Ukraine War: ಉಕ್ರೇನ್ ಸಂಸತ್‌ಗೆ ದಿಢೀರ್ ಚುನಾವಣೆ ನಡೆಸಲು ತಯಾರಿ?

ಉಕ್ರೇನ್ ದೇಶದಲ್ಲಿ ಎಲ್ಲವೂ ಹಾಳಾಗಿ ಹೋಗಿದೆ, ಹಾಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಡಿಕೊಂಡ ಎಡವಟ್ಟುಗಳು ಉಕ್ರೇನ್ ದೇಶದ ಇಂದಿನ ಈ ಪರಿಸ್ಥಿತಿಗೆ ಕಾರಣ ಎನ್ನುವ ಭಾರಿ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಅಮೆರಿಕ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ. ಇಂತಹ ಸಂದಿಗ್ಧ ಸಮಯದಲ್ಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಸ ಬಾಂಬ್ ಇಟ್ಟಿದ್ದಾರೆ!

ರಷ್ಯಾ ರೊಚ್ಚಿಗೆದ್ದಿದ್ದು, ಉಕ್ರೇನ್ ವಿರುದ್ಧ ಯುದ್ಧ ನಿಂತರೂ ದ್ವೇಷ ಕಡಿಮೆ ಆಗುವುದಿಲ್ಲ. ಉಕ್ರೇನ್ ಸೇನೆ ರಷ್ಯಾ ಎದುರು ಇವತ್ತು ಶರಣಾಗುತ್ತೆ, ನಾಳೆ ಶರಣಾಗುತ್ತದೆ ಅಂತಾ ಜಗತ್ತೇ ಈಗ ಕಾಯುತ್ತಿದೆ. ಈಗಾಗಲೇ ಒಟ್ಟು ಸುಮಾರು 1,00,000 ಜನ ಮೃತಪಟ್ಟಿದ್ದಾರೆ ಎಂಬ ಆರೋಪ ಇದೆ. ಇನ್ನೊಂದು ಕಡೆ ರಷ್ಯಾ ಕೊಡ್ತಾ ಇರುವ ಏಟಿಗೆ ಈಗಾಗಲೇ ಭಾಗಶಃ ಉಕ್ರೇನ್ ನೆಲ ನಲುಗಿ ಹೋಗಿದೆ. ಪರಿಸ್ಥಿತಿ ಕೈಮೀರಿ ಯಾವ ಕ್ಷಣದಲ್ಲಿ ಈ ಯುದ್ಧ 3ನೇ ಮಹಾಯುದ್ಧವಾಗುತ್ತೋ? ಎಂಬ ಭಯ ಕಾಡುತ್ತಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸೋಕೆ ಭರ್ಜರಿ ಡಿಮ್ಯಾಂಡ್ ಒಂದನ್ನ ಇಟ್ಟಿದ್ದಾರೆ.

Putin Urges Snap Elections in Ukraine Parliament Amid Ongoing Tensions

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನೆಗೆ?

ಹೌದು, ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರು ಶೀಘ್ರದಲ್ಲೇ ಉಕ್ರೇನ್ ಸಂಸತ್‌ಗೆ ಚುನಾವಣೆ ನಡೆಸಿ ಎಂದು ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ. ಈ ಮೂಲಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಹೊಸ ಶಾಕ್ ಕೊಟ್ಟಿದ್ದಾರೆ. ಹೀಗೆ 2024ರ ಮೇ ತಿಂಗಳಲ್ಲೇ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕಾರ ಅವಧಿ ಮುಕ್ತಾಯವಾಗಿದ್ದು, ಹೀಗಿದ್ದರೂ ಸುಮಾರು 1 ವರ್ಷದಿಂದ ಆಡಳಿತ ವಿಸ್ತರಣೆ ಮಾಡಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನುಬದ್ಧ ಆಡಳಿತ ಸ್ಥಾಪನೆಗೆ ವ್ಲಾದಿಮಿರ್ ಪುಟಿನ್ ಆಗ್ರಹಿಸಿದ್ದಾರೆ.

ತಾರ್ಕಿಕ ಅಂತ್ಯ ಕಾಣುತ್ತಾ ಯುದ್ಧ?

ರಷ್ಯಾ & ಉಕ್ರೇನ್ ಯುದ್ಧ ಈಗಲಾದರೂ ತಾರ್ಕಿಕ ಅಂತ್ಯವನ್ನ ಕಾಣಬೇಕಾದ ಅಗತ್ಯತೆ ಇದೆ. ಉಕ್ರೇನ್ ಸುಮ್ಮನೆ ಎಗರಾಡುತ್ತಿದೆ, ರಷ್ಯಾ ವಿರುದ್ಧ ಗೆಲ್ಲಲು ಆಗಲ್ಲ ಅಂತಾ ಗೊತ್ತಿದ್ದರೂ ಹೀಗೆ ಉಕ್ರೇನ್ ಸೇನೆಯು ತನ್ನ ಕಿರಿಕ್ ಮುಂದುವರಿಸಿದೆ ಅಂತಾ ಸ್ವತಃ ಉಕ್ರೇನ್ ಪ್ರಜೆಗಳು ತಮ್ಮದೇ ದೇಶದ ಅಧ್ಯಕ್ಷನ ವರ್ತನೆ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಈ ಮಾತು ನಿಜ ಕೂಡ, ರಷ್ಯಾ ಸೇನೆ ಎದುರು ಉಕ್ರೇನ್ ಮಿಲಿಟರಿ ಹೋಲಿಕೆ ಮಾಡಲು ಕೂಡ ಅಸಾಧ್ಯ. ರಷ್ಯಾ ಸೇನೆ ಬಳಿ ಇಡೀ ಉಕ್ರೇನ್ ನಾಶ ಮಾಡಬಲ್ಲ ಅಸ್ತ್ರ ಇದ್ದು, ಇಷ್ಟು ದಿನ ಬರೀ ಕಿರಿಕ್ ಮಾಡಿಕೊಂಡು ಬಂದಿರುವ ಉಕ್ರೇನ್ ಕೂಡಲೇ ದಾರಿಗೆ ಬಂದು ಸಂಸತ್‌ಗೆ ಚುನಾವಣೆ ನಡೆಸಲಿ ಎಂಬ ಆಗ್ರಹ ಕೇಳಿ ಬಂದಿದೆ. ಆದರೆ ಮುಂದೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+