628ನೇ ದಿನಕ್ಕೆ ಕಾಲಿಟ್ಟ ರಷ್ಯಾ & ಉಕ್ರೇನ್ ಯುದ್ಧ: ನೆರವು ನಿಲ್ಲಿಸುತ್ತಾ ದೊಡ್ಡಣ್ಣ ಅಮೆರಿಕ?

2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ಧ ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿ, ಶತ್ರುವಿನ ಮೇಲೆ ಎರಗುತ್ತಿದೆ. ಇನ್ನೊಂದ್ಕಡೆ ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಇಸ್ರೇಲ್ ಪರ ನಿಂತಿರುವ ಅಮೆರಿಕ, ಈಗ ಉಕ್ರೇನ್‌ಗೆ ಸೂಕ್ತವಾಗಿ ಸಹಾಯ ಮಾಡಲು ಆಗದೆ ಹಿಂದೇಟು ಹಾಕುತ್ತಿದೆ.

ಹೀಗೆ ಅಮೆರಿಕದ ಕಡೆಯಿಂದ ಬರುತ್ತಿದ್ದ ಅನುದಾನ ಕಡಿತವಾಗಿರುವ ಬೆನ್ನಲ್ಲೇ, ಉಕ್ರೇನ್ ಸೇನೆ ರಷ್ಯಾ ವಿರುದ್ಧದ ಯುದ್ಧದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ನೋಡ, ನೋಡುತ್ತಲೇ 628ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಜನರನ್ನ ಬಲಿಪಡೆದು ಮುನ್ನುಗ್ಗುತ್ತಿದೆ. ಇದೇ ಸಮಯಕ್ಕೆ ಉಕ್ರೇನ್‌ನ ಖೇರ್ಸನ್ ಭಾಗದ ಮೇಲೆ ರಷ್ಯಾ ಸೇನೆಯು ನಡೆಸಿರುವ ಶೆಲ್ ದಾಳಿಯಲ್ಲಿ 3 ಪ್ರಜೆಗಳು ಬಲಿಯಾಗಿದ್ದಾರೆ.

russia-and-ukraine-deadly-war

ಸ್ಮಶಾನ ರೂಪದಲ್ಲಿ ಉಕ್ರೇನ್ ಊರುಗಳು

ರಷ್ಯಾ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ನಡೆಸಿರುವ ದಾಳಿಗೆ, ಉಕ್ರೇನ್ ದೇಶದ ಭಾಗಶಃ ಊರುಗಳು ನಾಶವಾಗಿ ಹೋಗಿವೆ. ಜನ ದಿಕ್ಕಾಪಾಲಾಗಿ ತಾವು ಹುಟ್ಟಿ ಬೆಳೆದ ಊರನ್ನು ಬಿಟ್ಟು ಓಡಿ ಹೋಗಿದ್ದಾರೆ.

ಪರಿಸ್ಥಿತಿ ಹೀಗಿದ್ದಾಗಲೇ ಈಗ ಅಮೆರಿಕ ಕೂಡ ಉಕ್ರೇನ್‌ಗೆ ಕೊಡ್ತಿರುವ ನೆರವು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಯಾಕೆ ಅಂದ್ರೆ, ಅಮೆರಿಕದಲ್ಲಿ ಇನ್ನೇನು ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹೀಗಿದ್ದಾಗ, ಉಕ್ರೇನ್‌ಗೆ ನೀಡುತ್ತಿರುವ ನೆರವನ್ನು ನಿಲ್ಲಿಸುವುದು ಕೂಡ ಅಮೆರಿಕ ಚುನಾವಣೆಯ ಒಂದು ಅಜೆಂಡಾ ಆಗೋಗಿದೆ.

ಅಮೆರಿಕದ ನೆರವು ನಿಂತರೆ ಗತಿ ಏನು?

ಈಗಿನ ಸ್ಥಿತಿ ಗಮನಿಸಿದರೆ, ಅಮೆರಿಕ ಪರೋಕ್ಷವಾಗಿ ರಷ್ಯಾ ವಿರುದ್ಧ ಯುದ್ಧ ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 628 ದಿನ ಕಳೆದಿದೆ. ಹೀಗೆ ಒಂದು ಮುಕ್ಕಾಲು ವರ್ಷದಲ್ಲಿ ಅಮೆರಿಕದಿಂದ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯವನ್ನ ಉಕ್ರೇನ್ ಸೇನೆ ಪಡೆದಿದೆ.

russia-and-ukraine-deadly-war

ಇದು ಸಾಲದ ಎಂಬಂತೆ, ಭಯಾನಕ ಅಸ್ತ್ರಗಳ ರಾಶಿಯನ್ನೇ ಈಗ ನೀಡಲು ಮುಂದಾಗಿತ್ತು. ಆದರೆ ಅಷ್ಟರಲ್ಲೇ ಅಮೆರಿಕದ ಒಳಗಡೆ ಭಾರಿ ವಿರೋಧ ಕೂಡ ವ್ಯಕ್ತವಾಗಿದ್ದು, ಶೀಘ್ರವೇ ಅಮೆರಿಕ ಸರ್ಕಾರ ಉಕ್ರೇನ್‌ಗೆ ನೀಡುತ್ತಿರುವ ನೆರವು ಸಂಪೂರ್ಣ ನಿಲ್ಲಿಸಿದರೂ ಅಚ್ಚರಿ ಇಲ್ಲ.

ಹೀಗೆ ಜಗತ್ತಿನಲ್ಲಿ ಎರಡು ಕಡೆ ಭೀಕರ ಯುದ್ಧಗಳು ಶುರುವಾಗಿವೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ಅಬ್ಬರಿಸುವಾಗ, ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವೆಯು ಯುದ್ಧ ಘೋರವಾಗಿದೆ. ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಸೇರಿ ಇಸ್ರೇಲ್ ಕಡೆಯೂ 1,200 ಪ್ರಜೆಗಳು ಮೃತಪಟ್ಟಿದ್ದಾರೆ. ಗಾಜಾದಲ್ಲಿ ಮೃತಪಟ್ಟ 11,000 ಪ್ಯಾಲೆಸ್ತೀನ್ ಜನರ ಪೈಕಿ, ಅರ್ಧದಷ್ಟು ಮಕ್ಕಳೇ ಮೃತಪಟ್ಟಿದ್ದಾರೆ ಅನ್ನೊ ಆರೋಪ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+