ಕೇವಲ ಒಂದು ಸೆಕೆಂಡಿನಲ್ಲಿ ಲೇಖನ ಬರೆದ ರೋಬೋ ಪತ್ರಕರ್ತ!

Posted By:
Subscribe to Oneindia Kannada

ಬೀಜಿಂಗ್, ಜನವರಿ 19: ಇಲ್ಲಿನ ಅಲಿಬಾಬಾ ಎಂಬ ಪತ್ರಿಕಾ ಕಛೇರಿಯಲ್ಲಿ ನೂತನವಾಗಿ ರೋಬೋ ಜರ್ನಲಿಸ್ಟ್ ನ (ಯಂತ್ರ ಮಾನವ) ಪ್ರಾಯೋಗಿಕ ನೇಮಕವಾಗಿದ್ದು, ಆತನ ಕಾರ್ಯವೈಖರಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈತನಿಗೆ ಕ್ಸಿಯಾನೊ ನಾನ್ ಎಂದು ಹೆಸರಿಡಲಾಗಿದ್ದು, ಈ ರೋಬೋದ ಆರಂಭಿಕ ದಿನವಾದ ಮಂಗಳವಾರ ಈತನಿಗೆ ಚೀನಾದ ನಾಡಹಬ್ಬವಾದ ಸ್ಪ್ರಿಂಗ್ ಫೆಸ್ಟಿವಲ್ ನ ಪ್ರವಾಸಗಳ ಬಗ್ಗೆ ಬರೆಯಲು ಸೂಚಿಸಲಾಗಿತ್ತು. ಇದರ ಬಗ್ಗೆ 300 ಬೈಟ್ಸ್ ಗಳ ಪುಟ್ಟ ಲೇಖನವನ್ನು ಸಿದ್ಧಗೊಳಿಸಿದ ಆ ರೋಬೋ ತೆಗೆದುಕೊಂಡ ಸಮಯವೆಷ್ಟು ಗೊತ್ತೇ? ಕೇವಲ ಒಂದು ಸೆಕೆಂಡ್ ! ಹೌದು, ಒಂದೇ ಸೆಕೆಂಡಿನಲ್ಲಿ ಲೇಖನ ಬರೆದು ಇದನ್ನು ತಯಾರಿಸಿದ ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸಿದ್ದಾನೆ ಈತ.

Robot reporter gets its first news article published

ಅಷ್ಟೇ ಅಲ್ಲ, ಈತ ಪುಟ್ಟ ಲೇಖನಗಳ ಜತೆಗೆ, ಇಡೀ ಪುಟಕ್ಕಾಗುವಷ್ಟು ದೊಡ್ಡ ಲೇಖನಗಳು, ಪ್ರವಾಸ ಕಥನಗಳು, ಕಥೆ, ಹಾಸ್ಯ, ಸಿನಿಮಾ, ಪದ್ಯ, ಗದ್ಯ.... ಹೀಗೆ ಎಲ್ಲವನ್ನೂ ಸ್ಪಷ್ಟವಾಗಿ, ಸವಿವರವಾಗಿ ಬರೆಯಬಲ್ಲ. ಅಲ್ಲದೆ, ವಿವಿಧ ಕ್ಷೇತ್ರಗಳ ಇತ್ತೀಚೆಗಿನ ಬೆಳವಣಿಗೆಯ ಬಗ್ಗೆ ವಿಶ್ಲೇಷಣೆಯನ್ನೂ ಮಾಡಬಲ್ಲವನಾಗಿದ್ದಾನೆ ಎಂದು ಪತ್ರಿಕಾ ಕಚೇರಿ ಹೆಮ್ಮೆಯಿಂದ ಹೇಳಿಕೊಂಡಿದೆ.

ಆದರೆ, ಇದರ ಜತೆಯಲ್ಲೇ ಮತ್ತೊಂದು ಮಾತನ್ನೂ ಹೇಳಿರುವ ಪತ್ರಿಕೆ, ''ಕ್ಸಿಯಾನೊ ನಾನ್ ನ ಈ ಪರಿಯ ಕೆಲಸದಿಂದ ಮುಂಬರುವ ದಿನಗಳಲ್ಲಿ ಪತ್ರಿಕಾ ಕಚೇರಿಗಳಲ್ಲಿ ಪತ್ರಕರ್ತರ ಸ್ಥಾನಗಳನ್ನು ರೋಬೋಗಳೇ ಆಕ್ರಮಿಸುತ್ತವೆ ಎಂದು ಹೇಳುವ ಹಾಗಿಲ್ಲ'' ಎಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A robot journalist made its debut in a Chinese daily newspaper on Wednesday with a 300 characters long article written in just a second, scientists say.
Please Wait while comments are loading...