ಏರ್‌ಪೋರ್ಟ್ ಪುನಾರಂಭ ಕುರಿತು ಚರ್ಚಿಸಲು ಕತಾರ್ ತಾಂತ್ರಿಕ ತಂಡ ಕಾಬೂಲ್‌ಗೆ ಆಗಮನ
ದೋಹಾ, ಸೆಪ್ಟೆಂಬರ್ 01: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಹಲವು ದಾಳಿಗಳು ನಡೆದುಹೋಗಿವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ತಾಂತ್ರಿಕ ತಂಡವನ್ನು ಹೊತ್ತ ಕತಾರ್ ವಿಮಾನ ಬುಧವಾರ ಕಾಬೂಲ್‌ಗೆ ಬಂದಿಳಿಯಿತು.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸುವ ಬಗ್ಗೆ ಚರ್ಚಿಸಲು ತಾಂತ್ರಿಕ ತಂಡವನ್ನು ಹೊತ್ತ ಕತಾರ್ ಜೆಟ್ ಇಂದು ಬೆಳಗ್ಗೆ ಕಾಬೂಲ್‌ಗೆ ಬಂದಿಳಿದಿದೆ ಎಂದು ಮೂಲಗಳು ಎಎಫ್‌ಪಿಗೆ ತಿಳಿಸಿವೆ.
123,000 ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳು ಮತ್ತು ಅಫ್ಘಾನಿಸ್ತಾನಗಳು ಮಂಗಳವಾರ ನಡೆದ ಏರ್‌ಲಿಫ್ಟ್ ಕಾರ್ಯಾಚರಣೆಯಲ್ಲಿ ದೇಶವನ್ನು ತೊರೆದಿದ್ದಾರೆ. ಆದರೆ ಇನ್ನೂ ಹೆಚ್ಚಿನವರು ನಿರ್ಗಮಿಸಲು ಸಾಧ್ಯವಾಗದೇ ಹತಾಶರಾಗಿದ್ದಾರೆ.

"ತಾಂತ್ರಿಕ ನೆರವು ನೀಡುವ ಬಗ್ಗೆ ಯಾವುದೇ ಅಂತಿಮ ಒಪ್ಪಂದಕ್ಕೆ ಬಂದಿಲ್ಲವಾದರೂ, ಕತಾರ್‌ನ ತಾಂತ್ರಿಕ ತಂಡವು ಇತರರ ಕೋರಿಕೆಯ ಮೇರೆಗೆ ಈ ಚರ್ಚೆಯನ್ನು ಆರಂಭಿಸಿದೆ. "ಭದ್ರತೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾತುಕತೆಗಳು ಇನ್ನೂ ನಡೆಯುತ್ತಿವೆ." ಮಾನವೀಯ ನೆರವು ಒದಗಿಸಲು ವಿಮಾನಯಾನವನ್ನು ಪುನರಾರಂಭಿಸುವುದು ಮತ್ತು ಸ್ಥಳಾಂತರಿಸುವ ಪ್ರಯತ್ನಗಳನ್ನು ಪುನರಾರಂಭಿಸುವುದು ಈ ತಾಂತ್ರಿಕ ತಂಡದ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಸಂದರ್ಭ ಒಸಾಮಾ ಬಿನ್ ಲ್ಯಾಡನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ಸಮರ ಸಾರಿದ್ದ ಅಮೆರಿಕ ಇದೇ ಉದ್ದೇಶದಿಂದ ಅಫ್ಘಾನಿಸ್ತಾನ ರಣರಂಗವನ್ನು ಪ್ರವೇಶಿಸಿತ್ತು.
ಅಮೆರಿಕ ರಕ್ಷಣೆ ನಡುವೆಯೂ ದೇಶದಲ್ಲಿ ಶಾಂತಿ ಸ್ಥಾಪನೆಗೆ ನಾವು ಬಿಡೆವು ಎನ್ನುವುದು ಉಗ್ರಸಂಘಟನೆಗಳ ನಿಲುವಾಗಿತ್ತು. ಇನ್ನೊಂದರ್ಥದಲ್ಲಿ ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದರೆ ತಾಲಿಬಾನ್ ಅಧಿಕಾರಕ್ಕೆ ಬರಬೇಕು ಎಂದು ಪರೋಕ್ಷವಾಗಿ ತಿಳಿಸಿದ್ದವು.
ತಾಲಿಬಾನ್ ಜೊತೆಗೆ ಹಲವು ಸುತ್ತುಗಳ ಶಾಂತಿ ಮಾತುಕತೆ ನಡೆದ ಬಳಿಕ ಅಮೆರಿಕ ದೇಶದಿಂದ ಕಾಲ್ತೆಗೆದರೆ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಷರತ್ತು ವಿಧಿಸಿದರು. ಅದರಂತೆ ತಾನು ದೇಶದಿಂದ ಕಾಲ್ತೆಗೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಆಮೆರಿಕ ಕೂಡಾ 20 ವರ್ಷಗಳ ದೀರ್ಘ ಯುದ್ಧದಿಂದ ಹೈರಾಣಾಗಿತ್ತು. ಅದರ ಸೇನಾಬಲ, ಹಣ ಬಲ ಎಲ್ಲವನ್ನೂ ಅಫ್ಘಾನಿಸ್ತಾನಕ್ಕಾಗಿ ವ್ಯಯಿಸಿತ್ತು.
ಅಮೆರಿಕದ ಕಟ್ಟ ಕಡೆಯ ಸೇನಾ ತುಕಡಿ ದೇಶವನ್ನು ತೊರೆದಿರುವುದನ್ನು ತಾಲಿಬಾನ್ ಸ್ವಾಗತಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನ್ 'ದೇಶಪ್ರೇಮಿಗಳಿಗೆ, ಮುಜಾಹಿದೀನ್ ಗಳಿಗೆ ಅಭಿನಂದನೆಗಳು. ಇಂದು ಎಲ್ಲಾ ವಿದೇಶಿ ಸೈನಿಕರು ದೇಶದ ಪವಿತ್ರ ನೆಲದಿಂದ ಕಾಲ್ತೆಗೆದಿದ್ದಾರೆ.'ಎಂದು ಬರೆದುಕೊಂಡಿದೆ.
ಆಗ ದೇಶವನ್ನು ಆಳುತ್ತಿದ್ದ ತಾಲಿಬಾನ್ ಅಲ್ ಖೈದಾ ನಾಯಕರಿಗೆ ಆಶ್ರಯ ನೀಡಿತ್ತು. ತನ್ನ ದೇಶದಲ್ಲಿ ಮೋಸ್ಟ್ ವಾಂಟೆಡ್ ಉಗ್ರರಿಗೆ ತಾಲಿಬಾನ್ ಆಶ್ರಯ ನೀದಿದ್ದನ್ನು ಸಹಿಸದ ಅಮೆರಿಕ ತಾಲಿಬಾನ್ ವಿರುದ್ಧ ಕಾದಾಡಿ ಅದನ್ನು ದೇಶದಿಂದ ಹೊಡೆದೋಡಿಸಿತ್ತು. ಅಲ್ಲದೆ ತನಗೆ ಬೇಕಾದ ಆಫ್ಘನ್ ನಾಯಕರನ್ನು ಒಳಗೊಂಡ ಸರ್ಕಾರವನ್ನು ಪ್ರತಿಷ್ಟಾಪನೆ ಮಾಡಿತ್ತು.












Click it and Unblock the Notifications