Rishi Sunak: ಬ್ರಿಟನ್ ಪ್ರಧಾನಿಯ ಆತಂಕ ಹೆಚ್ಚಿಸಿದ ಸಮೀಕ್ಷೆ: ಏನಿದೆ ಆ ಸಮೀಕ್ಷೆಯಲ್ಲಿ?
ಈ ವರ್ಷದ ಅಂತ್ಯದಲ್ಲಿ ಬ್ರಿಟನ್‌ನನಲ್ಲಿ ಚುನಾವಣೆಗಳು ನಡೆಯಬಹುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೂಚಿಸಿದ್ದರು. ಈ ನಡುವೆ ಬ್ರಿಟನ್ ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಸಮೀಕ್ಷೆಯೊಂದು ಹೊರಬಿದ್ದಿದ್ದು, ಪ್ರಧಾನಿ ರಿಷಿ ಅವರ ಆತಂಕವನ್ನು ಹೆಚ್ಚಿಸಿದೆ. ಸಮೀಕ್ಷೆಯಲ್ಲಿ ಆಘಾತಕಾರಿ ಹೇಳಿಕೆ ಅಂಕಿ ಅಂಶಬಯಲಾಗಿದೆ. ಹಾಗಿದ್ದರೆ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಶ ಏನು ಇಲ್ಲಿದೆ ಮಾಹಿತಿ.
ಮುಂಬರುವ ಬ್ರಿಟನ್ ಚುನಾವಣೆಗಳಲ್ಲಿ ರಿಷಿ ಸುನಕ್ ಅವರಿಗೆ ಭಾರೀ ಹಿನ್ನಡೆ ಆಗಲಿದೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ. ಬ್ರಿಟಿಷ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ 18 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇದರ ಪ್ರಕಾರ, ಕನ್ಸರ್ವೇಟಿವ್ ಪಕ್ಷದ (Conservative Party) ಸೋಲು ನಿಶ್ಚಿತ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಸಮೀಕ್ಷೆಯಲ್ಲಿ ಹೇಳಿದ್ದೇನು?
ಬ್ರಿಟನ್‌ನಲ್ಲಿ ಅಧಿಕಾರ ನಡೆಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 326. ಸಮೀಕ್ಷೆಯ ಪ್ರಕಾರ ವಿರೋಧ ಪಕ್ಷ 403ಕ್ಕೂ ಹೆಚ್ಚು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಅಲ್ಲದೆ ಬ್ರಿಟನ್ ಹಾಲಿ ಪ್ರಧಾನಿ ಸುನಕ್ ಅವರ ಜನಪ್ರೀಯತೆ ಕಡಿಮೆ ಆಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಮಾಜಿ ಬ್ರೆಕ್ಸಿಟ್ ಕಾರ್ಯದರ್ಶಿ ಡೇವಿಡ್ ಫ್ರಾಸ್ಟ್ ಈ ಸಮೀಕ್ಷೆಯ ಬಗ್ಗೆ ತುಟಿ ಬಿಚ್ಚಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಸುನಕ್ ಸಂಪುಟ ಸಚಿವರು ಸೋಲಿಗೆ ಶರಣಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾವರೆಂದರೆ ಚಾನ್ಸೆಲರ್ ಜೆರೆಮಿ ಹಂಟ್, ಸಚಿವ ಮಿಚೆಲ್ ಡೊನ್ನೆಲನ್ ಮತ್ತು ಸಚಿವ ಮೈಕೆಲ್ ಗೋವ್ ಸೋಲು ಕಾಣಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಯೂಗೋವ್ 18,000 ಜನರ ಸಮೀಕ್ಷೆಯು ಅಂಕಿಅಂಶಗಳನ್ನು ಬುಧವಾರ ಬಿಡುಗಡೆ ಗೊಳಿಸಿದೆ. ಈ ಸಮೀಕ್ಷೆಯ ಪ್ರಕಾರ ಸುನಕ್ ಸೋಲು 1997ರಲ್ಲಿ ಮಾಜಿ ಪ್ರಧಾನಿ ಜಾನ್ ಮೇಜರ್ ಕಂಡ ಸೋಲಿಗೂ ಹೀನಾಯವಾಗಿರುತ್ತದೆ ಎಂದು ತಿಳಿಸಿದೆ. ಟೋನಿ ಬ್ಲೇರ್ ನೇತೃತ್ವದ ಲೇಬರ್ ಪಾರ್ಟಿ ಅವರನ್ನು ಸೋಲಿಸಿದಾಗ. ಆಗ ಟೋರಿ ಪಕ್ಷ 165 ಸ್ಥಾನಗಳನ್ನು ಗೆದ್ದಿತ್ತು. ಅದೇ ಸಮಯದಲ್ಲಿ, 659 ಹೌಸ್ ಆಫ್ ಕಾಮನ್ಸ್ ಸ್ಥಾನಗಳಲ್ಲಿ 418 ಸ್ಥಾನಗಳನ್ನು ಬ್ಲೇರ್ ಗೆದ್ದರು. ಬಹುತೇಕ ಸಮೀಕ್ಷೆಗಳಲ್ಲಿ ಲೇಬರ್ ಪಕ್ಷವು ಕನ್ಸರ್ವೇಟಿವ್‌ಗಳಿಗಿಂತ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ.
ದಿ ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆ ಏನು ಹೇಳಿತ್ತು?
ಯೂಗೋವ್‌ಗಿಂತ ಮೊದಲು, ದಿ ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆ ಕೂಡ ಇತ್ತೀಚೆಗೆ ತನ್ನ ಸಮೀಕ್ಷೆಯ ವರದಿಯನ್ನು ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಪ್ರಧಾನಿ ಸುನಕ್ ಅವರ ತಮ್ಮ ಕುರ್ಚಿಯಿಂದ ಇಳಿಯಬೇಕಾಗುತ್ತದೆ ಎಂದು ತಿಳಿಸಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲು ಎದುರಾಗಬಹುದು ಎಂದು ಈ ಸಮೀಕ್ಷೆಯಲ್ಲೂ ಹೇಳಲಾಗಿದೆ. ದಿ ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆಗೆ 15,029 ಜನರ ಅಭಿಪ್ರಾಯವನ್ನು ತೆಗೆದುಕೊಂಡಿದೆ. ಸಮೀಕ್ಷೆಯನ್ನುವರದಿಯಲ್ಲಿ, ಲೇಬರ್ ಪಕ್ಷವು 45 ಪ್ರತಿಶತ ಮತಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ ಎಂದು ದಿ ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆ ತಿಳಿಸಿತ್ತು.












Click it and Unblock the Notifications