ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ರಾಯಭಾರಿ ಕಚೇರಿ ಮೇಲೆ ಮತ್ತೆ ರಾಕೆಟ್ ದಾಳಿ

|
Google Oneindia Kannada News

ಬಾಗ್ದಾದ್, ಜನವರಿ 27: ಬಾಗ್ದಾದ್‌ನಲ್ಲಿನ ಸರ್ಕಾರಿ ಹಾಗೂ ರಾಜತಾಂತ್ರಿಕ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆದಿದೆ. ರಾಯಭಾರಿ ಕಚೇರಿ ಮೇಲೆ ಮೂರು ರಾಕೆಟ್ ದಾಳಿಯಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.

ರಾಯಭಾರಿ ಕಚೇರಿಯ ಕೆಫೆಟೇರಿಯಾ ಬಳಿ ಒಂದು ರಾಕೆಟ್ ಮತ್ತೆರಡು ಸ್ವಲ್ಪ ದೂರದಲ್ಲಿ ಬಡಿದಿವೆ ಎಂದು ಎಎಫ್ ಪಿ ವರದಿ ಮಾಡಿದೆ. ಈ ದಾಳಿಯಿಂದ ಕನಿಷ್ಠ ಮೂವರಿಗೆ ಗಾಯಗಳಾಗಿವೆ.

ಇರಾಕಿ ಉಗ್ರ ಸಂಘಟನೆ ನಾಯಕತ್ವ ವಹಿಸಿಕೊಂಡ ಅಲ್​ ಸಲ್ಬಿ
ಕಳೆದ ಕೆಲ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಬಾಗ್ದಾದ್‌ನಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ರಾಕೆಟ್ ಲ್ಯಾಂಡ್ ಆಗುತ್ತಿದ್ದಂತೆ ಸೈರನ್‌ಗಳು ಕೂಗಿಕೊಂಡಿದ್ದರಿಂದ ಜನರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.

Rockets strike US Embassy in Baghdad, US official says

ರಾಕೆಟ್ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಇನ್ನೂ ಹೊತ್ತಿಕೊಂಡಿಲ್ಲ. ಇರಾಕಿನಲ್ಲಿ ನೆಲೆಸಿರುವ ಇರಾನ್ ಬೆಂಬಲಿತ ಮಿಲಿಟರಿ ಪಡೆಗಳು ಕಾರಣ ಎಂದು ಅಮೆರಿಕ ದೂರಿದೆ. ಇರಾಕ್ ಯುದ್ಧಭೂಮಿಯಲ್ಲಿ ಬಳಕೆ ಮಾಡುವುದರ ಬಗ್ಗೆ ಇರಾಕಿ ಪ್ರಧಾನಿ ಅದೆಲ್ ಅಬ್ದುಲ್ ಮಹ್ದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಅಮೆರಿಕ ರಾಯಭಾರಿ ಕಚೇರಿ ಬಳಿ 3 ರಾಕೆಟ್‌ಗಳು ದಾಳಿ ನಡೆದಿತ್ತು. ಯಾವುದೇ ಪ್ರಾಣಾಪಾಯವಾಗಿರಲಿಲ್ಲ ಅಥವಾ ಕಟ್ಟಡಗಳೂ ನಾಶವಾಗಿರಲಿಲ್ಲ.

ಇರಾನ್ v/s ಯುಎಸ್ಎ: ಮಿಲಿಟರಿ ಶಕ್ತಿ, ಸಾಮರ್ಥ್ಯ ತುಲನೆಇರಾನ್ v/s ಯುಎಸ್ಎ: ಮಿಲಿಟರಿ ಶಕ್ತಿ, ಸಾಮರ್ಥ್ಯ ತುಲನೆ

ಇರಾನ್ ಸೇನಾ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಅಮೆರಿಕ ಹತ್ಯೆ ನಡೆಸಿದ ಬಳಿಕ ಇರಾಕ್ ನಲ್ಲಿನ ಅಮೆರಿಕ ರಾಜತಾಂತ್ರಿಕ ಕಚೇರಿ ಬಳಿ ಸತತ ದಾಳಿ ನಡೆಯುತ್ತಲೇ ಇದೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಇರಾನ್ ಸೇನೆಯು ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದೆ.

English summary
One rocket hit the embassy cafeteria while two others landed a short distance away, a source told AFP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X