ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ!
ಕ್ಯಾಲಿಫೋರ್ನಿಯಾ, ಅಕ್ಟೋಬರ್ 09: ಸಿಖ್ ಸಮುದಾಯಕ್ಕೆ ಸೇರಿದ ಐಟಿ ಉದ್ಯೋಗಿಯೊಬ್ಬರ ಮೇಲೆ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಅಷ್ಟೇ ಅಲ್ಲದೇ ಅವರ ತಲೆಗೂದಲು ಕತ್ತರಿಸುವ ಮೂಲಕ ಧಾರ್ಮಿಕ ಭಾವನಗಳಿಗೆ ಧಕ್ಕೆ ಉಂಟುಮಾಡಲಾಗಿದೆ. ನಾಗರಿಕ ಹಕ್ಕು ಸಂಸ್ಥೆಗಳು ಈ ದ್ವೇಷ ಅಪರಾಧ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿವೆ.[ಸಿಖ್ಖರ ಬಹುಕಾಲದ ಧಾರ್ಮಿಕ ಬೇಡಿಕೆಗೆ ಅಮೆರಿಕದಿಂದ ಸಮ್ಮತಿ]

ಸೆಪ್ಟೆಂಬರ್ 25ರಂದು 41 ವರ್ಷ ವಯಸ್ಸಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ಮಾನ್ ಸಿಂಗ್ ಖಾಸ್ಲಾ ತನ್ನ ಕಚೇರಿಯಿಂದ ಮನೆಗೆ ಕಾರು ಚಲಾಯಿಸಿಕೊಂಡು ಮನೆಗೆ ಹೋಗುವಾಗ ಹಲ್ಲೆ ನಡೆಸಲಾಗಿದೆ.
ಐದಾರು ಜನ ಯುವಕರ ಗುಂಪು ಬಿಯರ್ ಬಾಟಲ್ ಗಳನ್ನ ಎಸೆದು ಕಿಚಾಯಿಸಿದ್ದಾರೆ. ಸಾಲದೆಂಬಂತೆ ಅವರ ಪಗಡಿಯನ್ನು ಬಿಚ್ಚಿ ತಲೆಗೂದಲನ್ನು ಕತ್ತರಿಸಿದ್ದಾರೆ.
ಹಲ್ಲೆಯಿಂದಾಗಿ ಖಾಸ್ಲಾ ಅವರ ಮುಖ ಮತ್ತು ಕಣ್ಣು, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಬಂಧ ಖಾಸ್ಲಾ ಮತ್ತು ಸಿಖ್ ಸಂಘಟನೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.












Click it and Unblock the Notifications