ಖಾಸಗಿ ಟ್ಯೂಷನ್: ಕರ್ನಾಟಕದ ಮೇಷ್ಟ್ರು ಅರೆಸ್ಟ್

ಇನ್ನು ಭಾರತದಲ್ಲಿ ಖಾಸಗಿ ಟ್ಯೂಷನ್ ಹೇಳಿಕೊಡುತ್ತಾ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಆ ಲಕ್ಷಾಂತರಗಳು ಮುಂದೆ ಕೋಟ್ಯಂತರ ರೂಪಾಯಿ ಆಗುತ್ತದೆ. ಆದರೆ ಅದಕ್ಕೆ ಕನಿಷ್ಠ ಸೇವಾ ತೆರಿಗೆಯೂ ಕಟ್ಟುವುದಿಲ್ಲ. ಉಳ್ಳವರು ಖಾಸಗಿ ಟ್ಯೂಷನ್ನಿಗೆ ಹೋಗುತ್ತಾರೆ, ಇಲ್ಲದವರು?
ಆದರೆ ರಿಯಾದ್ ನಲ್ಲಿ ಪೊಲೀಸರು ಏನು ಮಾಡಿದ್ದಾರೆ ನೋಡಿ, ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೂವರು ಭಾರತೀಯರು ಖಾಸಗಿ ಟ್ಯೂಷನ್ ಹೇಳಿಕೊಡುತ್ತಿದ್ದರು. ಹಾಗಾಗಿ ಈ ಮೂವರೂ ಪ್ರತ್ಯೇಲವಾಗಿ ತಮ್ಮ ಮನೆಗಳಲ್ಲಿ ಟ್ಯೂಷನ್ ಹೇಳಿಕೊಡುತ್ತಿರುವಾಗ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಕರ್ನಾಟಕದ ಮೆಹಬೂಬ್ ಪಾಷಾ, ತಮಿಳುನಾಡಿನ ಮೊಹಮದ್ ರಫಿ ಮತ್ತು ಉತ್ತರಪ್ರದೇಶದ ತೌಫೀದ್ ಅಹಮದ್ ಸಿದ್ದಿಖಿ ಅವರನ್ನು ಬಂಧಿಸಿ, ಜೈಲಿನಲ್ಲಿ ಬಿಡಲಾಗಿದೆ. ಶಾಲಾ ಆಡಳಿತ ಮಂಡಳಿಯು ತಕ್ಷಣ ತುರ್ತು ಸಭೆ ನಡೆಸಿದೆ. ಶಾಲೆಯ ಸಾರ್ವಜನಿಕ ಸಂಪರ್ಕಾಧಿಕಾರಿಯು ಪೊಲೀಸರನ್ನು ಸಂಪರ್ಕಿಸಿ, ಮೂರೂ ಶಿಕ್ಷಕರಿಗೆ ಜಾಮೀನು ಕೊಡಿಸಬೇಕು ಎಂದು ಆಡಳಿತ ಮಂಡಳಿ ಸೂಚಿಸಿದೆ ಎಂದು ವರದಿಯಾಗಿದೆ.












Click it and Unblock the Notifications