Gold: ಚಿನ್ನದ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿಯ ವೈರಲ್ ಪೋಸ್ಟ್: ಕೇಂದ್ರ ಸರ್ಕಾರದಿಂದಲೇ ಉತ್ತರ, ಜನ ಸಾಮಾನ್ಯರಿಗೆ ಸಂದೇಶ
Gold: ಪ್ರಧಾನಿ ನರೇಂದ್ರ ಅವರು ಈಚೆಗೆ ಭಾರತೀಯರು ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಮನವಿ ಮಾಡಿದ್ದರು. ಡಾಲರ್ ವಿದೇಶಿ ವಿನಿಮಯದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದರು.
ಇದೀಗ ಭಾರತ ಸರ್ಕಾರವು ದೇವಾಲಯಗಳಲ್ಲಿರುವ ಚಿನ್ನದ ಸಂಗ್ರಹಕ್ಕೆ ಬದಲಾಗಿ ಭಾರತ ಸರ್ಕಾರ ಗೋಲ್ಡ್ ಬಾಂಡ್‌ಗಳನ್ನು ನೀಡಲಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಚಿನ್ನ - ಖರೀದಿ ಹಾಗೂ ಮಾರಾಟದಲ್ಲಿ ಭಾರೀ ಏರಿಳಿತವಾಗಿರುವಾಗಲೇ ಜ್ಯೋತಿಷಿಯೊಬ್ಬರ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಖುದ್ದು ಭಾರತ ಸರ್ಕಾರವೇ ಪ್ರತಿಕ್ರಿಯೆ ನೀಡಿದೆ.

ಭಾರತದಲ್ಲಿ ಚಿನ್ನದ ಖರೀದಿ ಹಾಗೂ ಮಾರಾಟದ ಮೇಲೆ ಕಪ್ಪು ಕಾರ್ಮೋಡ ಮೂಡಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಅಂತ ಹೇಳಿದ ಮೇಲೆ ಜನರಲ್ಲಿ ಚಿನ್ನ ಖರೀದಿಯ ವಿಚಾರದಲ್ಲಿ ಸಣ್ಣದೊಂದು ಗೊಂದಲ ಮೂಡಿದೆ. ಈ ರೀತಿ ಇರುವಾಗಲೇ ಜ್ಯೋತಿಷಿಯೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಖ್ಯಾತಿ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು, ಭಾರತ ಸರ್ಕಾರವು ದೇವಾಲಯಗಳಲ್ಲಿರುವ ಚಿನ್ನದ ಸಂಗ್ರಹಕ್ಕೆ ಬದಲಾಗಿ ಭಾರತ ಸರ್ಕಾರ ಗೋಲ್ಡ್ ಬಾಂಡ್‌ಗಳನ್ನು ನೀಡಲಿದೆ. ದೇವಾಲಯಗಳ ಗೋಪುರಗಳು ಮತ್ತು ಬಾಗಿಲುಗಳ ಮೇಲಿರುವ ಚಿನ್ನದ ಲೇಪನವನ್ನು ಭಾರತದ ತಂತ್ರಾತ್ಮಕ ಚಿನ್ನದ ಸಂಗ್ರಹವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ ಎಂದು ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಈ ವಿಚಾರವಾಗಿ ಖುದ್ದು ಭಾರತ ಸರ್ಕಾರವೇ ಪ್ರತಿಕ್ರಿಯೆ ನೀಡಿದೆ.
ಚಿನ್ನದ ಮಾರಾಟದ ವಿಚಾರದಲ್ಲಿ ಭಾರತ ಸರ್ಕಾರದ ಕ್ರಮ: ಸುಳ್ಳು ಸುದ್ದಿ
ಇನ್ನು ಚಿನ್ನದ ಮಾರಾಟ ಅಥವಾ ದೇವಾಲಯಗಳ ಚಿನ್ನದ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಬಗ್ಗೆ Press Information Bureau / ಭಾರತೀಯವ ವಾರ್ತಾ ಇಲಾಖೆಯು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಚಾರವು ನಕಲಿ ಸುದ್ದಿ ಎಂದು ಹೇಳಿದೆ.
ಭಾರತ ಸರ್ಕಾರವು ದೇವಾಲಯಗಳ ಚಿನ್ನದ ನಿಕ್ಷೇಪಗಳಿಗೆ ಬದಲಾಗಿ ದೇವಾಲಯಗಳಿಗೆ ಚಿನ್ನದ ಬಾಂಡ್‌ಗಳನ್ನು ನೀಡಲಿದೆ ಎಂದು ಆರೋಪಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಭಾರತ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ನಕಲಿ ಸುದ್ದಿಗಳಿಂದ ದೂರವಿರಿ ಮತ್ತು ಯಾವಾಗಲೂ ಪರಿಶೀಲಿಸಿದ ಮಾಹಿತಿಗಾಗಿ ಮಾತ್ರ ಅಧಿಕೃತ ಮೂಲಗಳನ್ನು ನೋಡಿ ಎಂದು ಭಾರತೀಯ ಸರ್ಕಾರವು ಮಾಹಿತಿ ನೀಡಿದೆ.
ಚಿನ್ನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು
ಚಿನ್ನ ಖರೀದಿಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಭಾರತೀಯರಲ್ಲಿ ವಿಶೇಷವಾದ ಮನವಿಯೊಂದನ್ನು ಮಾಡಿದ್ದರು. ದೇಶವು ಸಂಕಷ್ಟದಲ್ಲಿ ಇರುವುದರಿಂದ ಚಿನ್ನ, ತೈಲ ಹಾಗೂ ವಿದೇಶಿ ಪ್ರವಾಸಗಳ ವಿಚಾರದಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೈಕ್ ನ್ಯೂಸ್‌ಗಳು ಹೆಚ್ಚಾಗಿವೆ.












Click it and Unblock the Notifications