ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ
ಲಾಸ್ ಏಂಜಿಲಿಸ್, ಏಪ್ರಿಲ್ 18 : ಪ್ರತಿಷ್ಠಿತ ಸೈಮನ್ ವೀಸೆನ್ತಾಲ್ ಕೇಂದ್ರದ 'ಅಂತಾರಾಷ್ಟ್ರೀಯ ನಾಯಕತ್ವ' ಪ್ರಶಸ್ತಿಯನ್ನು ಆರ್ಟ್ ಆಫ್ ಲಿವಿಂಗ್ ನ ಗುರುದೇವ್ ಶ್ರೀ ಶ್ರೀ ರವಿಶಂಕರರಿಗೆ ಲಾಸ್ ಏಂಜಿಲಿಸ್ನ ಮ್ಯೂಸಿಯಂ ಆಫ್ ಟಾಲರೆನ್ಸ್ನಲ್ಲಿ ನೀಡಲಾಯಿತು.
ಈ ಕೇಂದ್ರದ ಪ್ರಶಸ್ತಿಯನ್ನು ಹಿಂದೆ ಕೆನಡಾದ ಮಾಜಿ ಪ್ರಧಾನಿ ಸ್ಟೀಫೆನ್ ಹಾರ್ಪರ್ ಮತ್ತು ಟಾಮ್ ಕ್ರೂಸ್ ರವರಿಗೂ ನೀಡಲಾಗಿದೆ. ಮಾನವ ಘನತೆ, ಅಂತರ್ ಧಾರ್ಮಿಕ ಸಂಬಂಧಗಳು ಮತ್ತು ಜನರ ನಡುವಿನ ಸಹನೆಯನ್ನು ಹೆಚ್ಚಿಸಲು ಗುರುದೇವರು ಶ್ರಮಿಸಿದ ಕಾರಣದಿಂದಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ನ ಅಸೊಸಿಯೇಟ್ ಡೀನ್ ಆದ ಅಬ್ರಹಾಂ ಕೂಪರ್ರವರು, "ಶ್ರೀ ಶ್ರೀ ರವಿಶಂಕರರು ಕೇವಲ ಸ್ನೇಹಿತರಲ್ಲದೆ, ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಮತ್ತು ಸಹನೆಯನ್ನು ಹರಡುವಲ್ಲಿ ನಮ್ಮ ಸಹಭಾಗಿಯಾಗಿದ್ದಾರೆ" ಎಂದು ಗುರುದೇವರಿಗೆ ಪ್ರಶಸ್ತಿಯನ್ನು ನೀಡಿ ಪ್ರಶಂಸೆಯ ಮಾತುಗಳನ್ನಾಡಿದರು.

ಈ ಸಮಾರಂಭದಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ಸಂಸದರು, ನಗರಪೌರರು, ಕ್ಯಾಲಿಫೋರ್ನಿಯಾದ 28 ನಗರಗಳ ಕೌನ್ಸಿಲ್ ಸದಸ್ಯರು, ಜಪಾನ್, ಸ್ವೀಡನ್, ಮ್ಯಾನ್ಮಾರ್, ಬ್ರೆಜಿಲ್, ಮೆಕ್ಸಿಕೊ, ಜರ್ಮನಿ, ನೆದರ್ಲ್ಯಾಂಡ್, ಸ್ವಿಟ್ಜರ್ಲೆಂಡ್, ಅಜರ್ಬೈಜಾನ್, ಇಟಲಿ, ಜೆಕ್ ರಿಪಬ್ಲಿಕ್ ಮತ್ತು ತುರ್ಕಿಯ ರಾಯಭಾರಿಗಳು ಉಪಸ್ಥಿತರಿದ್ದರು.

ಕ್ಯಾಲಿಫೋರ್ನಿಯಾದ ರಾಜ್ಯ ಅಸೆಂಬ್ಲಿಯ ಸ್ಪೀಕರರು ಗುರುದೇವಲರಿಗೆ ಸನ್ಮಾನ ಔತಣಕೂಟವನ್ನು ಏರ್ಪಡಿಸಿದ್ದರು ಮತ್ತು ಆರ್ಟ್ ಆಫ್ ಲಿವಿಂಗ್ ಕ್ಯಾಲಿಫೋರ್ನಿಯಾದಲ್ಲಿ ಮಾಡಿದ ಕೆಲಸಗಳಿಗಾಗಿ ಸಂಸತ್ತಿನ ಶ್ಲಾಘನಾ ಪತ್ರವನ್ನು ನೀಡಿದರು.












Click it and Unblock the Notifications