• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮನೀಶ್ ಛೇಡಾ ಹತ್ಯೆ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 06: ಅಮೆರಿಕದ ಇಂಡಿಯಾನಾ ಸ್ಟೇಟ್ಸ್ ವಿದ್ಯಾರ್ಥಿ ನಿಲಯದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ನಡೆದಿದೆ. ಇದರ ಬೆನ್ನಲ್ಲೇ ಕೊರಿಯಾ ಮೂಲದ ಆತನ ರೂಮ್‌ಮೇಟ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್ ಓದುತ್ತಿದ್ದ 20ರ ಹರೆಯದ ವರುಣ್ ಮನೀಶ್ ಛೇಡಾ, ಕ್ಯಾಂಪಸ್‌ನ ಪಶ್ಚಿಮ ಅಂಚಿನಲ್ಲಿರುವ ಮೆಕ್ಕಚಿಯಾನ್ ಹಾಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನೀವು ಯುಎಸ್‌ಗೆ ಹೋಗಲು 2 ವರ್ಷ ಕಾಯಬೇಕು, ಯಾಕೆ ಗೊತ್ತಾ?ನೀವು ಯುಎಸ್‌ಗೆ ಹೋಗಲು 2 ವರ್ಷ ಕಾಯಬೇಕು, ಯಾಕೆ ಗೊತ್ತಾ?

ಕೊರಿಯಾದ ಜೂನಿಯರ್ ಸೈಬರ್ ಸೆಕ್ಯುರಿಟಿ ಮೇಜರ್ ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿರುವ ರೂಮ್‌ಮೇಟ್ ಆಗಿರುವ 22 ವರ್ಷದ ಜಿಮ್ಮಿ ಶಾ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಏಕೆಂದರೆ ಇದೇ ವಿದ್ಯಾರ್ಥಿಯು 911 ಕರೆ ಮಾಡಿ ವರುಣ್ ಮನೀಶ್ ಛೇಡಾ ಸಾವಿನ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪ್ರಾಥಮಿಕ ತನಿಖೆಗಾಗಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

ಮೃತದೇಹದಲ್ಲಿ ಗಾಯದ ಗುರುತು ಪತ್ತೆ:

ಇಂಡಿಯಾನಾ ಸ್ಟೇಟ್ಸ್ ವಿದ್ಯಾರ್ಥಿ ನಿಲಯದಲ್ಲಿ ಮೃತಪಟ್ಟಿರುವ ವರುಣ್ ಮನೀಶ್ ಛೇಡಾ ಮರಣೋತ್ತರ ಪರೀಕ್ಷೆಯಲ್ಲಿ ಚೂಪಾದ ಮತ್ತು ಬಲವಾದ ಆಯುಧಗಳಿಂದ ಗಾಯ ಆಗಿರುವ ಗುರುತುಗಳು ಪತ್ತೆಯಾಗಿವೆ. ಪರ್ಡ್ಯೂ ವಿಶ್ವವಿದ್ಯಾಲಯದ ಪೊಲೀಸ್ ಮುಖ್ಯಸ್ಥ ಲೆಸ್ಲಿ ವೈಟೆ ಪ್ರಕಾರ, ಈ ಹತ್ಯೆಯು "ಪ್ರಚೋದಿತವಲ್ಲದ" ಮತ್ತು "ಪ್ರಜ್ಞಾಶೂನ್ಯ" ಎಂದು ನಂಬುತ್ತಾರೆ ಎಂದು ಹೇಳಿದರು. ಮಂಗಳವಾರ ರಾತ್ರಿ ಆನ್‌ಲೈನ್‌ನಲ್ಲಿ ಗೇಮ್ ಆಡುತ್ತಿದ್ದ ಛೇಡಾ ದಿಢೀರನೇ ಕಿರುಚುವುದನ್ನು ಸ್ನೇಹಿತನು ಕೇಳಿಸಿಕೊಂಡಿದ್ದಾರೆ.

ವಿಶ್ವವಿದ್ಯಾನಿಲಯದ ಅಧ್ಯಕ್ಷ ಮಿಚ್ ಡೇನಿಯಲ್ಸ್, ಛೇಡಾ ಸಾವು "ನಮ್ಮ ಕ್ಯಾಂಪಸ್‌ನಲ್ಲಿ ನಡೆದ ದುರ್ಘಟನೆಯು ನಮ್ಮ ಮನಸ್ಸು ಎಂದಿಗೂ ಊಹಿಸಲಾಗದಷ್ಟು ಕಠೋರವಾಗಿದೆ ಎಂದು ಹೇಳಿದರು.

English summary
Roommate arrested after Indian-origin student killed in United States. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X