ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್ ಕೊರೊನಾ ಲಸಿಕೆ ಪಡೆದಿದ್ದ ನರ್ಸ್ ಸಾವು

|
Google Oneindia Kannada News

ಲಿಸ್ಬನ್,ಜನವರಿ 05: ಫೈಜರ್ ಕೊರೊನಾ ಲಸಿಕೆ ಪಡೆದಿದ್ದ, ನರ್ಸ್ ಮೃತಪಟ್ಟಿರುವ ಪೋರ್ಚುಗಲ್‌ನಲ್ಲಿ ಘಟನೆ ನಡೆದಿದೆ.

ಸೋನಿಯಾ ಅಜೆವೆಡೊ(41) ಎಂಬ ಮಹಿಳೆ ಪೋರ್ಟೊದಲ್ಲಿರುವ ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಜಿಯಲ್ಲಿ ಮಕ್ಕಳ ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.31 ಲಕ್ಷಕ್ಕೆ ಇಳಿಕೆದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.31 ಲಕ್ಷಕ್ಕೆ ಇಳಿಕೆ

ಫೈಝರ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಯ ಭಾಗವಾಗಿ ಆಕೆ ಲಸಿಕೆಯನ್ನು ತೆಗೆದುಕೊಂಡಿದ್ದು, ಎರಡು ದಿನಗಳ ನಂತರ ಆಕೆ ತೀರಿಕೊಂಡಿದ್ದಾರೆ.

Portuguese Nurse Dies Two Days After Getting The Pfizer Covid Vaccine

ಸಾಮಾನ್ಯವಾಗಿ ಪ್ರತಿಶತ ನೂರರಷ್ಟು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ ಎರಡು ಮೂರು ವರ್ಷಗಳು ಬೇಕಾಗುತ್ತದೆ. ಆದರೆ, ಕೊರೊನಾ ವೈರಸ್ ಲಸಿಕೆ ವಿಷಯದಲ್ಲಿ, ಸರ್ಕಾರಗಳು ಕೆಲ ನಿಬಂಧನೆಗಳನ್ನು ಸಡಿಲಿಸಿ, ಸಮರೋಪಾದಿ ಲಸಿಕೆ ಬಳಸಲು ಅನುಮತಿಸುತ್ತಿವೆ. ಈವರೆಗೆ ಜಗತ್ತಿನಾದ್ಯಂತ ಮೂರು ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.

ನರ್ಸ್ ವೊಬ್ಬರು ಫೈಝರ್ ಲಸಿಕೆ ತೆಗೆದುಕೊಂಡು ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ. ಪ್ರಸ್ತುತ ಈ ಘಟನೆ ಜಗತ್ತಿನಾದ್ಯಂತ ತೀವ್ರ ಚರ್ಚೆಯಾಗುವ ಜೊತೆಗೆ, ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಮತ್ತಷ್ಟು ಅನುಮಾನ, ಆತಂಕಗಳನ್ನು ಹುಟ್ಟುಹಾಕಿದೆ.

ಸೋನಿಯಾ ಸಾವಿನ ಕಾರಣ ಪತ್ತೆ ಹಚ್ಚಲು ಪೋರ್ಚುಗೀಸ್ ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪೋರ್ಚುಗಲ್‌ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಝರ್ ಲಸಿಕೆ ನೀಡಲಾಗಿದೆ. ಹತ್ತು ದಶಲಕ್ಷ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ನಲ್ಲಿ 4,27,000 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 7,118 ಮಂದಿ ಸಾವನ್ನಪ್ಪಿದ್ದಾರೆ.

ಈ ಕುರಿತು ಸೋನಿಯಾ ತಂದೆ ಅಬಿಲಿಯೊ ಅಜೆವೆಡೊ, ಆಕೆಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎರಡು ದಿನಗಳ ಹಿಂದೆ ಆಕೆ ಕೊರೋನಾ ವೈರಸ್ ಲಸಿಕೆ ತೆಗೆದುಕೊಂಡಿದ್ದಳು. ಆದರೆ ಆಕೆಗೆ ಕೊರೊನಾ ಸೋಂಕಿನ ಲಕ್ಷಣಗಳಿರಲಿಲ್ಲ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರಲಿಲ್ಲ, ಆದರೆ ಲಸಿಕೆ ಹಾಕಿಸಿಕೊಂಡ ಎರಡು ದಿನಗಳಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟಿದ್ದಾಳೆ ಎಂದಿದ್ದಾರೆ.

English summary
Coronavirus vaccines are now being rolled out in different parts of the world. But it turns out that the vaccination regimen is not working out as expected for some.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X