ಭಾರತದ ಹೊಸ ಹಾದಿ ಆರಂಭ: ಆಸ್ಟ್ರೇಲಿಯಾ & ಜಪಾನ್ ಪ್ರಧಾನಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಚರ್ಚೆ!

ಭಾರತ ದಿನದಿಂದ ದಿನಕ್ಕೆ ಜಾಗತಿಕವಾಗಿ ಬಲಿಷ್ಠ ಭಾರತವಾಗಿ ಬೆಳೆಯುತ್ತಿದೆ. ಭಾರತದ ಈ ಬೆಳವಣಿಗೆ ದೊಡ್ಡ ದೊಡ್ಡ ದೇಶಗಳಿಗೆ ಮತ್ತಷ್ಟು ಹತ್ತಿರವಾಗಲು ಸಹಕಾರಿ ಕೂಡ ಆಗುತ್ತಿದೆ. ಇಂತಹ ಸಮಯದಲ್ಲೇ 'ಕ್ವಾಡ್' ಸಮ್ಮೇಳನ ಕೂಡ ಬಂದಿದ್ದು, ಭಾರತ ಈಗ ಅಮೆರಿಕ & ಜಪಾನ್ ಸೇರಿದಂತೆ ಆಸ್ಟ್ರೇಲಿಯಾ ಜೊತೆಯಲ್ಲಿ ಮಹತ್ವದ ಚರ್ಚೆಯನ್ನು ಶುರು ಮಾಡಿದೆ. ಹಾಗಾದ್ರೆ ಭಾರತದ ಪ್ರಧಾನಿ ಮೋದಿ ಅವರು ಯಾವೆಲ್ಲಾ ಚರ್ಚೆ ನಡೆಸಲಿದ್ದಾರೆ? ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಭಾರತದಿಂದ ಪ್ರಯಾಣ ಬೆಳೆಸಿ, ಅಮೆರಿಕ ತಲುಪಿದ್ದರು. ಹೀಗೆ, ಅಮೆರಿಕಗೆ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಸರ್ಕಾರ ಅದ್ಧೂರಿಯಾಗಿ ಸ್ವಾಗತಿಸಿದೆ. ಹಾಗೇ ಹಲವು ಪ್ರಮುಖ ಸಭೆಗಳು ಈಗಾಗಲೇ ಶುರು ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ & ಜಪಾನ್‌ನ ಪ್ರಧಾನ ಮಂತ್ರಿಗಳ ಜೊತೆಗೆ ದ್ವಿಪಕ್ಷೀಯ ಮಾತುಕತೆ ಕೂಡ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು, ಸೋಷಿಯಲ್ ಮೀಡಿಯಾ ಖಾತೆ 'X'ನಲ್ಲಿ ಮಹತ್ವದ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.

Prime Minister Narendra Modi Started Bilateral Talks With Japan And Australia

ದೊಡ್ಡಣ್ಣನ ನಾಡಲ್ಲಿ ಮಹತ್ವದ ಸಭೆ!

ಅಮೆರಿಕದ ನೆಲದಲ್ಲಿ ಮಹತ್ವದ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಯು ಇದೀಗ ನಡೆಯುತ್ತಿದೆ. ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾರತವು ಸೇರಿ ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಿದ್ದಾರೆ. ಭಾರತದ ಪರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಹೀಗಿದ್ದಾಗ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಜೊತೆಗೆ ದ್ವಿಪಕ್ಷೀಯ ಸಭೆಯನ್ನ ನಡೆಸಿದ್ದಾರೆ.

ವ್ಯಾಪಾರ, ಭದ್ರತೆ & ಬಾಹ್ಯಾಕಾಶ...

ಪ್ರಧಾನಿ ಮೋದಿ ಅವರು ಸೋಷಿಯಲ್ ಮೀಡಿಯಾ ಖಾತೆ 'X'ನಲ್ಲಿ ಬರೆದುಕೊಂಡಿದ್ದು, 'ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಜೊತೆಯಲ್ಲಿ ಈಗ ವಿಸ್ತೃತವಾದ ಚರ್ಚೆ ನಡೆಸಲಾಯಿತು. ವ್ಯಾಪಾರ, ಭದ್ರತೆ ಮತ್ತು ಬಾಹ್ಯಾಕಾಶ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇನ್ನಷ್ಟು ವೇಗವನ್ನು ಪಡೆಯಲು ಪರಿಶ್ರಮಿಸುತ್ತೇವೆ.' ಎಂದಿದ್ದಾರೆ. ಅಲ್ಲದೆ ಜಪಾನ್ ಪಿಎಂ ಅಂದ್ರೆ ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಜೊತೆಗಿನ ದ್ವಿಪಕ್ಷೀಯ ಸಭೆಯ ಕುರಿತು ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. 'ಮೂಲಸೌಕರ್ಯ, ಸೆಮಿಕಂಡಕ್ಟರ್, ರಕ್ಷಣಾ ವಲಯ ಮತ್ತು ಗ್ರೀನ್ ಎನರ್ಜಿ ಸೇರಿ ಇನ್ನಿತರ ವಿಷಯಗಳಲ್ಲಿ ಉಭಯ ದೇಶಗಳ ಸಹಕಾರ ಬಗ್ಗೆ ಚರ್ಚಿಸಿದೆವು' ಎಂದು ತಿಳಿಸಿದ್ದಾರೆ ಪ್ರಧಾನಿ ಮೋದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+