For Daily Alerts
ಸಿರಿಯಾ ರಾಜಧಾನಿಯಲ್ಲಿ ರಾಕೆಟ್ ದಾಳಿ: 35 ಜನರ ದುರ್ಮರಣ
ದಮಾಸ್ಕಸ್, ಮಾರ್ಚ್ 21: ಸಿರಿಯಾದ ರಾಜಧಾನಿ ಡೆಮಾಸ್ಕಸ್ ನಲ್ಲಿ ನಡೆದ ಭಿಕರ ರಾಕೆಟ್ ದಾಳಿಯಲ್ಲಿ ಒಟ್ಟು 35 ಜನ ಮೃತರಾದ ದಾರುಣ ಘಟನೆ ನಿನ್ನೆ(ಮಾ.20) ನಡೆದಿದೆ.
ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾದ ಮುಗ್ಧ ಮಕ್ಕಳ ರಕ್ತಸಿಕ್ತ ಚಿತ್ರ!
ಶಾಪಿಂಗ್ ಕಾಂಪ್ಲೆಕ್ಸ್ ವೊಮದರ ಬಳಿ ಈ ಘಟನೆ ನಡೆದಿದ್ದು, ಸಿರಿಯಾದಲ್ಲಿ ಮಾರ್ಚ್ 21 ರಂದು ತಾಯಂದಿರ ದಿನ ಆಚರಿಸುವುದರಿಂದ ಅಮ್ಮಂದಿರಿಗೆ ಉಡುಗೊರೆ ನೀಡುವುದಕ್ಕಾಗಿ ಹಲವರು ಶಾಪಿಂಗ್ ಗೆಂದು ಬಂದವರಾಗಿದ್ದರು ಎಂದು ವರದಿಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಿರಿಯಾದಲ್ಲಿ 2011 ರಿಂದಲೇ ನಾಗರಿಕ ಯುದ್ಧ ಆರಂಭವಾಗಿದ್ದು, ಪ್ರತಿಭಟನಕಾರರು ಇಲ್ಲಿನ ಅಧ್ಯಕ್ಷ ಬಶರ್ ಅಲ್ ಅಸದ್ ನ ಅರಾಜಕತೆಯಿಂದ ಬೇಸತ್ತು, ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯ ವಿರೋಧಿಗಳ ನಡುವಲ್ಲಿ ನಡೆಯುತ್ತಿರುವ ಕದನಕ್ಕೆ ಮುಗ್ಧ ನಾಯಕರು ಬಲಿಯಾಗುತ್ತಿದ್ದಾರೆ.