ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಟೋ ಬಳಿಯೂ ನ್ಯೂಕ್ಲಿಯರ್ ಅಸ್ತ್ರವಿದೆ; ರಷ್ಯಾಗೆ ಫ್ರಾನ್ಸ್ ಎಚ್ಚರಿಕೆ

|
Google Oneindia Kannada News

ವಾಶಿಂಗ್ಟನ್, ಫೆಬ್ರವರಿ 25: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾಗೆ ನ್ಯಾಟೋ ರಾಷ್ಟ್ರಗಳು ನಿರಂತರ ಎಚ್ಚರಿಕೆ ಸಂದೇಶ ರವಾನಿಸುತ್ತಿವೆ. ಪರಮಾಣು ಶಸ್ತ್ರಾಸ್ತ್ರಗಳ ದಾಳಿ ಬಗ್ಗೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿರುಗೇಟು ನೀಡಿದೆ.

ಉಕ್ರೇನ್ ನೆಲದಲ್ಲಿ ನ್ಯೂಕ್ಲಿಯರ್ ಬಾಂಬ್ ದಾಳಿ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಮಾತನಾಡುತ್ತಿದ್ದಾರೆ. ನ್ಯಾಟೋ ರಾಷ್ಟ್ರಗಳು ಕೂಡಾ ಪರಿಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ ಎಂಬುದನ್ನು ಪುಟಿನ್ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ವೆಸ್ ಲೆ ಡ್ರಿಯನ್ ಹೇಳಿದ್ದಾರೆ.

ಉಕ್ರೇನ್-ರಷ್ಯಾ ಬಿಕ್ಕಟ್ಟು: ಪುಟಿನ್ ಜೊತೆ ಮೋದಿ ಮಹತ್ವದ ಮಾತುಕತೆಉಕ್ರೇನ್-ರಷ್ಯಾ ಬಿಕ್ಕಟ್ಟು: ಪುಟಿನ್ ಜೊತೆ ಮೋದಿ ಮಹತ್ವದ ಮಾತುಕತೆ

ಉಕ್ರೇನ್ ವಿಷಯದಲ್ಲಿ ಮಧ್ಯಪ್ರವೇಶಿಸುವ ಯಾವುದೇ ರಾಷ್ಟ್ರವಾದರೂ ಸರಿ, ಅದು ಇತಿಹಾಸದಲ್ಲೇ ಕಂಡರಿಯದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪುಟಿನ್ ಎಚ್ಚರಿಕೆಯ ಕುರಿತು ಪ್ರಶ್ನಿಸಿದಾಗ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ವೆಸ್ ಲೆ ಡ್ರಿಯನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Putin Needs To Understand NATO Has Nuclear Weapons, French Foreign Minister Alert

ರಷ್ಯಾಗೆ ಎಚ್ಚರಿಕೆ ಸಂದೇಶ:

"ಹೌದು, ಅಟ್ಲಾಂಟಿಕ್ ಒಕ್ಕೂಟವು ಪರಮಾಣು ಮೈತ್ರಿಯನ್ನು ಹೊಂದಿದೆ ಎಂಬುದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಅರ್ಥಮಾಡಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ," ಎಂದರು.

ಪುಟಿನ್ ನೀಡಿದ ಎಚ್ಚರಿಕೆ ಏನು?

ಉಕ್ರೇನ್‌ನಲ್ಲಿ ಯುದ್ಧ ಘೋಷಿಸುವ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ದೂರದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ," ಎಂದು ಅವರು ಮಾಸ್ಕೋದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದರು. ಇದೇ ವೇಳೆ ರಷ್ಯಾದ ಸೇನಾ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಮಧ್ಯಪ್ರವೇಶ ಮಾಡಿದವರು ಎಂದೂ ನೋಡದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ರಷ್ಯಾ ದಾಳಿಯಲ್ಲಿ 137 ಮಂದಿ ಸಾವು:

Recommended Video

ಯುದ್ಧ ನಿಲ್ಲಿಸಿ ಎಂದ ಮೋದಿ ಮನವಿಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು? | Oneindia Kannada

ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಿಂದ 10 ಸೇನಾ ಅಧಿಕಾರಿಗಳು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, 316 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮೃತರಲ್ಲಿ ಒಡೆಸಾ ಪ್ರದೇಶದ ಝಿಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಯೋಧರು ಸೇರಿದ್ದಾರೆ, ಇದನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ. ಮಾಸ್ಕೋ ವಿರುದ್ಧ ಹೋರಾಡಲು ಕೀವ್ ಏಕಾಂಗಿಯಾಗಿ ಉಳಿದಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

English summary
Putin Needs To Understand NATO Has Nuclear Weapons, French Foreign Minister Jean-Yves Le Drian Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X