Pulwama: ಪುಲ್ವಾಮಾ ಉಗ್ರ ಕೃತ್ಯದ ಮಾಸ್ಟರ್ ಮೈಂಡ್ ಅನಾಮಧೇಯ ವ್ಯಕ್ತಿಯಿಂದ ಹತ್ಯೆ
ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ಹಲವು ಸೈನಿಕರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿಯ ಪ್ರಮುಖ ಮಾಸ್ಟರ್ ಮೈಡ್, ಭಾರತಕ್ಕೆ ಬೇಕಾಗಿದ್ದ ಪ್ರಮುಖ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅನ್ನು ಅನಾಮಧೇಯ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟಿದ್ದಾನೆ. ಈ ಘಟನೆ ಇಂದು ಗುರುವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದೆ.
ಪಾಕಿಸ್ತಾನದ ಮುಜಫ್ಫರಾಬಾದ್‌ನಲ್ಲಿ ನಡೆದ ಈ ದಾಳಿಯಲ್ಲಿ ಬುರ್ಹಾನ್‌ಗೆ ಗುಂಡುಗಳು ತಗುಲಿವೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ ಎಂದು ವರದಿ ಆಗಿದೆ. ಕೇಂದ್ರ ಸರ್ಕಾರವು 2022ರಲ್ಲಿ ಬುರ್ಹಾನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಈ ಕುರಿತು ಹೊರಡಿಸಿದ್ದ ಅಧಿಕೃತ ಅಧಿಸೂಚನೆಯಲ್ಲಿ, "ಅರ್ಜುಮಂಡ್ ಗುಲ್ಜಾರ್ ದಾರ್ ಅಲಿಯಾಸ್ ಹಮ್ಜಾ ಬುರ್ಹಾನ್ ಅಲಿಯಾಸ್ ಡಾಕ್ಟರ್ 23 ವರ್ಷದ ಈಗ ಪುಲ್ವಾಮಾದ ರತ್ನಿಪೋರಾ, ಖರ್ಬಟ್‌ಪೋರಾ ನಿವಾಸಿ. ಈತ ಅನೇಕ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಬದ್ರ್‌ನ ಸಹ ಸದಸ್ಯರಲ್ಲಿ ಒಬ್ಬನಾಗಿದ್ದಾನೆ" ಎಂದು ಕೇಂದ್ರ ತಿಳಿಸಿತ್ತು.

ಸ್ಪೋಟಕ ಸಮೇತ ಯೋಧರ ವಾಹನಕ್ಕೆ ಡಿಕ್ಕಿ
2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯು ದೇಶವನ್ನು ತಲ್ಲಣಗೊಳಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆತ್‌ಪೋರಾದಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ಸಿಬ್ಬಂದಿಯ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆಸಲಾಗಿತ್ತು.
ಈ ಭೀಕರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ ಇಂದು ಮೃತಪಟ್ಟ ಇದೇ ಮಾಸ್ಟರ್ ಮೈಂಡ್ ಬುರ್ಹಾನ್‌ನ ಕೈವಾಡ ಇತ್ತು ಎಂದು ಹೇಳಲಾಗಿದೆ. ಇಡೀ ಭಾರತೀಯರು ಪಾಕಿಸ್ತಾನ ಭಯೋತ್ಪಾದಕರನ್ನು ಶಪಿಸಿದ್ದರು.












Click it and Unblock the Notifications