Russia & Ukraine: ರಷ್ಯಾ & ಉಕ್ರೇನ್ ವಾರ್‌ಗೆ ಸದ್ಯದಲ್ಲೇ ಎಳ್ಳುನೀರು ಗ್ಯಾರಂಟಿ?

ರಷ್ಯಾ & ಉಕ್ರೇನ್ ಮಧ್ಯೆ ಘೋರ ಕದನ ಆರಂಭವಾಗಿ ಈಗಾಗಲೇ ಸುಮಾರು ಎರಡು ಮುಕ್ಕಾಲು ವರ್ಷ ಯಶಸ್ವಿಯಾಗಿ ಮುಗಿದಿದೆ. ಇನ್ನೇನು 1000 ದಿನಗಳನ್ನು ಪೂರೈಸಲಿರುವ ಈ ಯುದ್ಧ ಈಗಾಗಲೇ ಲಕ್ಷಾಂತರ ಜನರ ಜೀವ ಬಲಿ ಪಡೆದಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಈಗ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದಿದ್ದಾರೆ. ಮತ್ತೊಂದು ಕಡೆಯಲ್ಲಿ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಶುರುವಾಗಿದೆ. ಅಲ್ಲದೆ ಟ್ರಂಪ್ ಅಧಿಕಾರ ವಹಿಸಿಕೊಂಡ ತಕ್ಷಣ...

ರಷ್ಯಾ & ಉಕ್ರೇನ್ ವಾರ್ ಶುರುವಾದ ನಂತರ ಜಗತ್ತಿನಲ್ಲಿ ನೆಮ್ಮದಿ ಇಲ್ಲವಾಗಿದೆ. ಜನ ಕೂಡ ಮತ್ತೊಂದು ಮಹಾಯುದ್ಧದ ಭಯದಲ್ಲೇ ದಿನ ದೂಡುವ ವಾತಾವರಣ ಇದೆ. ಹೀಗಿದ್ದಾಗ, ಅಮೆರಿಕದಲ್ಲಿ ದೊಡ್ಡ ಬದಲಾವಣೆ ಎದುರಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷನ ಪಟ್ಟ ಪಡೆದು ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಎಂಟ್ರಿಯ ನಂತರ ರಷ್ಯಾ & ಉಕ್ರೇನ್ ವಾರ್ ನಿಲ್ಲುತ್ತದೆ ಎಂಬ ಬಲವಾದ ನಂಬಿಕೆ ಕೂಡ ಮೂಡಿದೆ. ಹಾಗಾದ್ರೆ ಟ್ರಂಪ್ ಯುದ್ಧ ನಿಲ್ಲಿಸುವುದು ಹೇಗೆ? ಇಂತಹ ಬಲವಾದ ನಂಬಿಕೆ ಮೂಡಿದ್ದು ಏಕೆ? ಈ ಕುರಿತಾಗಿ ಮಾಹಿತಿ ತಿಳಿಯೋಣ ಬನ್ನಿ.

Russia And Ukraine War May Be Get An End Soon After Trump Back To The Power

2022ರ ಫೆಬ್ರವರಿ ತಿಂಗಳಲ್ಲಿ...

ಉಕ್ರೇನ್ ಮಿಲಿಟರಿಯು ಇದೀಗ ಅಸಹಾಯಕ ಪರಿಸ್ಥಿತಿಗೆ ಸಿಲುಕಿ ತೀವ್ರವಾಗಿ ನರಳಾಡುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ VS ಉಕ್ರೇನ್ ಯುದ್ಧ ಹೊತ್ತಿ ಉರಿಯುತ್ತಿದೆ. ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಡೆಡ್ಲಿ ವಾರ್ ತಣ್ಣಗಾಗಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ ಶತ್ರು ಮೇಲೆ ಎರಗುತ್ತಿದೆ. ಉಕ್ರೇನ್ ಸೇನೆ ಕೈಯಲ್ಲಿ ಕಾಸಿಲ್ಲದೆ ನರಳುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಎರಡು ಮುಕ್ಕಾಲು ವರ್ಷದಲ್ಲಿ ಅಮೆರಿಕದಿಂದ 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯ ಸಿಕ್ಕಿದೆ.

ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ಟ್ರಂಪ್?

ಅಮೆರಿಕ ಇಲ್ಲದೆ ಉಕ್ರೇನ್ ಈಗಿನ ಪರಿಸ್ಥಿತಿಯಲ್ಲಿ ರಷ್ಯಾ ವಿರುದ್ಧ ಹೋರಾಟ ನಡೆಸಲು & ಯುದ್ಧದಲ್ಲಿ ಗೆಲ್ಲಲು ಆಗಲ್ಲ. ಯಾಕಂದ್ರೆ ಉಕ್ರೇನ್ ಬಳಿ ಯುದ್ಧ ಮಾಡುವಷ್ಟು ಶಕ್ತಿಯೇ ಉಳಿದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಮೊದಲೇ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಂತೆ, ತಾವು ಅಧಿಕಾರಕ್ಕೆ ಬಂದರೆ ಉಕ್ರೇನ್ & ರಷ್ಯಾ ಯುದ್ಧ ನಿಲ್ಲುವುದು ಗ್ಯಾರಂಟಿ ಎಂಬ ಭರವಸೆ ನೀಡಿದ್ದರು.

ಇದೇ ಹಿನ್ನೆಲೆ ಉಕ್ರೇನ್ ದೇಶಕ್ಕೆ ಇದೀಗ ನಡುಕ ಶುರುವಾಗಿದೆ. ಯಾಕಂದ್ರೆ ಅಮೆರಿಕ ಸದ್ಯ ನೀಡುತ್ತಿರುವ ಯುದ್ಧ ಸಹಾಯ ನಿಂತು ಹೋಗುವ ಭಯ ಆವರಿಸಿದೆ! ಅದರಲ್ಲೂ ಇನ್ನು ಕೆಲವೇ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲಿದ್ದು, ತಕ್ಷಣವೇ ಉಕ್ರೇನ್ & ರಷ್ಯಾ ಯುದ್ಧ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ರಷ್ಯಾಗೆ ಈ ವಿಚಾರವು ದೊಡ್ಡ ರಿಲೀಫ್ ನೀಡುವ ಎಲ್ಲಾ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+