ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕಣ್ಣಮುಂದೆ ತರಹೇವಾರಿ ಭಕ್ಷ್ಯ ಭೋಜನಗಳಿದ್ದರೂ, ಬಾಯಲ್ಲಿ ನೀರೂರುತ್ತಿದ್ದರೂ ಕೈ ಯನ್ನು ಮುಂದೆ ಚಾಚದಂತೆ ಕಟ್ಟಿಹಾಕೋದು ಈ ಬೊಜ್ಜು ಅನ್ನೋ ಭೂತ!

'ಯಾಕ್ರಿ ಡಯೆಟ್ ಮಾಡ್ತಿದ್ದೀರಾ' ಎಂದು ಎದುರು ಕುಳಿತವರೆಲ್ಲ ಮೂಗುಮುರಿಯುತ್ತ ವ್ಯಂಗ್ಯ ಮಾಡಿದರೂ, ಹೌದು ಅನ್ನಲೂ ಆಗದೆ, ಇಲ್ಲ ಅನ್ನೋದಕ್ಕೂ ಆಗದೆ ಒಂದಷ್ಟು ಸಲಾಡ್, ಮೊಸರನ್ನ, ಎಣ್ಣೆ ಇಲ್ಲದ ಒಣ ಚಪಾತಿ ತಿಂದು ಅನ್ನದಾತೋ ಸುಖೀಭವ ಎಂದು ಹಾರೈಸುವವರ ಕತೆ ದೇವರಿಗೇ ಪ್ರೀತಿ.[ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ]

ಹೌದು, ಬೊಜ್ಜು ಅನ್ನೋದು ಈ ತಲೆಮಾರಿನ ಬಹುಮುಖ್ಯ ಸಮಸ್ಯೆ ಎನ್ನಿಸಿದೆ. ಆರೆಂಟು ವರ್ಷದ ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಮಧ್ಯವಯಸ್ಕರು, ವೃದ್ಧರು ಎಲ್ಲರನ್ನೂ ಬಿಡದೆ ಕಾಡುತ್ತಿರುವ ಭಯಾನಕ ಸಮಸ್ಯೆ ಬೊಜ್ಜು.[ಬೊಜ್ಜು ಮತ್ತು ಮಧುಮೇಹದಿಂದ ಸ್ವಾತಂತ್ರ್ಯ ಪಡೆಯಿರಿ]

ಬೊಜ್ಜು ನಿವಾರಣೆಗೆ ಈಗ ಹಲವು ರೀತಿಯ ಆಧುನಿಕ ಚಿಕಿತ್ಸೆಗಳು ಲಭ್ಯವಿದ್ದರೂ, ನಮ್ಮ ಆಹಾರ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಬೊಜ್ಜು ಬಾರದಂತೆ ತಡೆಯುವುದಕ್ಕೆ ಮತ್ತು ನಿಯಂತ್ರಿಸುವುದಕ್ಕೆ ಸಾಧ್ಯವಿದೆ. ಮಾಂಸಾಹಾರಕ್ಕಿಂತ ಸಸ್ಯಾಹಾರಗಳನ್ನು ಸೇವಿಸುವುದರಿಂದ ಬೊಜ್ಜಿನ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಪೂರ್ಚುಗಲ್ ನಲ್ಲಿ ನಡೆದ ಯುರೋಪಿಯನ್ ಕಾಂಗ್ರೆಸ್ ಆನ್ ಒಬೆಸಿಟಿ ಸಮಾವೇಶದಲ್ಲಿ ಸ್ಪೇನ್ ನ ನವರ್ರಾ ವಿಶ್ವವಿದ್ಯಾಲದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ]

16,000 ಜನರ ಮೇಲೆ ಅಧ್ಯಯನ

16,000 ಜನರ ಮೇಲೆ ಅಧ್ಯಯನ

ಮಾಂಸಾಹಾರಗಳು ಅಂದರೆ ಮಾಂಸ ಮತ್ತು ಪ್ರಾಣಿಗಳ ಕೊಬ್ಬಿನಿಂದಾಗಿ ತಯಾರಿಸಿದ ಪದಾರ್ಥಗಳಲ್ಲಿ ಬೊಜ್ಜುಕಾರಿ ಅಂಶಗಳು ಹೆಚ್ಚಾಗಿರುತ್ತವೆ. ಮತ್ತು ಸಸ್ಯಾಹಾರಗಳಾದ ಹಣ್ಣು ಮತ್ತು ತರಕಾರಿಗಳಲ್ಲಿ ಕಡಿಮೆ ಕೊಬ್ಬಿನಂಶ ಇರುತ್ತದೆ ಎಂದು 16,000 ಜನರ ಮೇಲೆ ನಡೆಸಿದ ಅಧ್ಯಯನ ಸಾಬೀತುಪಡಿಸಿದೆ.

ಹೃದ್ರೋಗ ತಡೆಗೆ ಸಸ್ಯಜನ್ಯ ಆಹಾರ

ಹೃದ್ರೋಗ ತಡೆಗೆ ಸಸ್ಯಜನ್ಯ ಆಹಾರ

ಸಸ್ಯಾಹಾರಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿರುವುದರಿಂದ ಬೊಜ್ಜಿನ ಸಮಸ್ಯೆಯೂ ಕಡಿಮೆಯಾಗುವುದಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳೂ ದೂರಾಗುತ್ತವೆ ಎನ್ನುತ್ತಾರೆ ತಜ್ಞರು. ಮಧುಮೇಹ, ಕ್ಯಾನ್ಸರ್ ನಂಥ ರೋಗಗಳಿಗೂ ಬೊಜ್ಜು ಕಾರಣವಾಗುವುದರಿಂದ ಉತ್ತಮ ಆರೋಗ್ಯದ ದೃಷ್ಟಿಯಿಂದ ಬೊಜ್ಜು ನಿವಾರಣೆ ಅತ್ಯಗತ್ಯವೂ ಹೌದು.

ಮಾಂಸಾಹಾರ ಆರೋಗ್ಯಕ್ಕೆ ಮಾರಕ

ಮಾಂಸಾಹಾರ ಆರೋಗ್ಯಕ್ಕೆ ಮಾರಕ

ಹೆಚ್ಚಾಗಿ ಮಾಂಸಾಹಾರಗಳನ್ನೇ ಸೇವಿಸುವ ಯುರೋಪಿಯನ್ನರೇ ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂದಿರುವುದು, ಸಸ್ಯಜನ್ಯ ಆಹಾರ ಕ್ರಮವನ್ನು ಸಮರ್ಥಿಸುವ ಭಾರತೀಯ ಆಹಾರ ಪದ್ಧತಿಯ ಘನತೆಯನ್ನು ಹೆಚ್ಚಿಸಿದೆ.

ಭಾರತಕ್ಕೆ ಅಗ್ರ ಐದರಲ್ಲಿ ಸ್ಥಾನ!

ಭಾರತಕ್ಕೆ ಅಗ್ರ ಐದರಲ್ಲಿ ಸ್ಥಾನ!

ಬೊಜ್ಜಿನ ಸಮಸ್ಯೆ ಹೊಂದಿರುವ ವಿಶ್ವದ ದೇಶಗಳಲ್ಲಿ ಭಾರತ ಮತ್ತು ಚೀನಾ ಎರಡೂ ದೇಶಗಳೂ ಅಗ್ರ ಐದರಲ್ಲಿ ಸ್ಥಾನ ಪಡೆದಿವೆ. ಭಾರತದಲ್ಲಿ ಒಟ್ಟು 9.8 ಮಿಲಿಯನ್ ಪುರುಷರು ಮತ್ತು 20 ಮಿಲಿಯನ್ ಮಹಿಳೆಯರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ವಿಶ್ವ ಜನಸಂಖ್ಯೆಯಲ್ಲಿ ಶೇ.9 ಭಾರತೀಯರು!

ವಿಶ್ವ ಜನಸಂಖ್ಯೆಯಲ್ಲಿ ಶೇ.9 ಭಾರತೀಯರು!

ವಿಶ್ವದ ಒಟ್ಟೂ ಜನಸಂಖ್ಯೆಗೆ ಹೋಲಿಸಿದರೆ ಭಾರತದ ಶೇ.9 ರಷ್ಟು ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ಶೇ.3.7 ಪುರುಷರು ಮತ್ತು ಶೇ.5.3 ಮಹಿಳೆಯರು. ಫಾಸ್ಟ್ ಫುಡ್, ಬೇಕರಿ ತಿನಿಸುಗಳಿಂದಾಗಿ ಇತ್ತೀಚೆಗೆ ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pro-vegetarian diets, with a higher consumption of plant-based foods compared to animal-based foods can save the people from obesity, researchers from University of Navarra told.
Please Wait while comments are loading...