ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ

ವಿಶ್ವದ ಅತ್ಯಂತ ಅತ್ಯಂತ ತೂಕದ ಮಹಿಳೆ ಈಗ ಮುಂಬೈಗೆ ಬಂದಿದ್ದಾರೆ. ಈಜಿಪ್ಟ್ ನ 36 ವರ್ಷದ ಎಮಾನ್ ಅಹಮದ್ ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಪಡಲು ವಿಶೇಷ ವಿಮಾನದಲ್ಲಿ ಮುಂಬೈಗೆ ಶನಿವಾರ(ಫೆಬ್ರವರಿ 11) ದಂದು ಆಗಮಿಸಿದ್ದಾರೆ.

By Mahesh
|
Google Oneindia Kannada News

ಮುಂಬೈ, ಫೆಬ್ರವರಿ 11: ವಿಶ್ವದ ಅತ್ಯಂತ ಅತ್ಯಂತ ತೂಕದ ಮಹಿಳೆ ಈಗ ಮುಂಬೈಗೆ ಬಂದಿದ್ದಾರೆ. ಈಜಿಪ್ಟ್ ನ 36 ವರ್ಷದ ಎಮಾನ್ ಅಹಮದ್ ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಪಡಲು ವಿಶೇಷ ವಿಮಾನದಲ್ಲಿ ಮುಂಬೈಗೆ ಶನಿವಾರ (ಫೆಬ್ರವರಿ 11) ದಂದು ಆಗಮಿಸಿದ್ದಾರೆ. 25 ವರ್ಷಗಳ ನಂತರ ಮನೆಯಿಂದ ಹೊರ ಬಂದಿರುವ ಎಮಾನ್ ಅವರು 500 ಕೆಜಿ ತೂಕ ಹೊಂದಿದ್ದಾರೆ.

ಎಮಾನ್ ಅಹಮದ್(Eman Ahmed Abd El Aty) ಅವರು ಅವರು ಈಜಿಪ್ಟ್ ಏರ್ ವಿಮಾನದಲ್ಲಿ 4 ಗಂಟೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ವಿಶೇಷ ವಾಹನದ ಮೂಲಕ ಸೈಫಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘World’s heaviest’ woman arrives in Mumbai for weight loss treatment

ಎಮಾನ್ ರ ಭಾರೀ ದೇಹ ತೂಕವನ್ನು ತಗ್ಗಿಸಲು ಬ್ಯಾರಿಯಾಟಿಕ್ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮೊದಲು ಅವರನ್ನು ಒಂದು ತಿಂಗಳ ಕಾಲ ವೀಕ್ಷಣಾ ವ್ಯವಸ್ಥೆಯಲ್ಲಿರಿಸಲಾಗುವುದು. ನಂತರ ಮುಂಬೈ ಮೂಲದ ಬ್ಯಾರಿಯಾಟ್ರಿಕ್ ಸರ್ಜನ್ ಮುಫಜಲ್ ಲಕ್‍ಡವಾಲಾ ಮತ್ತು ಅವರ ತಂಡವು ಸರ್ಜರಿ ನಡೆಸಲಿದೆ.

‘World’s heaviest’ woman arrives in Mumbai for weight loss treatment

25 ವರ್ಷಗಳ ಕಾಲ ಮನೆಯಿಂದ ಹೊರಗೆ ಬರದಿದ್ದ ಅವರಿಗೆ ಇದೇ ಮೊದಲ ಬಾರಿಗೆ ಹೊರ ಪ್ರಪಂಚವನ್ನು ನೋಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ವಿಶೇಷ ಆಂಬುಲೆನ್ಸ್ ನಿಂದ ಸಿಫಿ ಆಸ್ಪತ್ರೆಗೆ ಕರೆತರಲಾಯಿತು. ಮುಂಬೈ ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡರು. ಆಸ್ಪತ್ರೆಯಲ್ಲಿ ಸಮಾರು 2 ಕೋಟಿ ರು ವೆಚ್ಚದ ವಿಶೇಷ ಕೊಠಡಿಯಲ್ಲಿ ಎಮಾನ್ ಅವರನ್ನು ದಾಖಲಿಸಲಾಗಿದೆ.

English summary
Thirty-six-year-old Egyptian woman who is known to be the world’s heaviest, arrived in Mumbai early on Saturday. Eman Ahmed Abd El Aty, who weighs 500 kgs, travelled for over five hours from Alexandria city to Mumbai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X