ಅಮೆರಿಕ ಬಳಿಕ ಬ್ರಿಟನ್, ರಿಷಿ ಸುನಕ್ ದಿಢೀರ್ ಇಸ್ರೇಲ್ ವಿಸಿಟ್!
ಹಮಾಸ್ ವಿರುದ್ಧ ಇಸ್ರೇಲ್ ಸೇನೆ ಯುದ್ಧ ಆರಂಭಿಸಿರುವ ಸಮಯದಲ್ಲೇ ಅಮೆರಿಕ ಮತ್ತು ಅದರ ಸ್ನೇಹಿತ ರಾಷ್ಟ್ರಗಳು ಇಸ್ರೇಲ್ ಬೆನ್ನಿಗೆ ನಿಲ್ಲುತ್ತಿವೆ. ಹೀಗೆ ತಮ್ಮ ಬೆಂಬಲ ತೋರಿಸಿ ಇಸ್ರೇಲ್‌ಗೆ ಸಹಾಯ ಮಾಡಲು, ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‌ಗೆ ಭೇಟಿ ನೀಡಿದ್ರು. ಅಮೆರಿಕ ಅಧ್ಯಕ್ಷ ಬೈಡನ್ ಬಂದು ಹೋದ ಒಂದು ದಿನ ಬಳಿಕ, ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಇಸ್ರೇಲ್‌ಗೆ ಬಂದಿದ್ದಾರೆ. ಯಾಕೆ ಗೊತ್ತಾ?
ಇಸ್ರೇಲ್‌ಗೆ ಬಂದಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಇದೀಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ರಹಸ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ಈಗಾಗಲೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದು, ಇದೇ ಸಮಯದಲ್ಲಿ ದಿಢೀರ್ ಇಸ್ರೇಲ್‌ಗೆ ಸುನಕ್ ವಿಸಿಟ್ ಕೊಟ್ಟಿದ್ದಾರೆ. ಹಾಗಾದರೆ ಇದರಿಂದಾಗಿ ಯುದ್ಧದಲ್ಲಿ ಉಂಟಾಗುವ ಬದಲಾವಣೆ ಏನು? ಹಮಾಸ್ ವಿರುದ್ಧ ಹೋರಾಡಲು ಬ್ರಿಟನ್ ನೇರವಾಗಿ ಇಸ್ರೇಲ್‌ಗೆ ಸಪೋರ್ಟ್ ಮಾಡುತ್ತಾ?

ಜಗತ್ತು ಪೀಸ್.. ಪೀಸ್..!
ಉಕ್ರೇನ್ & ರಷ್ಯಾ ಯುದ್ಧ ಶುರುವಾದಾಗ ಪ್ರಪಂಚ ನಿಧಾನವಾಗಿ ಎರಡು ಭಾಗವಾಗುತ್ತಾ ಸಾಗಿತ್ತು. ಇದು ಸಾಲದು ಎಂಬಂತೆ ಹಮಾಸ್ ಮತ್ತು ಇಸ್ರೇಲ್ ನಡುವೆ ಘೋರ ಯುದ್ಧವು ಶುರುವಾಗಿದೆ. ಈ ಸಮಯದಲ್ಲಿ ನೋಡ ನೋಡುತ್ತಲೇ ಜಗತ್ತು ಛಿದ್ರವಾಗುತ್ತಿದೆ. ಅಮೆರಿಕ ಮತ್ತು ಬ್ರಿಟನ್ ಈಗ ನೇರವಾಗಿ ಇಸ್ರೇಲ್ ಪರ ನಿಲ್ಲುವ ಸೂಚನೆ ನೀಡಿವೆ. ಹಾಗೇ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಗಾಜಾದ ನಾಗರಿಕರಿಗೂ ಮಾನವೀಯ ನೆರವು ಒದಗಿಸುವುದೂ ಮುಖ್ಯ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಚರ್ಚೆ ಮಧ್ಯೆ ಇದೀಗ ದಿಢೀರ್ ಸುನಕ್ ಇಸ್ರೇಲ್ ನೆಲಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
Israeli Prime Minister Benjamin Netanyahu is currently holding a private meeting with British Prime Minister Rishi Sunak at the Prime Minister's Office in Jerusalem.
— ANI (@ANI) October 19, 2023
(Pics: Office of the Prime Minister of Israel) https://t.co/IJLUapZUwM pic.twitter.com/nwba0vSzde
ಸುನಕ್ ಹೇಳುತ್ತಿರುವುದು ಏನು?
ಅಂದಹಾಗೆ ಇಸ್ರೇಲ್ ಸೇನೆಗೆ ಹಮಾಸ್ ಸವಾಲು ಹಾಕಿರುವ ಸಮಯದಲ್ಲೇ, ಬ್ರಿಟನ್ ಸೇನೆ ಇಸ್ರೇಲ್ ಪರ ನಿಲ್ಲುವ ಮುನ್ಸೂಚನೆ ನೀಡಿದೆ. ಇದೇ ಸಮಯದಲ್ಲಿ ಬ್ರಿಟನ್ ಪ್ರಧಾನಿಯೂ ಇಸ್ರೇಲ್‌ಗೆ ಬಲ ತುಂಬಲು ಮುಂದಾಗಿದ್ದಾರೆ. ಅಲ್ಲದೆ, ತಾವು ಹೀಗೆ ಬೆಂಬಲ ಘೋಷಿಸಲು ಕಾರಣ ಏನು ಎಂಬುದನ್ನೂ ಬಿಡಿಸಿ ಹೇಳಿದ್ದಾರೆ ಸುನಕ್. ಆ ಬಗ್ಗೆ ಮಾಹಿತಿ ಇಲ್ಲಿ ಇದ್ದು ಮುಂದೆ ಓದಿ.
ಇಸ್ರೇಲ್‌ಗೆ ಆತ್ಮರಕ್ಷಣೆ ಹಕ್ಕಿದೆ. ದೇಶದ ಭದ್ರತೆ ಕಾಪಾಡಲು ಹಾಗೂ ಒತ್ತೆಯಾಳುಗಳ ರಕ್ಷಿಸುವ ನಿಟ್ಟಿನಲ್ಲಿ ನಾವು ಬೆಂಬಲ ನೀಡುತ್ತೇವೆ ಎಂದು ರಿಷಿ ಸುನಕ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಮಾಸ್ ಕೃತ್ಯಕ್ಕೆ ಪ್ಯಾಲೆಸ್ತೀನ್ ಜನರು ಕೂಡ ಬಲಿಪಶು ಆಗಿದ್ದಾರೆ. ಹೀಗಾಗಿ ಮಾನವೀಯ ನೆರವು ಮುಖ್ಯ ಎಂದು ಸುನಕ್ ಬ್ರಿಟನ್ ಅಭಿಪ್ರಾಯವನ್ನ ತಿಳಿಸಿದ್ದಾರೆ. ಸುನಕ್ ಮಾತುಗಳು ಈಗ ಇಸ್ರೇಲ್ ಸೇನೆಗೆ ಬಲ ತುಂಬಿದ್ದರೆ, ಹಮಾಸ್ ಬಂಡುಕೋರರನ್ನು ಮತ್ತಷ್ಟು ಕೆಣಕಿದ ರೀತಿ ಭಾಸವಾಗುತ್ತಿದೆ.
#WATCH | Office of the Prime Minister of Israel tweets, "Israel Prime Minister Benjamin Netanyahu is currently holding a private meeting with British Prime Minister Rishi Sunak at the Prime Minister's Office in Jerusalem. The leaders will also hold an expanded meeting, at the… pic.twitter.com/lVHQvIctzH
— ANI (@ANI) October 19, 2023












Click it and Unblock the Notifications