ಫ್ರಾನ್ಸ್‌ನಲ್ಲಿ ಗರ್ಭಿಣಿಯನ್ನೇ ಕಚ್ಚಿ ತಿಂದ ನರಭಕ್ಷಕ ಬೇಟೆನಾಯಿಗಳು

ಪ್ಯಾರಿಸ್, ನವೆಂಬರ್ 20: ಸಾಕು ನಾಯಿಯ ಜೊತೆಗೆ ವಾಕಿಂಗ್ ಹೊರಟಿದ್ದ ಗರ್ಭಿಣಿಯನ್ನು ನಾಯಿಗಳು ಕಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಫ್ರಾನ್ಸ್‌ನಲ್ಲಿ ನಡೆದಿದೆ.

ಹಂಟ್ ವಿತ್ ಹೌಂಟ್ಸ್ ಸೀಸನ್ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ಬೇಟೆನಾಯಿಗಳು ಜಿಂಕೆಯನ್ನು ಹಿಡಿಯುವುದು ವಾಡಿಕೆ ರೀತಿಯಲ್ಲಿ ನಡೆದುಕೊಂಡು ಬರುತ್ತಿತ್ತು.

ಆದರೆ ಇದೇ ಮೊದಲ ಬಾರಿ ಆ ಎಲ್ಲಾ ಭೇಟೆ ನಾಯಿಗಳು ಸೇರಿ ಗರ್ಭಿಣಿಯನ್ನೇ ಕೊಂದಿರುವ ಘಟನೆ ಇದಾಗಿದೆ. ಮೊದಲ ಬಾರಿ ಇಂಥದ್ದೊಂದು ಘಟನೆಗೆ ಈಶಾನ್ಯ ಪ್ಯಾರಿಸ್ ಸಾಕ್ಷಿಯಾಗಿದೆ.

Pregnant Woman Killed By Dogs In France

ಹಂಟ್ ವಿತ್ ಹೌಂಡ್ಸ್ ಇನ್ವೆಸ್ಟಿಗೇಟರ್‌ಗಳು ಆ ಕಾಡಿಗೆ ತೆರಳಿದಾಗ ಮಹಿಳೆಯ ಶವ ದೊರೆತಿದೆ.ವಿಲ್ಲರ್ಸ್-ಕಾಟೆರೆಟ್ಸ್ ಪ್ರದೇಶದ ಈಶಾನ್ಯ ಪ್ಯಾರಿಸ್‌ನ ಪ್ರಾಸಿಕ್ಯೂಟರ್ಸ್ ಕಚೇರಿಯಿಂದ 90 ಕಿ.ಮೀ ದೂರದಲ್ಲಿ ಮಹಿಳೆ ಶವ ಸಿಕ್ಕಿದೆ.

ಸಾಕಷ್ಟು ನಾಯಿಗಳು ಗರ್ಭಿಣಿ ಮೇಲೆ ಎರಗಿ ದಾಳಿ ನಡೆಸಿವೆ. ಹೊಟ್ಟೆಯ ಕೆಳಭಾಗ ಹಾಗೂ ಮೇಲ್ಭಾಗವನ್ನು ಕಚ್ಚಿವೆ ಇದರಿಂದ ರಕ್ತಸ್ರಾವ ಉಂಟಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಆಟೊಪ್ಸಿಯಿಂದ ತಿಳಿದುಬಂದಿದೆ.

ಹಂಟ್ ಅಂಡ್ ಹೌಂಡ್ಸ್‌ನ ಈ ಸೀಸನ್‌ನಲ್ಲಿದ್ದ 93 ನಾಯಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಂಟ್‌ ಟೀಮಿನ ಹೌಂಡ್ಸ್‌ ಹಾಗೂ ಆಕೆಯ ಮನೆಯ ಐದು ನಾಯಿಗಳ ಪರೀಕ್ಷೆ ನಡೆಯುತ್ತಿದೆ. ಅದರಲ್ಲಿ ಯಾವ ನಾಯಿಗಳು ಆಕೆಯನ್ನು ಕಚ್ಚಿರಬಹುದು ಎಂದು ನಾಯಿ ದಾಳಿ ಕುರಿತು ತನಿಖೆ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ನಾಯಿಗಳಿಗೆ ಜಿಂಕೆಯನ್ನು ಬೇಟೆಯಾಡುವಂತೆ ತರಬೇತಿ ನೀಡಲಾಗಿರುತ್ತದೆ. ಅಂದು ವಾಕಿಂಗ್ ಹೋಗುವಾಗ ತನ್ನ ಪಾರ್ಟ್ನರ್‌ಗೂ ಬರುವಂತೆ ಆಕೆ ಸೂಚಿಸಿದ್ದಳು. ಆದರೆ ಕಾರಣಾಂತರಗಳಿಂದ ಆಕೆಯ ಜೊತೆಯಲ್ಲಿ ತೆರಳಲು ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್‌ನಲ್ಲಿ ಒಟ್ಟು 30 ಸಾವಿರ ನಾಯಿಗಳಿಗೆ ಪ್ರಾಣಿಬೇಟೆ ಕುರಿತು ತರಬೇತಿ ನೀಡಲಾಗಿದೆ ಎಂದು ಪ್ರಾಣಿ ದಯಾ ಸಂಘ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+