Russia: ಮಾಸ್ಕೋದಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡಗಳ ಮೇಲೆ ಡ್ರೋನ್ ದಾಳಿ: ಪುಟಿನ್ ಸಾಮ್ರಾಜ್ಯದಲ್ಲಿ ಉಕ್ರೇನ್ ಉಪಟಳ
ಮಾಸ್ಕೋ ಜುಲೈ 24: ಮಾಸ್ಕೋದ ಕೊಮ್ಸೊಮೊಲ್ಸ್ಕಿ ಅವೆನ್ಯೂದಲ್ಲಿ ಡ್ರೋನ್ ದಾಳಿ ನಡೆದಿದೆ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ. ದಾಳಿಯಲ್ಲಿ ರಕ್ಷಣಾ ಸಚಿವಾಲಯದ ಕಟ್ಟಡಗಳು ಹಾನಿಗೆ ಒಳಗಾಗಿದ್ದು, ಸರ್ಕಾರ ತುರ್ತು ಕಾರ್ಯ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲವೆಂದು ಎಂದು ಸುದ್ದಿಸಂಸ್ಥೆ ಹೇಳಿದೆ.
ಮಾಸ್ಕೋದ ನೈಋತ್ಯ ಮತ್ತು ದಕ್ಷಿಣ ಪ್ರದೇಶಗಳ ಹಲವಾರು ನಿವಾಸಿಗಳು ಸ್ಫೋಟದ ಶಬ್ದಗಳನ್ನು ಕೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕೊಮ್ಸೊಮೊಲ್ಸ್ಕಿ ಅವೆನ್ಯೂ ಮಾಸ್ಕೋದ ಕೇಂದ್ರಾಡಳಿತ ಪ್ರದೇಶದಲ್ಲಿದೆ. ಆ ಜಾಗದಲ್ಲಿ ರಷ್ಯಾದ ರಕ್ಷಣಾ ಸಚಿವಾಲಯದ ಕಟ್ಟಡಗಳಿವೆ ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಮಾತನಾಡಿರುವ ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು, 'ಡ್ರೋನ್ ದಾಳಿಗಳು ರಾತ್ರಿಯಲ್ಲಿ ನಡೆದಿವೆ. ರಷ್ಯಾದ ರಾಜಧಾನಿಯಲ್ಲಿ ಎರಡು ವಸತಿ ರಹಿತ ಕಟ್ಟಡಗಳನ್ನು ಹೊಡೆದು ಉರುಳಿಸಿವೆ ಎಂದು ಹೇಳಿದ್ದಾರೆ.
'ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ದಾಳಿಗಳು ನಡೆದಿವೆ. ಎರಡು ವಸತಿ ರಹಿತ ಕಟ್ಟಡಗಳ ಮೇಲೆ ಡ್ರೋನ್ ಸ್ಟ್ರೈಕ್‌ಗಳು ವರದಿಯಾಗಿವೆ. ಯಾವುದೇ ಗಂಭೀರವಾದ ಹಾನಿ ಅಥವಾ ಸಾವು ನೋವುಗಳು ಸಂಭವಿಸಿಲ್ಲ' ಎಂದು ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ
ಉಕ್ರೇನ್‌ನ ಒಡೆಸಾ ಎಂಬ ಪ್ರದೇಶದ ಮೇಲೆ ಭಾನುವಾರ ರಷ್ಯಾ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಹತರಾಗಿದ್ದಾರೆ. ಐತಿಹಾಸಿಕ ಆರ್ಥೊಡಾಕ್ಸ್ ಕ್ಯಾಥೆಡ್ರಲ್ ತೀವ್ರವಾಗಿ ಹಾನಿಗೆ ಒಳಗಾಗಿದೆ. ಆ ನಂತರ ಉಕ್ರೇನ್ ನಾಯಕರು ರಷ್ಯಾ ವಿರುದ್ಧ ಪ್ರತೀಕಾರದ ಪ್ರತಿಜ್ಞೆಯನ್ನು ಮಾಡಿದ್ದಾರೆ.
ರಷ್ಯಾದ ಕ್ಷಿಪಣಿಗಳು ದಕ್ಷಿಣ ಉಕ್ರೇನಿಯನ್ ಬಂದರು ನಗರವಾದ ಒಡೆಸಾದಲ್ಲಿನ ಐತಿಹಾಸಿಕ ಆರ್ಥೊಡಾಕ್ಸ್ ಕ್ಯಾಥೆಡ್ರಲ್ ಅನ್ನು ಹಾನಿಗೊಳಿಸಿವೆ. ಈ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗಳು ಇತರ ಐತಿಹಾಸಿಕ ಕಟ್ಟಡಗಳನ್ನು ಸಹ ನಾಶಪಡಿಸಿದವು ಎಂದು ಉಕ್ರೇನ್ ಸಂಸ್ಕೃತಿ ಸಚಿವಾಲಯ ಮಾಹಿತಿ ನೀಡಿದೆ. ಕ್ಯಾಥೆಡ್ರಲ್ ಒಡೆಸಾದ ಅತಿದೊಡ್ಡ ಚರ್ಚ್ ಕಟ್ಟಡವಾಗಿದೆ. ಇದನ್ನು 1809 ರಲ್ಲಿ ಕಟ್ಟಲಾಗಿದೆ. 1936 ರಲ್ಲಿ ಮರುನಿರ್ಮಿಸಲಾಗಿದೆ. ಇದು ಒಡೆಸಾ ನಗರದ ಕೇಂದ್ರ ಭಾಗದಲ್ಲಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಿದೆ.
ರಷ್ಯಾ ದಾಳಿಯಲ್ಲಿ ಡಜನ್‌ಗಟ್ಟಲೆ ಕಾರುಗಳು ಹಾನಿಗೊಳಗಾಗಿವೆ. ನಗರದ ಅನೇಕ ಕಟ್ಟಡಗಳ ಮುಂಭಾಗಗಳು, ಛಾವಣಿಗಳು ಹಾನಿಗೊಳಗಾಗಿವೆ ಮತ್ತು ಕಿಟಕಿಗಳು ಹಾರಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ವಿದ್ಯುತ್ ಕಡಿತವಾಗಿದೆ. ಇದರಿಂದ ಸಾರ್ವಜನಿಕ ಸಂಚಾರ ವ್ಯತ್ಯಯಗೊಂಡಿದೆ ಎಂದು ಹೇಳಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ದಾಳಿಯನ್ನು ಖಂಡಿಸಿದ್ದಾರೆ. ಶಾಂತಿಯುತ ನಗರಗಳು, ವಸತಿ ಕಟ್ಟಡಗಳು, ಕ್ಯಾಥೆಡ್ರಲ್ ಚರ್ಚ್ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾದ ದುಷ್ಟತನಕ್ಕೆ ಯಾವುದೇ ಕ್ಷಮೆ ಇರಲು ಸಾಧ್ಯವಿಲ್ಲ. ಈ ದುಷ್ಟತನವನ್ನು ನಾವು ಕೊನೆಗೊಳಿಸುತ್ತೇವೆ. ಪ್ರತಿಕಾರದ ಪ್ರತಿಜ್ಞೆಯನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ, ಉಕ್ರೇನ್ ಚರ್ಚ್ ಅನ್ನು ಗುರಿಯಾಗಿಸಿ ದಾಳಿ ನಡೆಸಿರುವುದನ್ನು ರಷ್ಯಾ ಮಿಲಿಟರಿ ಅಧಿಕಾರಿಗಳು ನಿರಾಕರಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications