ಹಾಲಿವುಡ್ ನಟಿ ಜತೆ ಬ್ರಿಟನ್ ಯುವರಾಜ ಹ್ಯಾರಿ ಮದುವೆ
ಲಂಡನ್, ನವೆಂಬರ್ 27: ಬ್ರಿಟನ್ ಯುವರಾಜ ಹ್ಯಾರಿ ಅಮೆರಿಕಾದ ಖ್ಯಾತ ನಟಿ ಹಾಗೂ ತಮ್ಮ ಪ್ರಿಯತಮೆ ಮೆಘನ್ ಮರ್ಕೆಲ್ ರನ್ನು ವರಿಸಲಿದ್ದಾರೆ.
ಇವರ ವಿವಾಹದ ಸುದ್ದಿಯನ್ನು ಬ್ರಿಟನ್ ರಾಜ ಚಾರ್ಲ್ಸ್ ಪ್ರಕಟಿಸಿದ್ದಾರೆ. ಸಿಂಹಾಸನಕ್ಕೇರಲಿರುವವರಲ್ಲಿ ಐದನೇ ಸಾಲಿನವರಾಗಿರುವ ಹ್ಯಾರಿ ಮದುವೆ ಮುಂದಿನ ಬೇಸಿಗೆಯಲ್ಲಿ ನಡೆಯಲಿದೆ.

ಲಂಡನ್ ನ ಕೆನ್ಸಿಂಗ್ಟನ್ ಅರಮನೆಯ ನಾಟಿಂಗ್ಯಾಮ್ ಕಾಟೇಜ್ ನಲ್ಲಿ ಈ ಅದ್ಧೂರಿ ವಿವಾಹ ನಡೆಯಲಿದೆ.
2016ರಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಜತೆಗೆ ಕಾಣಿಸಿಕೊಂಡಿದ್ದರು. ನಂತರ ಇದೇ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಯಾಗುತ್ತಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹ್ಯಾರಿ, 'ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಘೋಷಿಸಲು ಸಂತೋಷವಾಗುತ್ತಿದೆ' ಎಂದು ಹೇಳಿದ್ದಾರೆ. ಸದ್ಯದಲ್ಲೇ ವಿವಾಹದ ವಿವರಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications