ಪ್ರಧಾನಿ ನಿವಾಸದ ಬಳಿ ಪ್ರತಿಭಟನಾಕಾರರು, ಮ್ಯಾನ್ಮಾರ್ ಪಿಎಂ ಅಜ್ಞಾತ ಸ್ಥಳಕ್ಕೆ ಶಿಫ್ಟ್..?
ಮ್ಯಾನ್ಮಾರ್
ಪ್ರಧಾನಿ ಆಂಗ್ ಸಾನ್ ಸೂಕಿ ಗೃಹ ಬಂಧನದಲ್ಲಿ ಇದ್ದಾರೆಂದು ತಿಳಿದ ಅಭಿಮಾನಿಗಳು ಸೂಕಿಯ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮ್ಯಾನ್ಮಾರ್ ಸೇನೆ ಗುಟ್ಟಾಗಿ ಸೂಕಿಯನ್ನ ಬೇರೆಡೆ, ಅಜ್ಞಾತ ಸ್ಥಳಕ್ಕೆ ಶಿಫ್ಟ್ ಮಾಡಿದೆ. ಫೆಬ್ರವರಿ 1ರ ನಸುಕಿನಲ್ಲಿ ಮ್ಯಾನ್ಮಾರ್ ಸೇನೆ ಸೂಕಿ ಮನೆಗೆ ನುಗ್ಗಿತ್ತು. ಬಳಿಕ ಮ್ಯಾನ್ಮಾರ್ ಪ್ರಧಾನಿ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು. ಇದಾದ ಬಳಿಕ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದ್ದು, ಪ್ರತಿಭಟನೆ, ಹೋರಾಟ ಭುಗಿಲೆದ್ದಿದೆ. id="toptextpromo"> id='are-slot-1' class='oiad oi-axt oiadv'>ಇದೇ
ಸಂದರ್ಭದಲ್ಲಿ ಸೂಕಿ ನಿವಾಸದ ಬಳಿ ನುಗ್ಗಿದ ಪ್ರತಿಭಟನಾಕಾರರ ದಂಡು, ತಮ್ಮ ನಾಯಕಿ ಬಿಡುಗಡೆಗೆ ಪಟ್ಟು ಹಿಡಿದಿತ್ತು. 2-3 ದಿನಗಳಿಂದ ಸೂಕಿ ಮನೆ ಬಳಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮ್ಯಾನ್ಮಾರ್ ಮಿಲಿಟರಿ ಆಂಗ್ ಸಾನ್ ಸೂಕಿಯನ್ನ ಬೇರೆಡೆ ಶಿಫ್ಟ್ ಮಾಡಿ, ಪ್ರತಿಭಟನೆಯ ಹಾದಿ ತಪ್ಪಿಸಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈಗಲೂ ಪಟ್ಟು ಬಿಡದ ಪ್ರತಿಭಟನಾಕಾರರು, ಸೂಕಿ ನಿವಾಸದೆದುರು ಹೋರಾಟ ನಡೆಸುತ್ತಿದ್ದಾರೆ. id='are-slot-2' class='oiad oi-axt oiadv'>
ಸೇನೆ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು
ಆಂಗ್ ಸಾನ್ ಸೂಕಿ ಪರವಾಗಿ ಹೋರಾಟ ಎಷ್ಟು ಉಗ್ರವಾಗಿದೆ ಎಂದರೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೂಡ ಹೋರಾಟಕ್ಕೆ ಧುಮುಕಿದ್ದಾರೆ. ಸೂಕಿ ನಿವಾಸದ ಎದುರು ಧರಣಿ ನಡೆಸುತ್ತಿರುವ ಹೋರಾಟಗಾರರಿಗೆ ಚಿಣ್ಣರ ಪಡೆ ಸಾಥ್ ನೀಡಿದೆ. ಆದರೆ ಮ್ಯಾನ್ಮಾರ್ ಮಿಲಿಟರಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಕಡೆಯ ಅಸ್ತ್ರವಾಗಿ ಬಲಪ್ರಯೋಗ ಮಾಡಲು ಮ್ಯಾನ್ಮಾರ್ ಮಿಲಿಟರಿ ಸಜ್ಜಾಗಿ ನಿಂತಿದೆ. ಗಲ್ಲಿ ಗಲ್ಲಿಗಳಲ್ಲೂ ಈಗಾಗಲೇ ಸೇನೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಮ್ಯಾನ್ಮಾರ್ ಸೇನಾಧಿಕಾರಿಗಳು ಹೋರಾಟಗಳಿಗೆ ತಲೆಬಾಗದೆ, ತನ್ನ ಅಧಿಕಾರ ಪ್ರಯೋಗ ಮುಂದುವರಿಸಿದ್ದಾರೆ.

ಇಂಟರ್ನೆಟ್ ಇಲ್ಲದೆ ಪರದಾಟ..!
ಸೇನಾ ಕ್ರಾಂತಿಯ ವಿರುದ್ಧ ಮ್ಯಾನ್ಮಾರ್‌ನಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ದೇಶದ ಇತರ ಭಾಗಗಳಿಗೆ ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಆದರೆ ಇದನ್ನು ತಡೆಯಲು ಮ್ಯಾನ್ಮಾರ್ ಮಿಲಿಟರಿ ತನ್ನ ಬಲವನ್ನು ಬಳಸುತ್ತಿದೆ. ಈಗಾಗಲೇ ಮ್ಯಾನ್ಮಾರ್‌ನಲ್ಲಿ ಇಂಟರ್ನೆಟ್ ಕಡಿತವಾಗಿದ್ದು, ಜನರನ್ನು ಅತ್ತಿಂದ ಇತ್ತ ಕದಡಲು ಬಿಡುತ್ತಿಲ್ಲ. ಈ ನಡುವೆ ಜನ ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ತೀವ್ರಗೊಳಸಿದ್ದಾರೆ. ಹೀಗೆ ಮ್ಯಾನ್ಮಾರ್ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಿಂಸಾಚಾರ ಸ್ಫೋಟಗೊಳ್ಳುವ ಆತಂಕವೂ ಎದುರಾಗಿದೆ. ಆದರೆ ಹೊರ ಜಗತ್ತಿಗೆ ಮ್ಯಾನ್ಮಾರ್‌ನಲ್ಲಿ ಏನಾಗುತ್ತಿದೆ ಎಂಬ ಸತ್ಯ ಸರಿಯಾಗಿ ತಿಳಿಯದಂತೆ ಮಾಡಿದೆ ಅಲ್ಲಿನ ಮಿಲಿಟರಿ.

ರಕ್ತದ ಕೋಡಿ ಹರಿಸಿದ್ದರು..!
ಅದು 2016ರ ಅಂತ್ಯಕಾಲ. ಜಗತ್ತು ಮ್ಯಾನ್ಮಾರ್ ಕಡೆಗೆ ದಿಟ್ಟಿಸಿ ನೋಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ದಿಢೀರ್ ದಾಳಿ ನಡೆದು ನೋಡ ನೋಡುತ್ತಿದ್ದಂತೆ ಸಾವಿರಾರು ರೊಹಿಂಗ್ಯಾಗಳು ಜೀವ ಕಳೆದುಕೊಂಡರು. ಈ ಹೊತ್ತಲ್ಲೇ ಅಮಾನುಷ ಘಟನೆಗಳು ನಡೆದವು. ರೊಹಿಂಗ್ಯಾ ಮುಸ್ಲೀಮರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಹಲವು ಮಹಿಳೆಯರನ್ನ ರೇಪ್ & ಮರ್ಡರ್ ಮಾಡಿದ್ದರು ಎಂಬ ಆಘಾತಕಾರಿ ವಿಚಾರ ಜಗತ್ತನ್ನು ತಲ್ಲಣಗೊಳಿಸಿತ್ತು. 24 ಸಾವಿರ ರೊಹಿಂಗ್ಯಾಗಳು ಗಲಭೆಯಲ್ಲಿ ಹತ್ಯೆಯಾದರೆ, 1 ಮಿಲಿಯನ್ ರೊಹಿಂಗ್ಯಾಗಳು ಮ್ಯಾನ್ಮಾರ್ ಬಿಟ್ಟು ಓಡಿ ಹೋದರು. ಇನ್ನು ನಾಪತ್ತೆಯಾದವರ ಬಗ್ಗೆ ಈಗಲೂ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಇದನ್ನೆಲ್ಲಾ ಖದ್ದು ಮ್ಯಾನ್ಮಾರ್ ಸೇನೆ ನಡೆಸಿತ್ತು, ಆದರೆ ಆಗ ಅಧಿಕಾರದಲ್ಲಿದ್ದ ಆಂಗ್ ಸಾನ್ ಸೂಕಿ ಸರ್ಕಾರ ಕೈಕಟ್ಟಿ ಕುಳಿತಿತ್ತು ಎಂಬ ಆರೋಪ ಇದೆ.

ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್‌ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.

ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.












Click it and Unblock the Notifications