ಬಹ್ರೇನ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ರಾಹುಲ್ ಗಾಂಧಿ ಭಾಷಣ

Subscribe to Oneindia Kannada

ಮನಾಮ (ಬಹ್ರೇನ್), ಜನವರಿ 8: ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಬಹ್ರೇನ್ ಪ್ರವಾಸದಲ್ಲಿದ್ದಾರೆ. ಅವರಿಂದು ಬಹ್ರೇನ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಅವರು ತಮ್ಮ ಚೊಚ್ಚಲ ವಿದೇಶಿ ಪ್ರವಾಸವನ್ನು ಕೊಲ್ಲಿ ರಾಷ್ಟ್ರ ಬಹ್ರೇನ್ ನಿಂದ ಆರಂಭಿಸಿದ್ದಾರೆ.

ಇದಕ್ಕೂ ಮೊದಲು ನಿನ್ನೆ ರಾತ್ರಿ ಬಹ್ರೇನ್ ತಲುಪಿದ ರಾಹುಲ್ ಗಾಂಧಿಯವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.

Rahul Gandhi arrives in Bahrain to address a convention of NRIs

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಮಿಲಿಂದ ದೇವೋರಾ, ಮಧುಗೌಡ್ ಭಕ್ಷಿ ಮತ್ತು ಉದ್ಯಮಿ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿಯವರಿಗೆ ಆದರದ ಸ್ವಾಗತ ಕೋರಿದರು.ಪ್ರವಾಸದ ವೇಳೆ ರಾಹುಲ್ ಗಾಂಧಿ ಬಹ್ರೇನ್ ರಾಜ ಸಲ್ಮಾನ್ ಬಿನ್ ಹಮಾಸ್ ಅಲ್ ಖಲೀಫಾರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಜತೆಗೆ ಇಂದು 'ದಿ ಗಲ್ಫ್ ಹೊಟೇಲ್'ನಲ್ಲಿ ರಾತ್ರಿ 8.30 ನಿಮಿಷಕ್ಕೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ವಿದೇಶಿ ಭೇಟಿಯಾಗಿರುವುದರಿಂದ ರಾಹುಲ್ ಭಾಷಣವನ್ನು ಕುತೂಹಲದ ಕಣ್ಣುಗಳು ಎದುರು ನೋಡುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress President Rahul Gandhi is in Bahrain on a one-day trip. This will be his first foreign trip after becoming the Congress chief, where he will address a convention of NRIs and meet the Gulf country's Prime Minister Prince Salman bin Hamas Al-Khalifa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ