ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು!

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗ್ರಹಚಾರ ಕೆಟ್ಟಿದೆ ಅಂತಾ ಕಾಣುತ್ತಿದೆ. ಹೀಗಾಗಿ ಪದೇ ಪದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಇಮ್ರಾನ್ ಖಾನ್. ಅರೆರೆ ಈಗ ಏನಾಯ್ತು ಅಂದ್ರಾ? ಆಗೋದು ಏನ್ ಇದೆ ಹೇಳಿ, ತನ್ನ ಮನೆಯೊಳಗೆ ಉಗ್ರರನ್ನ ಸಾಕಿಕೊಂಡಿದ್ದ ಕಾರಣಕ್ಕೆ ಇಮ್ರಾನ್ ಮತ್ತೆ ಕಂಬಿ ಎಣಿಸೋದು ಬಹುತೇಕ ಗ್ಯಾರಂಟಿ ಆಗಿದ್ದು, ಪೊಲೀಸರ ಪಡೆಯೇ ಇಮ್ರಾನ್ ಮನೆಗೆ ನುಗ್ಗಿಬಿಟ್ಟಿದೆ.

ಅಂದಹಾಗೆ ಇಮ್ರಾನ್ ಖಾನ್ ಮನೆಯ ಹೊರಗೆ ಭಯೋತ್ಪಾದಕರಿಗೆ ವ್ಯವಸ್ಥೆ ಕಲ್ಪಿಸಿದ ಆರೋಪದ ನಡುವೆಯೇ ಮನೆಯೊಳಗೂ ಸರ್ಚ್ ಮಾಡಲು ಕೆಲ ಗಂಟೆಗಳ ಹಿಂದೆ ಒಪ್ಪಿಗೆ ಸಿಕ್ಕಿತ್ತು. ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ನಿವಾಸದಲ್ಲಿ ಶೋಧ ನಡೆಸಲು ಪಂಜಾಬ್ ಪೊಲೀಸರು ಇಂದು ಕೋರ್ಟ್‌ನಿಂದ ವಾರೆಂಟ್‌ ಪಡೆದಿದ್ದರು. ಈಗ ಶೋಧಕಾರ್ಯ ಶುರು ಮಾಡಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು, ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Punjab Police started searching in Imran Khan home

ಇಮ್ರಾನ್ ಖಾನ್ ಮನೆಯಲ್ಲಿ ಉಗ್ರರು?

ಪಾಕಿಸ್ತಾನದಲ್ಲಿ ಸೇನೆ ಮಾತ್ರ ಉಗ್ರರಿಗೆ ಅಥವಾ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಇತ್ತು. ಆದರೆ ಈಗ ನೋಡಿದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮನೆಯಲ್ಲೇ ಉಗ್ರರು ಪತ್ತೆಯಾಗಿದ್ದಾರೆ. ಈ ಮೂಲಕ ಇಡೀ ಜಗತ್ತಿಗೆ ಪಾಕಿಸ್ತಾನ ರಾಜಕಾರಣಿಗಳ ಮತ್ತೊಂದು ಮುಖ ಪರಿಚಯವಾಗಿದೆ. ಇಮ್ರಾನ್‌ ಖಾನ್ (Imran Khan Arrest) ವಿರುದ್ಧ ಭ್ರಷ್ಟಾಚಾರದ ಆರೋಪಗಳ ನಡುವೆ, ಭಯೋತ್ಪಾದಕರಿಗೂ ಬೆಂಬಲ ನೀಡಿದ ಆರೋಪ ಈಗ ಪ್ರೂವ್ ಆಗಿದೆ. ಇಮ್ರಾನ್ ಮನೆಯಲ್ಲಿ 8 ಉಗ್ರರು ಸಿಕ್ಕಿಬಿದ್ದಿದ್ದಾರೆ. ಈ ಬೆನ್ನಲ್ಲೇ ಇಮ್ರಾನ್ ಮನೆ ಈಗ ಹೈಲೈಟ್ ಆಗಿದೆ.

ಸರ್ಚಿಂಗ್‌ಗೆ ಬಂದ ಸೀನಿಯರ್ ಆಫೀಸರ್ಸ್!

ಮತ್ತೊಂದ್ಕಡೆ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ನಿಯೋಗದಲ್ಲಿ ಲಾಹೋರ್‌ ಕಮಿಷನರ್‌ ಮುಹಮ್ಮದ್‌ ಅಲಿ ರಾಂಧಾವಾ, ಲಾಹೋರ್‌ ಡೆಪ್ಯುಟಿ ಕಮಿಷನರ್‌ ರಫಿಯಾ ಹೈದರ್‌, ಡಿಐಜಿ ಸಾದಿಕ್‌ ದೊಗರ್‌ ಹಾಗೂ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿ ಸೋಹೈಬ್‌ ಇದ್ದಾರೆ ಎನ್ನಲಾಗಿದೆ. ಇನ್ನೂ ಹಲವು ಗಂಟೆಗಳ ಕಾಲ ಹೀಗೆ ಇಮ್ರಾನ್ ಖಾನ್ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಾಕಿಸ್ತಾನದಲ್ಲಿ ಏನ್ ನಡೀತಾ ಇದೆ?

ಅಂದಹಾಗೆ ನಿನ್ನೆಯಷ್ಟೇ ಇಮ್ರಾನ್ ಮನೆ ಒಳಗೆ 40 ಉಗ್ರರು ಅಡಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಕಾರಣಕ್ಕೆ ಪಾಕ್‌ನ ಪಂಜಾಬ್ ಪ್ರಾಂತ್ಯದ ಸಾವಿರಾರು ಪೊಲೀಸರು ಇಮ್ರಾನ್ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿಯ ವೇಳೆ 8 ಉಗ್ರರು ಲಾಕ್ ಆಗಿದ್ರು. ಆದರೆ ಜಮಾನ್ ಪಾರ್ಕ್‌ನಲ್ಲಿ ಶೋಧ ನಡೆಸುವ ಮೊದಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರ ಜೊತೆ ಮಾತುಕತೆಗೆ ತಂಡ ಕಳುಹಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದ ಕೆಲವೇ ಹೊತ್ತಲ್ಲಿ ಕೋರ್ಟ್‌ನಿಂದ ವಾರೆಂಟ್‌ ಸಿಕ್ಕಿದೆ.

Punjab Police started searching in Imran Khan home

ಯಾರೆಲ್ಲಾ ಸಿಕ್ಕಿಬಿದ್ದರು ಗೊತ್ತಾ?

ಇನ್ನು ಲಾಹೋರ್‌ನ ಜಮಾನ್‌ ಪಾರ್ಕ್‌ನಲ್ಲಿರುವ ಇಮ್ರಾನ್ ಮನೆಯೊಳಗೆ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸರ್ಕಾರಕ್ಕೆ ಒಪ್ಪಿಸುವುದಕ್ಕೆ ನಿಗದಿಪಡಿಸಿದ ಗಡುವು ಕೊನೆಗೊಂಡ ಹಿನ್ನೆಲೆ ಪಂಜಾಬ್‌ ಪೊಲೀಸರು ಮನೆ ಸುತ್ತುವರಿದು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಇದಕ್ಕೆ ಅಡ್ಡಿ ಮಾಡಲು ಇಮ್ರಾನ್ ಖಾನ್ ಪಟ್ಟ ಪ್ರಯತ್ನ ಈಗ ವಿಫಲವಾಗಿದೆ. ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಸೇನಾ ನೆಲೆ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ 8 ಶಂಕಿತರನ್ನು ಜಮಾನ್ ಪಾರ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ.

ಇಮ್ರಾನ್ ಮನೆಯಲ್ಲಿ ಉಗ್ರರಿಗೆ ರಾಜಾಥಿತ್ಯ!

ಪಂಜಾಬ್ ಪೊಲೀಸರು ಇಮ್ರಾನ್ ಖಾನ್‌ನ ಮನೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದ್ದು ಆಘಾತಕಾರಿ ಸಂಗತಿ. ಅದೇನೆಂದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸಿ, 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಮಾಡಿರುವ ಉಗ್ರರ ಪಡೆ ಇಮ್ರಾನ್ ಖಾನ್ ಮನೆಯಲ್ಲೇ ಜಾಗ ಪಡೆದಿತ್ತು. ಹಿಂಸಾಚಾರ ನಡೆಸಿದ್ದವರಿಗೆ ಇಮ್ರಾನ್ ಮನೆಯ ಕಾಂಪೌಂಡ್ ಆವರಣದಲ್ಲಿ ಟೆಂಟ್‌ಗಳನ್ನ ಹಾಕಿ, ರಾಜಾಥಿತ್ಯ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಲರ್ಟ್ ಆದ ಪಂಜಾಬ್ ಪ್ರಾಂತ್ಯದ ಪೊಲೀಸರು, ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ.

ಗನ್ ಹಿಡಿದು ನುಗ್ಗಿದ ಪೊಲೀಸ್ ಪಡೆ

ಜಮಾನ್ ಪಾರ್ಕ್‌ ಬಳಿ ಯಾವುದೇ ಸಮಯದಲ್ಲಿ ಹಿಂಸಾಚಾರ ಸ್ಫೋಟವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪೊಲೀಸ್ ಪಡೆ ಶಸ್ತ್ರಸಜ್ಜಿತರಾಗಿ ಸಿದ್ಧವಾಗಿದ್ದಾರೆ. ಇಮ್ರಾನ್‌ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಬಂದ್‌ ಮಾಡಲಾಗಿದೆ. ಸ್ಥಳಗಳಲ್ಲಿ ಜಾಮರ್‌ ಅಳವಡಿಸಲಾಗಿದೆ. ಪೊಲೀಸರು ಕೆಲ ಶಂಕಿತ ಉಗ್ರರನ್ನು ಬಂಧೀಸಿದ್ದು, ಈ ಪೈಕಿ ಹಲವರು ಉಗ್ರರು ಎಂದು ಆರೋಪಿಸಲಾಗಿದೆ. ಆದರೆ ಇಮ್ರಾನ್ ಖಾನ್ ಪಕ್ಷದ ನಾಯಕರು ಈ ಆರೋಪ ಅಲ್ಲಗಳೆದಿದ್ದಾರೆ.

Punjab Police started searching in Imran Khan home

ಭ್ರಷ್ಟಾಚಾರದ ಜೊತೆ ಉಗ್ರರಿಗೂ ಆಶ್ರಯ?

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಈಗ ತಮ್ಮ ಮನೆಯಲ್ಲೇ ಉಗ್ರರಿಗೆ ಆಶ್ರಯ ನೀಡಿದ ಆರೋಪ ಇಮ್ರಾನ್ ವಿರುದ್ಧ ಕೇಳಿಬಂದಿದೆ.

ಕೊಲೆ ಆರೋಪವೇ ಮುಳುವಾಯ್ತಾ?

ಪಾಕಿಸ್ತಾನ ಅಂದ್ರೆ ಅಲ್ಲಿ ಜೀವಕ್ಕೆ ಬೆಲೆ ಇಲ್ಲ. ಅದರಲ್ಲೂ ಸತ್ಯ ಮಾತನಾಡುವ ರಾಜಕಾರಣಿ, ಪತ್ರಕರ್ತರನ್ನ ಹೆಣ ಮಾಡದೆ ಬಿಡುವುದಿಲ್ಲ ಅಲ್ಲಿನ ವ್ಯವಸ್ಥೆ. ಹೀಗೆ ಪತ್ರಕರ್ತನೊಬ್ಬನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್‌ಐ ಜೊತೆ ಪಾಕಿಸ್ತಾನ ಮಿಲಿಟರಿ ಕೂಡ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮ ಇಮ್ರಾನ್ ಅನುಭವಿಸಿದ್ದಾರೆ. ಹೀಗಾಗಿ ಪಾಕ್ ಸೇನೆ ಮತ್ತು ಐಎಸ್‌ಐ ವಿರುದ್ಧ ಸೇಡು ತೀರಿಸಿಕೊಳ್ಳಲು ಇಮ್ರಾನ್ ತೊಡೆತಟ್ಟಿದ್ದಾರೆ. ಇದೇ ಕಾರಣಕ್ಕೆ ಈಗ ಇಮ್ರಾನ್ ಖಾನ್ ಟಾರ್ಗೆಟ್ ಆಗಿದ್ದಾರೆ ಎಂಬ ಆರೋಪ ಕೂಡ ಇದೆ.

Punjab Police started searching in Imran Khan home

ಈಗಾಗಲೇ ಪಾಕಿಸ್ತಾನ ಸೇನೆ & ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಹಲವು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ತಂತ್ರ ಅಡಗಿರಬಹುದು. ಹೀಗೆ ಪಾಕಿಸ್ತಾನ ತಾನು ಎಂತಹ ದೇಶ ಅನ್ನೋದನ್ನ ಮತ್ತೊಮ್ಮೆ ಜಗತ್ತಿಗೇ ತೋರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+