Narendra Modi: ಉಕ್ರೇನ್ ಅಧ್ಯಕ್ಷರಿಗೆ ಆತ್ಮೀಯ ಅಪ್ಪುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯಾರಿಗೆಲ್ಲಾ ಉರಿ ಉರಿ?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ದೇಶದ ರಾಜಧಾನಿ ಕೀವ್ ನಗರಕ್ಕೆ ಬಂದು ಇಳಿದರು. ಈ ಮೂಲಕ ಐತಿಹಾಸಿಕ ಸಂದರ್ಭಕ್ಕೆ ಪ್ರಧಾನಿ ಮೋದಿ ಅವರು ಇಂದು ಸಾಕ್ಷಿಯಾದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಅಂತಾ ಇಡೀ ಉಕ್ರೇನ್ ಕಾದು ಕುಳಿತಿತ್ತು. ಹೀಗಾಗಿ ಭಾರತದ ಪ್ರಧಾನಿಯನ್ನು ಉಕ್ರೇನ್ ದೇಶದಲ್ಲಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಉಕ್ರೇನ್ ಅಧ್ಯಕ್ಷರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಅಪ್ಪಿಕೊಂಡರು.
ಯುದ್ಧ.. ಯುದ್ಧ.. ಯುದ್ಧ.. ಹೀಗೆ ಜಗತ್ತಿನಲ್ಲಿ ಮತ್ತೊಮ್ಮೆ ಯುದ್ಧದ ದಾಹ ಹೆಚ್ಚಾಗಿದೆ. ರಷ್ಯಾ & ಉಕ್ರೇನ್ ಯುದ್ಧ ಇದೀಗ ಇಡೀ ಜಗತ್ತನ್ನು 2 ಓಳು ಮಾಡಿ ಹಾಕಿದೆ. ಹೀಗಾಗಿಯೇ ತಿಕ್ಕಾಟ ಕೂಡ ಜೋರಾಗಿದೆ. ಒಂದು ಕಡೆ ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳೆಲ್ಲಾ ಸೇರಿ ಪಾಶ್ಚಿಮಾತ್ಯ ದೇಶಗಳ ಒಕ್ಕೂಟದ ಮೂಲಕ ಉಕ್ರೇನ್‌ಗೆ ಬೆಂಬಲ ನೀಡುತ್ತಿವೆ. ರಷ್ಯಾ ಕೂಡ ಇದಕ್ಕೆ ತಿರುಗೇಟು ನೀಡುವಂತೆ ಚೀನಾ, ಉತ್ತರ ಕೊರಿಯಾ ಜೊತೆಗೆ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸಿದೆ. ಇದು ಪರಿಸ್ಥಿತಿಯನ್ನ ಕೈಮೀರಿ ಹೋಗುವಂತೆ ಮಾಡುತ್ತಿದೆ.

ಭಾರತ ಸಾರಿದೆ ಶಾಂತಿಯ ಸಂದೇಶ!
ಹೀಗೆ ಭಾರತವನ್ನು ಕೂಡ ಒಂದೇ ಗುಂಪಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಭಾರತ ಮಾತ್ರ ಈ ವಿಚಾರದಲ್ಲಿ ಜಾಣ ನಡೆ ಇಡುತ್ತಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಯಾವುದೇ ಒಂದು ಗುಂಪಿನ ಜೊತೆಗೆ ಭಾರತವನ್ನು ಗುರುತಿಸದೆ, ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡುತ್ತಿದೆ. ಹೀಗೆ ಮೋದಿ ಅವರ ಸರ್ಕಾರದ ನಡೆ ಇಡೀ ಪ್ರಪಂಚಕ್ಕೆ ಮಾದರಿಯೂ ಆಗುತ್ತಿದೆ. ಹೀಗಿದ್ದಾಗಲೇ ಇಂದು ಪ್ರಧಾನಿ ಮೋದಿ ಅವರು ಉಕ್ರೇನ್ ದೇಶಕ್ಕೆ ತೆರಳಿದ್ದಾರೆ. ಅಲ್ಲದೆ ಉಕ್ರೇನ್ ದೇಶದ ರಾಜಧಾನಿಯಲ್ಲಿ ನಿಂತು ಜಗತ್ತಿಗೇ ಶಾಂತಿಯ ಸಂದೇಶ ಸಾರಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ!
ಒಟ್ನಲ್ಲಿ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿ ಬಂದ ಸಮಯದಲ್ಲಿ ಇದೇ ಉಕ್ರೇನ್ ಕೋಪಗೊಂಡಿತ್ತು. ಆದರೆ ಇದೀಗ ಉಕ್ರೇನ್ ದೇಶಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ ಸಮಯದಲ್ಲಿ ಅತಿದೊಡ್ಡ ಸ್ವಾಗತ ಸಿಕ್ಕಿದೆ. ಹೀಗೆ ಭಾರತದ ಶಕ್ತಿ ಇಡೀ ಜಗತ್ತಿಗೆ ಗೊತ್ತಾಗುತ್ತಿದೆ, ಅಲ್ಲದೆ ಭಾರತ ಎಲ್ಲಾ ದೇಶಗಳ ಜೊತೆಯಲ್ಲಿ ಉತ್ತಮ ಸಂಬಂಧ ಇರಿಸಿಕೊಳ್ಳುವ ಸೂಚನೆಯನ್ನು ಈ ಮೂಲಕ ನೀಡುತ್ತಿದೆ. ಈಗ ಪಿಎಂ ಮೋದಿ ಅವರ ಉಕ್ರೇನ್ ಭೇಟಿ ಜಾಗತಿಕ ಮಟ್ಟದಲ್ಲಿ ಕೂಡ ಗಮನ ಸೆಳೆಯುತ್ತಿದೆ.












Click it and Unblock the Notifications