Imran Khan Arrest: ಇಮ್ರಾನ್ ಖಾನ್ ಬಂಧನದ ಹಿಂದೆ ISI ಕೈವಾಡ?

ಇಸ್ಲಾಮಾಬಾದ್: ಅದು ಪಾಕಿಸ್ತಾನ.. ಅಲ್ಲಿ ನೀವು ಉಸಿರು ಎತ್ತಿ ಮಾತನಾಡಿದ್ರೂ ಕಥೆ ಮುಗಿಸಿಬಿಡುತ್ತಾರೆ. ಇಂತಿಪ್ಪ ಪಾಕ್‌ನಲ್ಲಿ ಭಯಾನಕ ಸಂಸ್ಥೆ ಇದ್ದು, ಭಾರತಕ್ಕೆ ಕಿರುಕುಳ ನೀಡುವ ಉಗ್ರರ ಹಿಂಡು ತಯಾರಿಸೋ ಕಾರ್ಖಾನೆ ಅದು. ಅಂತಹ ಸಂಸ್ಥೆ ವಿರುದ್ಧ ಮಾತನಾಡಿದರೆ ಪ್ರಧಾನಿ ಆದ್ರೂ ಅಷ್ಟೇ, ರಾಷ್ಟ್ರಪತಿ ಆಗಿದ್ರೂ ಅಷ್ಟೇ ಉಡಾಯಿಸಿಬಿಡ್ತಾರೆ, ಜೀವ ತೆಗೆಯುತ್ತಾರೆ. ಈಗ ಇಮ್ರಾನ್ ಖಾನ್ ಪರಿಸ್ಥಿತಿಯೂ ಹಾಗೇ ಆಗುತ್ತಾ?

ಹೌದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಹಿಂದೆ ISI ಕೈವಾಡವಿದೆ ಎಂಬ ಆರೋಪವೀಗ ಕೇಳಿಬಂದಿದೆ. ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳಲು ಇದೇ ISI ಅಧಿಕಾರಿಗಳು ಕಾರಣ ಎನ್ನಲಾಗಿತ್ತು. ಇದೇ ಕಾರಣಕ್ಕೆ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಅಧಿಕಾರಿಗಳ ವಿರುದ್ಧ ಪದೇಪದೆ ಇಮ್ರಾನ್ ಖಾನ್ ಕೂಡ ರೊಚ್ಚಿಗೇಳುತ್ತಿದ್ರು. ಇದನ್ನೆಲ್ಲಾ ನೋಡಿ ಸರಿಯಾಗೇ ಸ್ಕೆಚ್ ಹಾಕಿ ಕೂತಿದ್ದ ಐಎಸ್‌ಐ ಪಟಾಲಂ ಈಗ ಪಾಕ್ ಮಾಜಿ ಪ್ರಧಾನಿಯನ್ನೇ ಅರೆಸ್ಟ್ ಮಾಡಿಸಿದೆ ಎಂಬ ಆರೋಪ ಕೇಳಿಬಂದಿದೆ.

Protests broke in Pakistan after Imran Khan got arrested

ಕೊಲೆ ಆರೋಪವೇ ಮುಳುವಾಯ್ತಾ?

ಪಾಕಿಸ್ತಾನ ಅಂದ್ರೆ ಅಲ್ಲಿ ಜೀವಕ್ಕೆ ಬೆಲೆ ಇಲ್ಲ. ಅದರಲ್ಲೂ ಸತ್ಯ ಮಾತನಾಡುವ ರಾಜಕಾರಣಿ, ಪತ್ರಕರ್ತರನ್ನ ಹೆಣ ಮಾಡದೆ ಬಿಡುವುದಿಲ್ಲ ಅಲ್ಲಿನ ವ್ಯವಸ್ಥೆ. ಹೀಗೆ ಪತ್ರಕರ್ತನೊಬ್ಬನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್‌ಐ ಜೊತೆ ಪಾಕಿಸ್ತಾನ ಮಿಲಿಟರಿ ಕೂಡ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮವನ್ನ ಈಗ ಇಮ್ರಾನ್ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಐಎಸ್‌ಐ ತೋಡಿದ ಬಲೆಗೆ ಬಿದ್ದು ಇಮ್ರಾನ್ ಅಂದರ್ ಆಗಿದ್ದಾರೆಂದು ಪಾಕಿಸ್ತಾನದ ಜನ ಆರೋಪಿಸುತ್ತಿದ್ದಾರೆ.

ಬೆಳಗ್ಗೆ ತಾನೆ ವಿಡಿಯೋ ಮಾಡಿ ಬೈದಿದ್ದರು!

ISI ಅಂದರೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್, ಇದು ಪಾಕಿಸ್ತಾನವನ್ನೇ ಕಂಟ್ರೋಲ್ ಮಾಡುತ್ತದೆ. ಈ ಸಂಸ್ಥೆ ಪಾಕ್ ಆಂತರಿಕ ಭದ್ರತೆ ನೋಡಿಕೊಳ್ಳುವ ಗೂಢಚಾರಿ ಸಂಘಟನೆ. ಅದ್ರಲ್ಲೂ ಭಾರತದಲ್ಲಿ ನಡೆಯೋ ಟೆರರ್ ಆಕ್ಟಿವಿಟಿಗಳ ಹಿಂದೆ ಪಾಕಿಸ್ತಾನಿ ISI ಕೈವಾಡ ಪದೇ ಪದೆ ಸಾಬೀತಾಗಿದೆ. ಇಂತಹ ಸಂಸ್ಥೆ ವಿರುದ್ಧ ಬೆಳಗ್ಗೆ ಇಮ್ರಾನ್ ರೊಚ್ಚಿಗೆದ್ದು ವಿಡಿಯೋ ಮಾಡಿದ್ರು. ವಿಡಿಯೋದಲ್ಲಿ ಐಎಸ್‌ಐ ಅಧಿಕಾರಿಗಳ ಭ್ರಷ್ಟ ವ್ಯವಸ್ಥೆ & ಪಾಕಿಸ್ತಾನಕ್ಕೆ ಅವರು ಮಾಡುತ್ತಿರುವ ಮೋಸ ಎಂಥದ್ದು ಎಂದು ಬೈದಿದ್ರು ಇಮ್ರಾನ್. ದುರಾದೃಷ್ಟ ಏನಂದ್ರೆ ಹೀಗೆ ಇಮ್ರಾನ್ ವಿಡಿಯೋ ಮಾಡಿ 3 ಗಂಟೆ ಕಳೆಯುವ ಹೊತ್ತಿಗೆ ಜೈಲು ಸೇರಿದ್ದಾರೆ.


ಇಮ್ರಾನ್ ಖಾನ್ ಕಥೆ ಮುಂದೇನು?

ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಭಿಮಾನಿಗಳು, ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ. ಉತ್ತರ ಸಿಗದ ಪ್ರಶ್ನೆ ಹಿಡಿದು ಇಮ್ರಾನ್ ಖಾನ್ ಬೆಂಬಲಿಗರು ಹಿಂಸೆಗೆ ಇಳಿದಿದ್ದಾರೆ.

ಇಮ್ರಾನ್ ಹೊರಗೆ ಬಂದರೆ ISI ನಾಶ?

ಈಗ ಪಾಕ್ ಮಾಜಿ ಪ್ರಧಾನಿ ಬಂಧನದ ಹಿಂದೆ ISI ಕೈವಾಡ ಇದೆ ಎಂಬ ಆರೋಪಕ್ಕೆ ಮತ್ತೊಂದು ಬಲ ಸಿಕ್ಕಿದೆ. ಅದೇನೆಂದರೆ, ಇಮ್ರಾನ್ ಖಾನ್ ಇತ್ತೀಚೆಗೆ ಐಎಸ್‌ಐ ಹಾಗೂ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದರು. ಹೀಗಾಗಿ ಇಮ್ರಾನ್ ಖಾನ್ ಜೈಲಿನಿಂದ ಹೊರಗೆ ಬಂದು, ಮತ್ತೊಮ್ಮೆ ಪಾಕ್ ಪ್ರಧಾನಿ ಪಟ್ಟಕ್ಕೆ ಏರಿದರೆ ISI ಭ್ರಷ್ಟ ಅಧಿಕಾರಿಗಳ ಕಥೆ ಮುಗಿಸೋದು ಗ್ಯಾರಂಟಿ. ಈ ಕಾರಣಕ್ಕೆ ಇಮ್ರಾನ್ ಖಾನ್ ಲಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದು ಹಿಂಸೆ ಭುಗಿಲೆದ್ದಿರುವ ಪಾಕಿಸ್ತಾನದಲ್ಲಿ ಮತ್ತಷ್ಟು ಭಯ ತರಿಸಿದೆ.

ಒಟ್ನಲ್ಲಿ ಜಡ್ಡುಗಟ್ಟಿದ ಪಾಕಿಸ್ತಾನದ ವ್ಯವಸ್ಥೆಯಲ್ಲಿ ಮತ್ತೆ ಸಂಚಲನ ಸೃಷ್ಟಿಯಾಗಿದೆ. ಜೀವ ಉಳಿಸಿಕೊಳ್ಳಲು ಪಾಕ್ ಮಾಜಿ ಪ್ರಧಾನಿಯೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದ್ಕಡೆ ಪಾಕ್‌ನ ವಿವಿಧ ಕಡೆ ಪ್ರತಿಭಟನೆಗಳು ಕೂಡ ತೀವ್ರಗೊಂಡಿವೆ. ಮುಂದೆ ಇದು ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+