Ukraine War: ಜಗತ್ತು ನಾಶವಾಗುವ ಬಾಂಬ್ ಬಳಸಲು ರಷ್ಯಾ & ಉಕ್ರೇನ್ ಚಿಂತನೆ?
ರಷ್ಯಾ & ಉಕ್ರೇನ್ ಸೇನೆಗಳು ಆಡುತ್ತಿರುವ ರೀತಿ ನೋಡಿದರೆ, ಯಾವ ಕ್ಷಣದಲ್ಲಿ ಇಬ್ಬರೂ ಸೇರಿ ಜಗತ್ತನ್ನೇ ನಾಶ ಮಾಡಿಬಿಡುತ್ತಾರೋ? ಎಂಬ ಪ್ರಶ್ನೆ ಮೂಡಿದೆ. ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣವು ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಹಾದು ಹೋಗುತ್ತಿದೆ. ಇಂತಹ ಸಮಯದಲ್ಲೇ ಇಬ್ಬರೂ ದೊಡ್ಡ ದಾಳಿ ಮಾಡಲು ಪ್ಲಾನ್ ಮಾಡಿದ್ದಾರಂತೆ!
ಯುರೋಪ್ & ಅಮೆರಿಕ ಜನ ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಈಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ & ಉಕ್ರೇನ್, ಮತ್ತೊಂದು ಪರಮಾಣು ಯುದ್ಧಕ್ಕೆ ಸಜ್ಜಾಗಿವೆಯಾ? ಇಂತಹ ಅನುಮಾನಕ್ಕೆ ಕಾರಣವಾಗಿದ್ದು ರಷ್ಯಾ & ಉಕ್ರೇನ್ ಸೇನೆಗಳ ನಡೆ. ಯಾಕಂದ್ರೆ ಈ ಎರಡೂ ದೇಶಗಳು ಪರಮಾಣು ಯುದ್ಧಕ್ಕೆ ನಿಂತರೆ ಪರಿಸ್ಥಿತಿ ಇನ್ನಷ್ಟು ಕೈಮೀರಲಿದೆ, ಯಾವ ಕ್ಷಣದಲ್ಲಿ ಇಡೀ ಪ್ರಪಂಚ ನಾಶವಾಗಿ ಹೋಗುತ್ತದೋ? ಎಂಬ ಪ್ರಶ್ನೆ ಕಾಡುತ್ತಿದೆ.

ಉಕ್ರೇನ್‌ಗೆ ವಡೆ & ಪಾಯಸ ಗ್ಯಾರಂಟಿ?
ಯುದ್ಧ.. ಯುದ್ಧ.. ಯುದ್ಧ.. ಹೀಗೆ ಜಗತ್ತಿನಾದ್ಯಂತ ಬರೀ ಯುದ್ಧ ಭಯ ಕಾಡ್ತಿದೆ. ಹೌದು ರಷ್ಯಾ ದೇಶದ ಪ್ರಮುಖ ನಗರಗಳ ಮೇಲೆ ಯಾವಾಗ ಉಕ್ರೇನ್ ದಾಳಿಯನ್ನು ಹೆಚ್ಚು ಮಾಡ್ತೋ, ಆಗಲೇ ರಷ್ಯಾ ಕೂಡ ತನ್ನ ಬಳಿ ಇರುವ ಭಯಾನಕ ಪರಮಾಣ ಬಾಂಬ್‌ಗಳನ್ನ ರೆಡಿ ಮಾಡಿ ಇಟ್ಟುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೇ ಈಗ ಉಕ್ರೇನ್‌ಗೆ ವಡೆ & ಪಾಯಸ ತಿನ್ನಿಸಲು ರಷ್ಯಾ ಸೇನೆಯಿಂದ ಸಕಲ ಸಿದ್ಧತೆ ನಡೆದಿದೆಯಂತೆ!
ಚಳಿಯಲ್ಲಿ ದಾಳಿ, ನಡುಗುತ್ತಿರುವ ಜನ!
ಅಷ್ಟಕ್ಕೂ ರಷ್ಯಾ ಸೇನೆ ಇದೀಗ ಉಕ್ರೇನ್‌ನ ಕರಾವಳಿ ನಗರಗಳ ಮೇಲೆ ಭಾರಿ ಘೋರ ದಾಳಿ ನಡೆಸುತ್ತಿದ್ದು, ಇದರ ಪರಿಣಾಮ ಉಕ್ರೇನ್ ಕರಾವಳಿ ನಗರದ ಜನರು ನರಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾಕಂದ್ರೆ ಒಡೆಸ್ಸಾ ಸೇರಿದಂತೆ ಉಕ್ರೇನ್‌ನ ಕರಾವಳಿ ನಗರಗಳಲ್ಲಿ ಇದೀಗ ಚಳಿ ಹೆಚ್ಚಾಗಿದೆ. ಜೂನ್ & ಜುಲೈ ಸಮಯದಲ್ಲಿ ಉಕ್ರೇನ್ ದೇಶದಲ್ಲಿ ಬೇಸಿಗೆ ಕಾಲ ಆರಂಭ ಆಗುತ್ತದೆ. ಅದಕ್ಕೂ ಮೊದಲು ಅಲ್ಲಿ ಚಳಿ ಇರುತ್ತದೆ.
ಹೀಗೆ ಚಳಿ ಹೆಚ್ಚಾಗಿರುವ ಕಾರಣಕ್ಕೆ, ಉಕ್ರೇನ್ ಜನರಿಗೆ ಈಗ ಹೀಟರ್ ಬೇಕೆ ಬೇಕು. ಆದರೆ ರಷ್ಯಾ ಮಿಲಿಟರಿಯು ತನ್ನ ಡ್ರೋನ್‌ಗಳ ಮೂಲಕ ನಡೆಸಿದ ದಾಳಿಯ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಈ ಮೂಲಕ ಅಪಾರ್ಟ್‌ಮೆಂಟ್ ಒಳಗಡೆ ಹೀಟರ್ಸ್ ಇಲ್ಲದೆ ಜನರು ನಲುಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಎರಡೂ ದೇಶಗಳ ನಡುವಿನ ಈ ವಾರ್ ಭೀಕರ ಸ್ವರೂಪ ಪಡೆಯುತ್ತಿದೆ.












Click it and Unblock the Notifications