ಬೊಜ್ಜು ಮತ್ತು ಮಧುಮೇಹದಿಂದ ಸ್ವಾತಂತ್ರ್ಯ ಪಡೆಯಿರಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 15 : 'ಫ್ರೀಡಂ ಫ್ರಂ ಒಬೆಸಿಟಿ ಹಾಗೂ ಡಯಾಬಿಟಿಸ್'. ಇದು ಸ್ವಾಂತಂತ್ರ್ಯೋತ್ಸವದ ಅಚ್ಚರಿ. ಬೊಜ್ಜು ಮತ್ತು ಮಧುಮೇಹ ಮುಕ್ತಿಗೊಂದು ಅಪರೂಪದ ಸರ್ಜರಿ.[ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?]

ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಆಗಸ್ಟ್ 15 ಸೋಮವಾರದಂದು ಬೆಂಗಳೂರಿನ ಕೋರಮಂಗಲದ 4ನೇ ಬ್ಲಾಕ್‌ನಲ್ಲಿ ಕಾರ್ಯಾರಂಭಗೊಂಡಿತು. ಮಧುಮೇಹ ದೇಹಕ್ಕೆ ಅಂಟಿಕೊಂಡರೆ ಅದರಿಂದ ಮುಕ್ತರಾಗುವುದು ಅಸಾಧ್ಯ, ಜೀವನ ಪೂರ್ತಿ ಮಧುಮೇಹ ಕಟ್ಟಿಟ್ಟ ಬುತ್ತಿ ಎಂಬ ವಾಸ್ತವ ಚಿತ್ರಣವನ್ನು ಬದಲಿಸಿ, ಬೊಜ್ಜು ಮತ್ತು ಮಧುಮೇಹವನ್ನು ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ನಿಯಂತ್ರಿಸುವ ಕೇಂದ್ರವು ಜನತೆಗಾಗಿ ಜನರ ಆರೋಗ್ಯಕ್ಕಾಗಿ ಉದ್ಘಾಟನೆಗೊಂಡಿತು.[56 ಮೆಡಿಸನ್ಸ್ ದರಗಳ ಮೇಲೆ ಶೇ 25 ರಷ್ಟು ಕಡಿತ!]

ಕನ್ನಡ ಚಿತ್ರ ನಟಿ ಕು.ರಾಗಿಣಿ ದ್ವಿವೇದಿ, ದಕ್ಷಿಣ ಭಾರತದ ಖ್ಯಾತ ನಟಿ ಪಾರ್ವತಿ ನಾಯರ್ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದಲ್ಲಿ ಬೊಜ್ಜು ಸರ್ಜರಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞ ವೈದ್ಯ ಕನ್ನಡಿಗ ಡಾ.ಮಾಕಂ ರಮೇಶ್, ರೆ.ಫಾ.ಜೋಸ್ ವೆಟ್ಟಿಯಾಂಕಲ್, ಡಾ.ತುಲಿಪ್ ಉಪಸ್ಥಿತರಿದ್ದರು.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

ರಾಜ್ಯದ ಪ್ರಥಮ ಮಹಿಳಾ ಸರ್ಜನ್ ಡಾ.ತುಲಿಪ್

ರಾಜ್ಯದ ಪ್ರಥಮ ಮಹಿಳಾ ಸರ್ಜನ್ ಡಾ.ತುಲಿಪ್

ಸರ್ಜರಿಯಿಂದ ಬೊಜ್ಜು ಹಾಗೂ ಸಕ್ಕರೆ ಕಾಯಿಲೆಗೆ ಪರಿಹಾರ ನೀಡುವ ರಾಜ್ಯದ ಪ್ರಥಮ ಮಹಿಳಾ ಸರ್ಜನ್ ಡಾ.ತುಲಿಪ್. ಸ್ವತಃ ತಮ್ಮ ತಾಯಿಯವರನ್ನು ಮಧುಮೇಹದಿಂದ ಶಾಶ್ವತವಾಗಿ ಮುಕ್ತಗೊಳಿಸಿದ ತೃಪ್ತಿಕಾಣುವ ಅವರು ಮಧುಮೇಹಿಗಳ ದೇಹದಿಂದ ಮಧುಮೇಹವನ್ನು ಹೊಡೆದೋಡಿಸಿ, ಇತರರಲ್ಲೂ ತಮ್ಮ ಅಮ್ಮನ ಖುಷಿಯನ್ನೇ ಕಾಣುವ ಬಯಕೆ ಇಟ್ಟುಕೊಂಡವರು.

ಮಹಾರಾಷ್ಟ್ರದಲ್ಲಿ ಎಂಬಿಬಿಎಸ್, ಎಂ.ಎಸ್. ವ್ಯಾಸಂಗ ಮಾಡಿ, ಬೇರಿಯಾಟ್ರಿಕ್ ಸರ್ಜರಿ ಬಗ್ಗೆ ಅಮೇರಿಕದ ಮಿನ್ನಿಸೋಟದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಬೊಜ್ಜು ಮತ್ತು ಮಧುಮೇಹ ಚಿಕಿತ್ಸೆ, ಶಸ್ತ್ರಚಿಕಿತ್ಸೆಯಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವ ಡಾ.ತುಲಿಪ್ ಗಳಿಸಿಕೊಂಡಿರುವ ಅನುಭವ ಅಪಾರ. ವಿಶೇಷವೆಂದರೆ ಸರ್ಜರಿಯಿಂದ ಬೊಜ್ಜಿನೊಂದಿಗೆ ಸಕ್ಕರೆ ಕಾಯಿಲೆಗೆ ಪರಿಹಾರ ನೀಡುವ ರಾಜ್ಯದ ಪ್ರಪ್ರಥಮ ಮಹಿಳಾ ಸರ್ಜನ್‌ ಕೂಡಾ ಹೌದು. ಈವರೆಗೆ ಸಾವಿರಕ್ಕೂ ಹೆಚ್ಚು ಸರ್ಜರಿ ಮಾಡಿರುವ ಖ್ಯಾತಿಯೂ ಅವರದ್ದು.

ಡಾ.ತುಲಿಪ್ ಅವರಿಗೆ ಬೆಂಬಲವಾಗಿ ನಿಂತವರು ರಾಜ್ಯದ ಖ್ಯಾತ ವೈದ್ಯರಾದ ಡಾ. ಮಾಕಂ ರಮೇಶ್. ಈಗಾಗಲೇ ಇವರು ಬೊಜ್ಜು ಚಿಕಿತ್ಸೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಅಪ್ಪಟ ಕನ್ನಡಿಗ. ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಈ ವೈದ್ಯರ ತಂಡವು ಈಗಾಗಲೇ ಯಶಸ್ವಿಯಾಗಿ ಸಾವಿರಾರು ಬೊಜ್ಜು ಮತ್ತು ಮಧುಮೇಹ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಪ್ರತ್ಯೇಕ ಬೊಜ್ಜು ಮತ್ತು ಮಧುಮೇಹ ಶಸ್ತ್ರಚಿಕಿತ್ಸೆಗೆಂದೇ ಮೀಸಲಾದ ವಿಶೇಷ ಕೇಂದ್ರವೊಂದನ್ನು ಜನತೆಗಾಗಿ ಏಕೆ ಸ್ಥಾಪನೆಗೊಳಿಸಬಾರದು ಎಂಬ ಚಿಂತನೆಯ ಫಲವೇ ಈ ಡಯಾಬೆಟಿಕ್ ಮತ್ತು ಬೊಜ್ಜು ಸರ್ಜರಿ ಕೇಂದ್ರ.

ಸರ್ಜರಿ ಸೆಂಟರ್ ಏನಿದು?

ಸರ್ಜರಿ ಸೆಂಟರ್ ಏನಿದು?

ನಮ್ಮ ಆಹಾರಕ್ರಮ, ಜೀವನ ಪದ್ಧತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾಗಿದ್ದು, ಹೆಚ್ಚು ಹೆಚ್ಚು ಮಂದಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ಬೊಜ್ಜು ಶರೀರವನ್ನು ಕಾಯಿಲೆಗಳ ಗೂಡನ್ನಾಗಿಸಿ ಬಿಡುತ್ತದೆ. ನಮ್ಮ ಅದೆಷ್ಟೋ ಕಾಯಿಲೆಗಳಿಗೆ ಮೂಲ ಕಾರಣ ನಮ್ಮ ಸ್ಥೂಲಕಾಯ. ಸ್ಥೂಲಕಾಯದಿಂದ ಮಧುಮೇಹ ಮಾತ್ರವಲ್ಲ, ಇತರ ಕಾಯಿಲೆಗಳೂ ಜತೆಜತೆಗೇ ಬರುತ್ತವೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಬೊಜ್ಜಿನಿಂದ ಬಂಜೆತನವೂ ಕಾಡಬಹುದು.

ಮಧುಮೇಹದಿಂದ ಹಲವು ಕಾಯಿಲೆಗಳೂ ದೇಹವನ್ನು ಸೇರಿಕೊಳ್ಳುತ್ತವೆ. ದೇಹ ಸೇರಿದ ಯಾವ ಕಾಯಿಲೆಗೂ ಶಾಶ್ವತ ಪರಿಹಾರ ಸಿಗದೆ ಜೀವನಪೂರ್ತಿ ಔಷಧ ಸೇವಿಸುತ್ತಲೇ ಇರಬೇಕಾಗುತ್ತದೆ. ಒಂದು ಹಂತಕ್ಕೆ ಇದು ರೋಗಿಗಳನ್ನು ಡಯಾಲಿಸಿಸ್‌ಗೆ ದೂಡುತ್ತದೆ. ಒಂದು ಅಂಕಿ-ಅಂಶದ ಪ್ರಕಾರ ಇಂದು ದೇಶದಲ್ಲಿ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಮಂದಿ ಮಧುಮೇಹ ಸಂಬಂಧಿತ ಕಾಯಿಲೆಗಳಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಿಸಿ, ಜನರಿಗೆ ಆರೋಗ್ಯದ ನಿಜವಾದ ಭಾಗ್ಯ ಸಿಗುವಂತಾಗಬೇಕು ಎಂಬ ಕಳಕಳಿಯಿಂದಾಗಿಯೇ ಡಾ.ತುಲಿಪ್‌ರವರು ‘ಡಯಾಬೆಟಿಕ್ ಮತ್ತು ಬೊಜ್ಜು ಸರ್ಜರಿ ಕೇಂದ್ರ' ಸ್ಥಾಪಿಸಲು ಮುಂದಾಗಿದ್ದಾರೆ.

ಶಸ್ತ್ರಚಿಕಿತ್ಸೆ ವಿಧಾನ ಹೇಗೆ?

ಶಸ್ತ್ರಚಿಕಿತ್ಸೆ ವಿಧಾನ ಹೇಗೆ?

ಮಧುಮೇಹ ಶಸ್ತ್ರಚಿಕಿತ್ಸೆ ಅಷ್ಟೇನೂ ಸಂಕೀರ್ಣವಲ್ಲದ ಸರಳ ಶಸ್ತ್ರಚಿಕಿತ್ಸೆ. ಆದರೆ ಇದರಲ್ಲಿ ಸಾಕಷ್ಟು ಪರಿಣಿತಿ ಇರುವ ವೈದ್ಯರು ಮಾತ್ರ ಯಶಸ್ವಿಯಾಗಿ ಈ ಸರ್ಜರಿ ನಡೆಸಬಲ್ಲರು. ಅಂಥವರ ಪೈಕಿ ಡಾ.ತುಲಿಪ್ ಮೊದಲಿಗರು. ಕೀ ಹೋಲ್ ಮೂಲಕ ನಡೆಸುವ ಈ ಶಸ್ತ್ರಚಿಕಿತ್ಸೆಗೆ ಕೇವಲ 2ರಿಂದ 3 ಗಂಟೆ ಸಮಯ ಸಾಕು. ಶಸ್ತ್ರಚಿಕಿತ್ಸೆಯ ಬಳಿಕವೂ ಬೆಡ್‌ರೆಸ್ಟ್ ಎಂಬುದಿಲ್ಲ. ಸರ್ಜರಿಯಾದ ಆರು ಗಂಟೆ ನಂತರ ನಡೆದಾಡಬಹುದು. ಸರ್ಜರಿ ಮಾಡಿಸಿಕೊಂಡ 3 ದಿನದಲ್ಲಿ ರೋಗಿ ಮನೆಗೆ ತೆರಳಬಹುದು. ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಈ ಶಸ್ತ್ರಚಿಕಿತ್ಸೆ ಇಂದು ಇನ್ನಷ್ಟು ಸರಳವಾಗಿದೆ.

ಸೆಲೆಬ್ರಿಟಿ ಟು ಕಾಮನ್ ಮ್ಯಾನ್

ಸೆಲೆಬ್ರಿಟಿ ಟು ಕಾಮನ್ ಮ್ಯಾನ್

ಸರ್ಜರಿಗಳು ಕೇವಲ ಸೆಲೆಬ್ರಿಟಿಗಳಿಗಷ್ಟೇ ಎಂಬ ಮಾತುಗಳಿದ್ದವು. ಜನತೆಗೆ ಈಗಲೂ ಈ ಬಗ್ಗೆ ಸಹಜವಾದ ಅನುಮಾನಿಗಳಿವೆ. ಆದರೆ ಡಾ. ತುಲಿಪ್ ಈವರೆಗೆ ಸೆಲೆಬ್ರಿಟಿ ಟು ಕಾಮನ್ ಮ್ಯಾನ್‌ಗಳಿಗಾಗಿ ಸಾವಿರಕ್ಕೂ ಹೆಚ್ಚು ಸರ್ಜರಿಗಳನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಹಲವಾರು ಚಿತ್ರ ನಟ-ನಟಿಯರು, ಅವರ ಕುಟುಂಬದವರು, ಹಲವಾರು ಗಣ್ಯ ವ್ಯಕ್ತಿಗಳ ಜತೆಗೆ ಜನಸಾಮಾನ್ಯರೂ ಬೊಜ್ಜು ಕರಗಿಸುವ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಮಧುಮೇಹ ಶಸ್ತ್ರಚಿಕಿತ್ಸೆಗೆ ಒಳಗಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಅದೇ ಅನುಭವದ ತಳಹದಿಯ ಮೇಲೆಯೇ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಹೊಸ ಕೇಂದ್ರ ಸ್ಥಾಪನೆಗೊಳ್ಳುತ್ತಿದೆ. ಸಾಮಾನ್ಯ ಔಷಧಗಳಿಂದ ಸ್ಥೂಲಕಾಯವನ್ನು ಕರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಆದರೆ ಶಸ್ತ್ರಚಿಕಿತ್ಸೆಯಿಂದ ಬೊಜ್ಜು ಮತ್ತು ಮಧುಮೇಹವನ್ನು ಖಂಡಿತಾ ತಡೆಗಟ್ಟಬಹುದು ಎಂಬುದನ್ನು ಸ್ವತಃ ಪ್ರಾಯೋಗಿಕ ನೆಲೆಯಿಂದ ಡಾ.ತುಲಿಪ್ ಕಂಡುಕೊಂಡಿದ್ದಾರೆ.

ಮಾಹಿತಿಗೆ ಸಂಪರ್ಕಿಸಿ : 88805 37537

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr. Tulip's Obesity and Diabetic Surgery Center inaugurated by Rev. Fr. Jose Vettiankal, Kannada actress Ragini Dwivedi and Parvathy Nayar on August 15, 2016 in Bengaluru. It is one of the rarest surgery though which obese and diabetic people can get freedom.
Please Wait while comments are loading...