ಇಂಗ್ಲೆಂಡ್ ಗೆ ಆಗಮಿಸಲಿದ್ದಾನೆ ಮತ್ತೊಬ್ಬ ರಾಜಕುಮಾರ?
ಲಂಡನ್, ಅ. 20: ಜನರ ಮನಸ್ಥಿತಿಯೇ ಹಾಗೆ, ಅಲ್ಲೆಲ್ಲೋ ಐಶ್ವರ್ಯ ರೈ ಮಗುವಿನ ತಾಯಾದರೆ, ಇಂಗ್ಲೆಂಡ್ ರಾಜಕುಮಾರನ ಹೆಂಡತಿ ಗರ್ಭಿಣಿಯಾದರೆ ಅದನ್ನು ತಿಳಿದುಕೊಳ್ಳುವ ಕುತೂಹಲ. ಯಾಕೆ ಹೀಗೆ ಎಂಬುದು ಗೊತ್ತಿಲ್ಲ, ಆದರೂ ಜನರಿಗೆ ಈ ಸುದ್ದಿ ಬೇಕು.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ, ಇಂಗ್ಲೆಂಡ್ ರಾಜಕುಮಾರನ ಹೆಂಡತಿ ಮತ್ತೆ ಗರ್ಭಿಣಿಯಾಗಿದ್ದಾಳೆ. ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಆತನ ಪತ್ನಿ ಕೇಟ್ ಏರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಲಿಜಬೆತ್ ರಾಣಿಯ ಮೊಮ್ಮಗ ವಿಲಿಯಂ ಕಳೆದ ಜುಲೈನಲ್ಲಿ ಗಂಡು ಮಗುವನ್ನು ಪಡೆದಿದ್ದರು. ಈಗ ಇಂಗ್ಲೆಂಡ್ ಇನ್ನೊಂದು ಸಂಭ್ರಮಕ್ಕೆ ಸಿದ್ಧವಾಗುತ್ತಿದೆ.[ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ!]

ಮೊದಲನೇ ಮಗುವಿನ ನಾಮಕರಣವೇ ದೊಡ್ಡ ಸುದ್ದಿಯಾಗಿತ್ತು. ನಂತರ ಜಾರ್ಜ್ ಎಂದು ಹೆಸರಿಡಲಾಗಿತ್ತು. ಆದರೆ ಮೊದಲನೆ ಮಗು ಯಾವ ದಿನಾಂಕ ಜನ್ಮತಾಳಿತ್ತು ಎಂಬುದನ್ನು ಇನ್ನು ರಹಸ್ಯವಾಗೇ ಇಡಲಾಗಿದೆ. ಮುಂದಿನ ಏಪ್ರಿಲ್ ನಲ್ಲಿ ಜನ್ಮತಾಳಲಿರುವ ಮಗು (ಗಂಡಾಗಲಿ, ಹೆಣ್ಣಾಗಲಿ) ರಾಜವಂಶದ ನಾಲ್ಕನೇ ಕುಡಿಯಾಗಲಿದೆ.[ರಾಜಕುಮಾರನಿಗೆ ಜನ್ಮವಿತ್ತ ಕೇಟ್ ವಿಲಿಯಂ]
ರಾಜಕುಮಾರ ವಿಲಿಯಂ ಕಚೇರಿಯ ಹೇಳಿಕೆಗಳು ಮಗುವಿನ ಆಗಮನದ ಸುದ್ದಿಯನ್ನು ಸೋಮವಾರ ದೃಢಪಡಿಸಿದ್ದು ಕೇಟ್ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಸಿವೆ. ಮಗುವನ್ನು ಹೊತ್ತ ಕೇಟ್ ಆರೋಗ್ಯ ಸಂಬಂಧಿ ಚಿಕ್ಕಪುಟ್ಟ ತೊಂದರೆ ಎದುರಿಸುತ್ತಿದ್ದು ತಜ್ಞ ವೈದ್ಯರ ನಿರ್ದೇಶನದಂತೆ ಆರೈಕೆ ಮಾಡಲಾಗುತ್ತಿದೆ. ಮೊದಲನೆ ಹೆರಿಗೆಯಲ್ಲಿ ಕೇಟ್ ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಳು.












Click it and Unblock the Notifications