ರಷ್ಯಾದಲ್ಲಿ ರಾಜಕೀಯ ತುರ್ತು ಪರಿಸ್ಥಿತಿ..? ಪುಟಿನ್ ವಿರುದ್ಧ ರೊಚ್ಚಿಗೆದ್ದ ರಾಜಕಾರಣಿಗಳು..?

ರಷ್ಯಾದಲ್ಲಿ ರಾಜಕಾರಣಿಗಳು ಪುಟಿನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪುಟಿನ್ ಪಾಲಿನ ಶತ್ರು ಅಲೆಕ್ಸಿ ನವಲ್ನಿ ಸ್ಥಿತಿ ತೀರಾ ಗಂಭೀರವಾಗಿರುವ ಬೆನ್ನಲ್ಲೇ ಸ್ಥಳೀಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪೆರೋಲ್ ನಿಯಮ ಉಲ್ಲಂಘನೆ ಆರೋಪದಡಿ ಮಾಸ್ಕೋ ಕೋರ್ಟ್‌ನಿಂದ 2.5 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ಅಲೆಕ್ಸಿ ನವಲ್ನಿಯ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದೆ.

ನವಲ್ನಿ ಜೈಲಿನಲ್ಲೇ ಇತ್ತೀಚೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆದರೆ ನವಲ್ನಿ ಸತ್ಯಾಗ್ರಹ ಆರಂಭಿಸಿದ 1 ವಾರದಲ್ಲೇ ಕ್ಷಯ ರೋಗ ಕನ್ಫರ್ಮ್ ಆಗಿತ್ತು. ಈ ನಡುವೆ ನವಲ್ನಿಯ ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತಿವೆ ಎಂದು ಆತನ ಪರ ವಕೀಲರು ಆರೋಪಿಸಿದ್ದರು. ಇಷ್ಟೆಲ್ಲಾ ಗಂಭೀರ ಪರಿಸ್ಥಿತಿ ನಡುವೆ ಮತ್ತೊಂದು ಆಘಾತಕಾರಿ ವರದಿ ಹೊರಬಿದ್ದಿದೆ. ಯಾವುದೇ ಕ್ಷಣದಲ್ಲೂ ನವಲ್ನಿ ಸಾಯಬಹುದು ಎಂದು ಆತನ ವೈದ್ಯರು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ನವಲ್ನಿ ರಕ್ತ ಪರೀಕ್ಷೆ ನಡೆಸಿದಾಗ ಭಾರಿ ಪ್ರಮಾಣದಲ್ಲಿ ರಕ್ತದೊತ್ತಡ ಇರುವುದು ಪತ್ತೆಯಾಗಿದೆ. ಕಿಡ್ನಿಗೆ ಸಾಕಷ್ಟು ತೊಂದರೆಯಾಗಿದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಸದ್ಯದಲ್ಲೇ ಹೃದಯ ಸ್ತಂಭನ (Cardiac Arrest) ಉಂಟಾಗಬಹುದು ಎಂದಿದ್ದಾರೆ. ಹೀಗಾಗಿ ನವಲ್ನಿಗೆ ಉತ್ತಮ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

 ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

2020ರ ಆಗಸ್ಟ್ 20ರಂದು ಅಲೆಕ್ಸಿ ನವಲ್ನಿಗೆ ವಿಷಪ್ರಾಶನ ಮಾಡಿ ಹತ್ಯೆಗೈಯಲು ಯತ್ನಿಸಲಾಗಿತ್ತು. ಸುಮಾರು 4-5 ತಿಂಗಳ ಕಾಲ ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ನವಲ್ನಿ ರಷ್ಯಾಗೆ ವಾಪಸ್ ಆಗಿದ್ದರು. ಆದ್ರೆ ಇದೇ ನವಲ್ನಿಗೆ ಮುಳುವಾಗಿ ಪರಿಣಮಿಸಿತ್ತು. 5 ತಿಂಗಳ ಬಳಿಕ ಜನವರಿಯಲ್ಲಿ ಸ್ವದೇಶ ರಷ್ಯಾಗೆ ಮರಳಿದ್ದ ನವಲ್ನಿಗೆ ಆಘಾತ ಕಾದಿತ್ತು.

ರಷ್ಯಾಗೆ ಮರಳಿದ ತಕ್ಷಣವೇ ನವಲ್ನಿ ಬಂಧನವಾಗಿತ್ತು. ಚಿಕಿತ್ಸೆಗೆ ಜಮರ್ನಿ ತಲುಪಿದ್ದು ತಪ್ಪು, ಇದು ಪೆರೋಲ್ ನಿಯಮದ ಉಲ್ಲಂಘನೆ ಎಂದು ಮಾಸ್ಕೋ ಕೋರ್ಟ್ ನವಲ್ನಿಗೆ 2.5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಆದರೆ ಶಿಕ್ಷೆ ಅನುಭವಿಸುತ್ತಿರುವ ನವಲ್ನಿ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗುತ್ತಿದೆ.

ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವುದಕ್ಕೆ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ನೋವಿಚೋಕ್ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು.
ಆದರೆ 4 ತಿಂಗಳ ಬಳಿಕ ವಿಷ ಹಾಕಿದ್ದು ಟೀ ಒಳಗೆ ಅಲ್ಲ ನವಲ್ನಿಯ ಒಳ ಉಡುಪಿನಲ್ಲಿ ಎನ್ನಲಾಗಿತ್ತು.

ಇವತ್ತಿಗೂ ನವಲ್ನಿ ದೇಹಕ್ಕೆ ವಿಷ ಸೇರಿದ್ದು ಹೇಗೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಇನ್ನು ನವಲ್ನಿ ಆರೋಗ್ಯ ಹದಗೆಟ್ಟ ತಕ್ಷಣ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು.

ಜರ್ಮನಿಗೆ ನವಲ್ನಿ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ಡ್ರಾಮಾ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಆರಂಭದಲ್ಲಿ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಜರ್ಮನಿಯ ಸ್ವಯಂಸೇವಾ ಸಂಸ್ಥೆ ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನ ಕೂಡ ಕಳುಹಿಸಿತ್ತು. ಆದರೆ ಮೊದಲಿಗೆ ಇದಕ್ಕೆ ಒಪ್ಪದ ರಷ್ಯಾ, ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತ್ತು. ಕೊನೆಗೂ ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರ ಬಗ್ಗೆ ಸಿನಿಮಾ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ.

ಈ ಹಿಂದೆ ಕೂಡ ನವಲ್ನಿ ಮೇಲೆ ಡೆಡ್ಲಿ ಕೆಮಿಕಲ್ ಅಟ್ಯಾಕ್ ಆಗಿ ಬದುಕುಳಿದಿದ್ದರು, ಈಗ 'ನೋವಿಚೋಕ್' ಎಂಬ ಕಾರ್ಕೋಟಕ ವಿಷ ದೇಹ ಸೇರಿದ್ದರೂ ಬದುಕುಳಿದು ರಷ್ಯಾಗೆ ಮರಳಿರುವ ನವಲ್ನಿ ಮತ್ತೆ ಪುಟಿನ್ ಪಡೆ ವಿರುದ್ಧ ತೊಡೆ ತಟ್ಟಿದ್ದಾರೆ. ನವಲ್ನಿ ಜೈಲು ಸೇರಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದು ನವಲ್ನಿ ಬೆಂಬಲಿಗರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+