India China Meet: ಭಾರತ-ಚೀನಾ ಗಡಿ ವಿವಾದ ಇತ್ಯರ್ಥ?
ನವದೆಹಲಿ: ಭಾರತ-ಚೀನಾ ನಡುವಿನ ಗಡಿ ವಿವಾದಗಳ ನಡುವೆ, ಇದಕ್ಕೆಲ್ಲಾ ಒಂದು ಅಂತ್ಯ ಹಾಡಲು ಎರಡೂ ರಾಷ್ಟ್ರಗಳು ರಣತಂತ್ರ ರೂಪಿಸಿವೆ. ಇದೇ ಕಾರಣಕ್ಕೆ ಚೀನಾ ರಕ್ಷಣಾ ಸಚಿವರ ಭಾರತ ಭೇಟಿ ಜಗತ್ತಿನ ಗಮನ ಸೆಳೆಯುವಂತೆ ಮಾಡಿದೆ. ಹಾಗಾದರೆ ಚೀನಾ ರಕ್ಷಣಾ ಸಚಿವರು ಭಾರತದ ಜೊತೆ ಯಾವೆಲ್ಲಾ ವಿಚಾರಗಳನ್ನು ಚರ್ಚಿಸಲಿದ್ದಾರೆ? ಎಂಬುದನ್ನ ಇಲ್ಲಿ ತಿಳಿಯೋಣ.
ಭಾರತ ಮತ್ತು ಚೀನಾ (India China Meet) ಎರಡೂ ನೆರೆಯ ರಾಷ್ಟ್ರಗಳು. ಆದರೆ ಎರಡೂ ರಾಷ್ಟ್ರಗಳ ನಡುವೆ ಪದೇಪದೆ ಜಗಳ ನಡೆಯುತ್ತಲೇ ಬಂದಿದೆ. ಭಾರತ-ಚೀನಾ ಕಿತ್ತಾಟ ಏಷ್ಯಾದಲ್ಲಿ ಮಹಾಯುದ್ಧದ ಆತಂಕವನ್ನ ಆಗಾಗ ಸೃಷ್ಟಿಮಾಡ್ತಿದೆ. ಅದ್ರಲ್ಲೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಚೀನಿ ಸೈನಿಕರಿಗೆ 2020ರಲ್ಲಿ ಭಾರತೀಯ ಸೈನಿಕರು ಸರಿಯಾಗಿ ಬುದ್ಧಿ ಕಲಿಸಿದ್ದರು. ಹತ್ತಾರು ಚೀನಿ ಸೈನಿಕರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದ 3 ವರ್ಷಗಳ ಬಳಿಕ ಚೀನಾ ರಕ್ಷಣಾ ಸಚಿವರ ಭಾರತ ಭೇಟಿ ಪ್ರಪಂಚದ ಗಮನ ಸೆಳೆದಿದೆ.

ಫಿನಿಷ್ ಆಗುತ್ತಾ ಗಡಿ ಫೈಟಿಂಗ್?
ಏಪ್ರಿಲ್ 27 & 28ರಂದು ನವದೆಹಲಿಯಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್‌ಫು ಭಾರತಕ್ಕೆ ಆಗಮಿಸಲಿದ್ದಾರೆ. ಇದೇ ಸಂದರ್ಭವನ್ನು ಗಡಿ ಗಲಾಟೆ ಬಗ್ಗೆ ಚರ್ಚೆ ನಡೆಸಲು ಚೀನಾ ಬಳಸಿಕೊಳ್ಳುತ್ತಿದೆ. ಪೂರ್ವ ಲಡಾಖ್ ಬಿಕ್ಕಟ್ಟನ್ನು ಕೊನೆಗೊಳಿಸುವ ಬಗ್ಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚೀನಾ ರಕ್ಷಣಾ ಸಚಿವ ಲಿ ಶಾಂಗ್‌ಫು ಚರ್ಚೆ ನಡೆಸುತ್ತಾರೆ ಎಂದು ಈಗಾಗಲೇ ಚೀನಾ ತಿಳಿಸಿದೆ. ಹೀಗೆ ಎರಡೂ ರಾಷ್ಟ್ರಗಳ ನಡುವಿನ ಹಲವು ದಶಕಗಳ ಗಡಿ ಬಿಕ್ಕಟ್ಟು ಅಂತ್ಯಕಾಣುತ್ತಾ? ಎಂಬ ಕುತೂಹಲ ಹೆಚ್ಚಾಗಿದೆ.
ಅಮೆರಿಕ ಮಣಿಸುವ ತಂತ್ರದಲ್ಲಿ ಚೀನಾ?
ಡ್ರ್ಯಾಗನ್ ಚೀನಾಗೆ ಈಗ ಅಮೆರಿಕ ಜಾಗತಿಕ ಶತ್ರು. ಇದೇ ಕಾರಣಕ್ಕೆ ತನ್ನ ಅಕ್ಕಪಕ್ಕದ ಶತ್ರು ರಾಷ್ಟ್ರಗಳ ಜೊತೆ ರಾಜಿಗಾಗಿ ರಣತಂತ್ರ ರೂಪಿಸಿದೆ ಚೀನಾ. ಕೆಲವು ದಿನಗಳ ಹಿಂದಷ್ಟೇ ಫಿಲಿಪೈನ್ಸ್ ಜೊತೆಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ರಾಜಿ ಮಾಡಿಕೊಂಡಿತ್ತು ಚೀನಾ. ಇದೀಗ ಭಾರತದ ಜೊತೆಗೆ ಗಡಿ ವಿವಾದ ಬಗೆಹರಿಸಿಕೊಳ್ಳುವ ಮೂಲಕ, ಅಮೆರಿಕದ ವಿರುದ್ಧ ಒಂದುಗೂಡಿಸುವ ಪ್ರಯತ್ನ ನಡೆಸಿದೆ. ಹೀಗಾಗಿಯೇ ಗಡಿಯಲ್ಲಿ ಶಾಂತಿ ಕಾಪಾಡುವುದರ ಜೊತೆಗೆ, ಬಿಕ್ಕಟ್ಟಿನ ಕುರಿತು ತ್ವರಿಗತಿಯಲ್ಲಿ ನಿರ್ಧಾರ ಕೈಗೊಳ್ಳಲು ಎರಡೂ ದೇಶಗಳು ಒಪ್ಪಿಗೆ ನೀಡಿವೆ ಎಂದಿತ್ತು ಚೀನಾ.
ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ನಂತರ ಫಿಲಿಪೈನ್ಸ್ ಸೇನೆ ಜೊತೆಗೂ ಮಿಲಿಟರಿ ಡ್ರಿಲ್‌ಗೆ ಶುರು ಮಾಡಿತ್ತು. ಆದರೆ ಇದೇ ಸಮಯಕ್ಕೆ ಕಿಲಾಡಿ ಚೀನಾ, ಫಿಲಿಪೈನ್ಸ್ ಮನವೊಲಿಸಿ ದೊಡ್ಡಣ್ಣ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡಿತಾ? ಅನ್ನೋ ಡೌಟ್ ಶುರುವಾಗಿದೆ. ಜೊತೆಗೆ ಭಾರತದ ಜೊತೆಗೂ ರಾಜಿಗೆ ಮುಂದಾಗಿದೆ.

ಒಟ್ಟಾರೆ ಭಾರತದ ಗಡಿಯಲ್ಲಿ ಪದೇಪದೆ ಕಿರಿಕ್ ಮಾಡುತ್ತಿರುವ ಚೀನಾ ಇದೀಗ ಭಾರತದ ಸ್ನೇಹ ಬಯಸಿ ಒಂದು ಹೆಜ್ಜೆ ಮುಂದೆ ಇಟ್ಟಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಭಾರತ ಕೂಡ ಗಡಿ ವಿಚಾರದಲ್ಲಿ ಚರ್ಚೆಗೆ ಮುಂದಾಗಿದೆ. ಹಾಗಾದರೆ ಚೀನಾ ರಕ್ಷಣ ಸಚಿವರ ಈ ಭೇಟಿ ಹೊಸ ಇತಿಹಾಸ ಬರೆಯತ್ತಾ? ಸದಾ ಭಾರತದ ಜೊತೆ ಕಿರಿಕ್ ಮಾಡುವ ಚೀನಾ ಇನ್ನಾದರೂ ಸೈಲೆಂಟ್ ಆಗುತ್ತಾ? ಎಂಬುದನ್ನ ಕಾದು ನೋಡಬೇಕು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications