿಲ್ಲ," ಎಂದು ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ದೂಷಿಸಿದ್ದಾರೆ.

Russia attacks are still going on; Ukraines Foreign Minister Dmytro Kuleba

ರಷ್ಯಾದ ಯುದ್ಧತಂತ್ರ ಎಂಬ ಅನುಮಾನ:

"ಕೆಲವು ಪ್ರದೇಶಗಳಿಂದ ರಷ್ಯನ್ ಪಡೆಗಳು ವಾಪಸ್ಸಾಗಿರುವುದನ್ನು ನಾವು ನೋಡಿದ್ದೇವೆ, ಆದರೆ ನೀವು ಸುರಂಗದಲ್ಲಿ ಬೆಳಕನ್ನು ನೋಡಿದರೆ, ಅದು ಒಳಬರುವ ರೈಲಿನದ್ದಲ್ಲ ಎಂದು ಖಚಿತಪಡಿಸಿಕೊಳ್ಳಿ. ನಾವು ರಷ್ಯಾದ ಭರವಸೆಗಳ ಬಗ್ಗೆ ಜಾಗರೂಕರಾಗಿರಬೇಕು," ಎಂದು ಕುಲೆಬಾ ಎಚ್ಚರಿಸಿದ್ದಾರೆ. ಸೇನಾ ವಾಪಸ್ಸಾತಿಯು ರಷ್ಯಾದ ಯುದ್ಧತಂತ್ರಗಳ ಒಂದು ಭಾಗವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

"ರಷ್ಯಾದ ರಚನಾತ್ಮಕ ಭರವಸೆಯ ಮಾತುಗಳನ್ನು ರಚನಾತ್ಮಕ ನಡೆಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಏಕೆಂದರೆ ನಾವು ಯಾರನ್ನೂ ಆಕ್ರಮಿಸಿಲ್ಲ. ಯುದ್ಧವು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂಬ ಆರಂಭಿಕ ಊಹೆಯು ತಪ್ಪಾಗಿರುವುದು ಈಗಾಗಲೇ ಸಾಬೀತಾಗಿದೆ. ಎರಡು ರಾಷ್ಟ್ರಗಳ ನಡುವಿನ ಯುದ್ಧವು ಆರಂಭವಾಗಿ ಈಗಾಗಲೇ ಎರಡನೇ ತಿಂಗಳಿಗೆ ಕಾಲಿಟ್ಟಿದೆ," ಎಂದರು.

Russia attacks are still going on; Ukraines Foreign Minister Dmytro Kuleba

ಸೇನೆ ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದ ರಷ್ಯಾ:

ಕಳೆದ ಮಾರ್ಚ್ 29ರಂದು ನಡೆದ ಸಂಧಾನ ಸಭೆಯು ಇನ್ನೇನು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿತ್ತು. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿತ್ತು. ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರೊಬ್ಬರು ಹೇಳಿದ್ದರು.

ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿತ್ತು. ಆ ಮೂಲಕ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+