ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯನ್ನು ನುಂಗಿದ ಹೆಬ್ಬಾವು: ಮೃತದೇಹ ತೆಗೆಯಲು ಕುಟುಂಬಸ್ಥರ ಹರಸಾಹಸ

|
Google Oneindia Kannada News

ಜಂಬಿ ಪ್ರಾಂತ್ಯದಿಂದ (ಇಂಡೋನೇಷಿಯಾ) ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 22 ಅಡಿ ಉದ್ದದ ದೈತ್ಯ ಹೆಬ್ಬಾವು 54 ವರ್ಷದ ಮಹಿಳೆಯನ್ನು ಜೀವಂತವಾಗಿ ನುಂಗಿದ ಭಯಾನಕ ಘಟನೆ ನಡೆದಿದೆ. ಮಹಿಳೆ ಶುಕ್ರವಾರ ಕೆಲ ವಸ್ತುಗಳನ್ನು ತರಲು ಕಾಡಿಗೆ ಹೋಗಿದ್ದರು. ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಹೆಬ್ಬಾವು ಪತ್ತೆಯಾಗಿದ್ದು, ಹೊಟ್ಟೆ ಉಬ್ಬಿರುವುದು ಕಂಡುಬಂದಿದೆ. ಇದಾದ ನಂತರ ಹೆಬ್ಬಾವನ್ನು ಕೊಂದು ಮಹಿಳೆಯ ಮೃತದೇಹವನ್ನು ಹೊರತೆಗೆಯಲಾಗಿದೆ.

ಡೈಲಿಮೇಲ್ ವರದಿಯ ಪ್ರಕಾರ, 54 ವರ್ಷದ ಮಹಿಳೆ ಜರ್ರಾ ಶುಕ್ರವಾರ ರಾತ್ರಿ ಜಂಗಲ್ ರಬ್ಬರ್ ತರಲು ಕಾಡಿಗೆ ಹೋಗಿದ್ದರು. ಆ ನಂತರ ವಾಪಸ್ ಬಂದಿರಲಿಲ್ಲ. ಸ್ಥಳೀಯರು ಹುಡುಕಾಟ ಆರಂಭಿಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ನಂತರ ಕಾಡಿನಲ್ಲಿಯೇ ದೈತ್ಯ ಹೆಬ್ಬಾವು ಕಾಣಿಸಿಕೊಂಡಿತು. ಹೆಬ್ಬಾವು ಪೊದೆಗಳ ನಡುವೆ ವಿಶ್ರಾಂತಿ ಪಡೆಯುತ್ತಿತ್ತು. ಇದನ್ನು ಕಂಡು ಮಹಿಳೆಯನ್ನು ಹುಡುಕುತ್ತಿದ್ದವರಿಗೆ ಅನುಮಾನ ವ್ಯಕ್ತವಾಗಿದೆ. ಹೆಬ್ಬಾವಿನ ಹೊಟ್ಟೆ ಉಬ್ಬಿಕೊಂಡು ಮಹಿಳೆಯ ದೇಹ ಗಾತ್ರ ಹೆಬ್ಬಾವಿನ ಹೊಟ್ಟೆಯ ಹೊರಭಾಗದಲ್ಲಿ ಕಂಡು ಬರುತ್ತಿತ್ತು. ಬಳಿಕ ಗ್ರಾಮಸ್ಥರು ಜರ್ರಾಳನ್ನು ಹೆಬ್ಬಾವೇ ನುಂಗಿದೆ ಎಂದು ಅದನ್ನು ಕೊಂದು ಆಕೆಯನ್ನು ಮೇತದೇಹವನ್ನು ಹೊರ ತೆಗೆದಿದ್ದಾರೆ.

Python swallows woman: Family scrambles to remove dead body

ಮಹಿಳೆ ಒಂಟಿಯಾಗಿ ಕಾಡಿಗೆ ಹೋಗಿದ್ದಳು. ಹೆಬ್ಬಾವು ಮಹಿಳೆಯನ್ನು ನುಂಗುತ್ತಿರುವುದನ್ನು ಗ್ರಾಮದಲ್ಲಿ ಯಾರೂ ನೋಡಿಲ್ಲ. ಹೆಬ್ಬಾವು ಮಹಿಳೆಯನ್ನು ಜೀವಂತವಾಗಿ ನುಂಗಿತ್ತು. ಹೆಬ್ಬಾವು ಮಹಿಳೆಯನ್ನು ಹೇಗೆ ನುಂಗುತ್ತದೆ ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ಇದನ್ನು ಕಂಡು ಕಾಡಿನಲ್ಲಿ ಜನಸಾಗರವೇ ನೆರೆದಿತ್ತು. ಬಳಿಕ ಸ್ಥಳೀಯರು ಹೆಬ್ಬಾವನ್ನು ಕೊಂದು ಹಾಕಿದ್ದಾರೆ. ನಂತರ ಹಾವಿನ ಹೊಟ್ಟೆಯನ್ನು ಕತ್ತರಿಸಿ ಮಹಿಳೆಯ ಶವವನ್ನು ಹೊರತೆಗೆಯಲಾಯಿತು.

ಜನರಲ್ಲಿ ಹೆಬ್ಬಾವಿನ ಆತಂಕ:-

ಅಧಿಕಾರಿಗಳ ಪ್ರಕಾರ, ಮಹಿಳೆಯ ಕುಟುಂಬದವರು ಕಾಣೆಯಾದ ವರದಿಯನ್ನು ದಾಖಲಿಸಿದ್ದಾರೆ. ಸ್ಥಳೀಯರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ಮಹಿಳೆಯ ದೇಹವನ್ನು ಹೊರತೆಗೆದಿದ್ದಾರೆ. ಮಹಿಳೆಯ ಸಾವಿನ ನಂತರ ಆ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೂ ಮುನ್ನ 27 ಅಡಿಯ ದೈತ್ಯ ಹೆಬ್ಬಾವೊಂದು ಸಿಕ್ಕಿಬಿದ್ದಿತ್ತು. ಎರಡು ಮೇಕೆಗಳನ್ನೂ ಹೆಬ್ಬಾವು ನುಂಗಿತ್ತು. ಇತ್ತೀಚೆಗೆ ಗ್ರಾಮದಲ್ಲಿ ಹಲವು ದೈತ್ಯ ಹೆಬ್ಬಾವುಗಳು ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂಡೋನೇಷ್ಯಾ ಮತ್ತು ಆಗ್ನೇಯ ಏಷ್ಯಾದ ಇತರ ಭಾಗಗಳಲ್ಲಿ ಹೆಬ್ಬಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಹೆಬ್ಬಾವು ತನ್ನ ಬೇಟೆಯನ್ನು ಹತ್ತಾರು ಚೂಪಾದ ಹಲ್ಲುಗಳಿಂದ ಹಿಡಿಯುತ್ತದೆ. ನಂತರ ಅದನ್ನು ಸಂಪೂರ್ಣವಾಗಿ ನುಂಗುವ ಮೊದಲು ಉಸಿರುಗಟ್ಟಿ ಸಾಯುತ್ತದೆ.

English summary
A 54-year-old woman was swallowed alive by a 22-foot-long giant python in an Indonesian jungle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X