ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಸ್ಸು 73, ಪ್ರಿನ್ಸ್ ಚಾರ್ಲ್ಸ್ ಈಗ ಕಿಂಗ್ 3ನೇ ಚಾರ್ಲ್ಸ್- ಪದವಿಪ್ರದಾನ ಹೇಗೆ?

|
Google Oneindia Kannada News

ರಾಣಿ ಎರಡನೇ ಎಲಿಜಬೆತ್ ನಿಧನರಾದ ಹಿನ್ನೆಲೆಯಲ್ಲಿ ಬ್ರಿಟನ್ ಅರಸೊತ್ತಿಗೆಗೆ ಚಾರ್ಲ್ಸ್ ನೂತನ ರಾಜರಾಗಿದ್ದಾರೆ. ವೇಲ್ಸ್ ರಾಜಕುಮಾರರಾಗಿದ್ದ ಚಾರ್ಲ್ಸ್ ಇದೀಗ ಕಿಂಗ್ ಚಾರ್ಲ್ಸ್ ಆಗಿದ್ದಾರೆ. ಅವರನ್ನು 3ನೇ ಚಾರ್ಲ್ಸ್ ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಬ್ರಿಟನ್‌ನ ಅರಮನೆ ನಿವಾಸದಿಂದ ಈ ಪ್ರಕಟಣೆ ಹೊರಡಿಸಲಾಗಿದೆ.

ಪ್ರಿನ್ಸ್ ಚಾರ್ಲ್ಸ್ ಅವರಿಗೆ ಇದು ದ್ವಂದ್ವ ಭಾವನೆಗಳ ಸ್ಥಿತಿ. ಒಂದೆಡೆ ಮಾತೃ ವಿಯೋಗ, ಇನ್ನೊಂದೆಡೆ ಅರಸೊತ್ತಿಗೆ ಯೋಗ. ತಾಯಿ ಸಾವಿನಿಂದ ಚಾರ್ಲ್ಸ್ ಜರ್ಝರಿತರಾಗಿದ್ದಾರೆ. ಅದೇ ವೇಳೆ, ಸಂಕಷ್ಟ ಕಾಲದಲ್ಲಿ ಬ್ರಿಟನ್‌ನ ಅರಸರಾಗಿ ಮುನ್ನಡೆಸುವ ಗುರುತರ ಹೊಣೆಯನ್ನೂ ಹೊರುತ್ತಿದ್ದಾರೆ.

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶ

ಕುತೂಹಲವೆಂದರೆ, ಎರಡನೇ ಎಲಿಜಬೆತ್ ಅವರು ಬ್ರಿಟನ್ ಪ್ರಭುತ್ವ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಕಾಲ ಅರಸಿಯಾಗಿದ್ದರು. 79 ವರ್ಷ ಕಾಲ ಅವರು ರಾಣಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಅವರ ಮಗ ಚಾರ್ಲ್ಸ್ ಅವರಿಗೆ 73 ವರ್ಷ. ಅತ್ಯಂತ ಹಿರಿಯ ವಯಸ್ಸಿನಲ್ಲಿ ಸಿಂಹಾಸನಕ್ಕೇರಿದ ದಾಖಲೆ ಚಾರ್ಲ್ಸ್ ಅವರದ್ದಾಗಿದೆ.

 Prince Charles Becomes King Charles-III at the Age of 73 Years

ಬ್ರಿಟನ್‌ನ ಅರಸರಿಗೆ ಹೆಚ್ಚಿನ ಅಧಿಕಾರ ಇಲ್ಲವಾದರೂ ಅವರದ್ದು ಅತ್ಯುನ್ನತ ಸ್ಥಾನಮಾನ. ರಾಜ್ಯಾಂಗ ಮತ್ತು ಕಾರ್ಯಾಂಗದಲ್ಲಿ ಅವರಿಗೆ ವಿಶೇಷ ಅಧಿಕಾರ ಇಲ್ಲ. ಆದರೆ, ಗೌರವದ ಸ್ಥಾನ ಇದೆ. ಸರಕಾರಕ್ಕೆ ಮಾರ್ಗದರ್ಶನ ನೀಡಬಹುದಾಗಿದೆ. ಬಹುತೇಕ ಸರಕಾರಗಳು ಅರಸರ ಮಾತನ್ನು ತಳ್ಳಿಹಾಕುವುದಿಲ್ಲ. ಈ ಹಿನ್ನೆಲೆಯಲ್ಲಿ ಚಾರ್ಲ್ಸ್ ಅವರು ರಾಜರಾಗಿ ಹೇಗೆ ಪರಿಸ್ಥಿತಿ ನಿಭಾಯಿಸುತ್ತಾರೆ ಎಂಬುದು ಕುತೂಹಲ.

ಬ್ರಿಟನ್ ಇತಿಹಾದಲ್ಲೇ ಸುದೀರ್ಘ ಆಳಿದ ಖ್ಯಾತಿಯ ರಾಣಿ ಎಲಿಜಬೆತ್: ಒಂದು ಪರಿಚಯಬ್ರಿಟನ್ ಇತಿಹಾದಲ್ಲೇ ಸುದೀರ್ಘ ಆಳಿದ ಖ್ಯಾತಿಯ ರಾಣಿ ಎಲಿಜಬೆತ್: ಒಂದು ಪರಿಚಯ

73 ವರ್ಷದ ಚಾರ್ಲ್ಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹೆನ್ರಿ. ಚಾರ್ಲ್ಸ್ ಅವರು ಈ ಹಿಂದೆ ಡಯಾನಾರನ್ನು ವಿವಾಹವಾಗಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ 1996 ವಿಚ್ಛೇದನ ಪಡೆದಿದ್ದರು. ನಂತರ ಡಯಾನ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಅದಾದ ಬಳಿಕ ಚಾರ್ಲ್ಸ್ ಅವರು ಕೆಮಿಲಾ ಪಾರ್ಕರ್ ಬೌಲ್ಸ್ ಎಂಬಾಕೆಯನ್ನು ವಿವಾಹವಾದರು. ಪ್ರಿನ್ಸ್ ಚಾರ್ಲ್ಸ್ ಅವರ ಇಬ್ಬರೂ ಮಕ್ಕಳು ಡಯಾನ ಹೊಟ್ಟೆಯಲ್ಲಿ ಜನಿಸಿದವರೇ.

ಅಧಿಕೃತ ಘೋಷಣೆ ಹೇಗೆ?

ತಾಯಿ ಸಾವನ್ನಪ್ಪಿದ 24 ಗಂಟೆಯೊಳಗೆ ಚಾರ್ಲ್ಸ್ ಅವರನ್ನು ರಾಜನೆಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಒಂದು ಸಮಾರಂಭದಲ್ಲಿ ಇದು ಆಗುತ್ತದೆ. ಅಕ್ಸೆಶನ್ ಕೌನ್ಸಿಲ್ ಎಂದು ಕರೆಯಲಾಗುವ ಸಮಿತಿಯ ಮುಂದೆ ರಾಜನ ಘೋಷಣೆ ಆಗುತ್ತದೆ.

 Prince Charles Becomes King Charles-III at the Age of 73 Years

ಹಿರಿಯ ಸಂಸದರು, ಮಾಜಿ ಸಂಸದರು, ಹಿರಿಯ ಅಧಿಕಾರಿಗಳು, ಕಾಮನ್‌ವೆಲ್ತ್ ರಾಷ್ಟ್ರಗಳ ರಾಯಭಾರಿಗಳು, ಲಂಡನ್ ಮೇಯರ್ ಮೊದಲಾದವರು ಈ ಮಂಡಳಿಯಲ್ಲಿ ಇರುತ್ತಾರೆ. ಈ ಸಮಾರಂಭದಲ್ಲಿ 700ಕ್ಕೂ ಹೆಚ್ಚು ಜನರು ಇರಬಹುದು. ಆದರೆ, ಬಹಳ ತ್ವರಿತವಾಗಿ ಕಾರ್ಯಕ್ರಮ ನಡೆಯಲಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಜನರ ಉಪಸ್ಥಿತಿ ಇರುತ್ತದೆ.

ಈ ಸಭೆಯಲ್ಲಿ ರಾಜರು ಇರುವಂತಿಲ್ಲ. ಪ್ರೈವಿ ಕೌನ್ಸಿಲ್‌ನ ಅಧ್ಯಕ್ಷರು ಈ ಸಭೆಯಲ್ಲಿ ರಾಣಿ ಎಲಿಜಬೆತ್ ನಿಧನವಾರ್ತೆಯನ್ನು ಪ್ರಕಟಿಸುತ್ತಾರೆ.

ಮಕ್ಕಳಿಗೆ ಏನು ಅಧಿಕಾರ?

ಇದೇ ವೇಳೆ, 3ನೇ ಚಾರ್ಲ್ಸ್‌ನ ಹಿರಿಯ ಮಗ ಪ್ರಿನ್ಸ್ ವಿಲಿಯಂ ಈಗ ವಾರಸುದಾರರಾಗುತ್ತಾರೆ. ಚಾರ್ಲ್ಸ್ ಅವರು ರಾಜರಾಗುವ ಮುನ್ನ ವೇಲ್ಸ್ ರಾಜಕುಮಾರರಾಗಿದ್ದರು. ಆದರೆ, ವಿಲಿಯಂಗೆ ತತ್‌ಕ್ಷಣವೇ ಈ ಪಟ್ಟ ಸಿಗುವುದಿಲ್ಲ. ಡ್ಯೂಕ್ ಆಫ್ ಕಾರ್ನ್‌ವಾಲ್‌ನ ಪಟ್ಟವನ್ನು ಪ್ರಿನ್ಸ್ ವಿಲಿಯಮ್ ಪಡೆಯಲಿದ್ದಾರೆ. ವಿಲಿಯಂ ಪತ್ನಿ ಕ್ಯಾತರಿನಾ ಅವರು ಕಾರ್ನ್‌ವಾಲ್‌ನ ಡಚೆಸ್ ಆಗಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
After death of queen Elizabeth-II, her son Prince Charles has become new king of Britain. He will be officially called as Charles-III. He is the oldest person to ascend the throne of Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X