ಪೋರ್ನ್ ಸ್ಟಾರ್ ಪಾವತಿ ಪ್ರಕರಣ: ವಿಚಾರಣೆ ಬಳಿಕ ಶರಣಾಗಲು ನಿರ್ಧರಿಸಿದ ಟ್ರಂಪ್
ವಾಷಿಂಗ್ಟನ್ ಏಪ್ರಿಲ್ 4: ಅಮೆರಿಕದ ಪೋರ್ನ್ ಸ್ಟಾರ್‌ಗೆ ಹಣ ಪಾವತಿ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವಾಗಲೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅವರು ಇಂದು ವಿಚಾರಣೆ ಬಳಿಕ ನ್ಯಾಯಾಲಯದಲ್ಲಿ ಶರಣಾಗಲು ನಿರ್ಧಾರಿಸಿದ್ದಾರೆ.
ಟ್ರಂಪ್ ಈಗಾಗಲೇ ತಮ್ಮ ಬಂಧನದ ಬಗ್ಗೆ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಜೊತೆಗೆ ಬೆಂಬಲಿಗರು ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದ್ದರು. ಪ್ರತಿಭಟನೆ ನಡೆಸದಂತೆ ಮನವಿ ಕೂಡ ಮಾಡಿದ್ದರು. ಇಂದು ಅಕ್ರಮ ಹಣ ಪಾವತಿ ಪ್ರಕರಣದಲ್ಲಿ ಮ್ಯಾನ್‌ಹ್ಯಾಟನ್ ನ್ಯಾಯಾಲಯದ ತೀರ್ಪಿನ ಬಳಿಕ ಟ್ರಂಪ್ ಶರಣಾಗುವ ಸಾಧ್ಯತೆಗಳು ದಟ್ಟವಾಗಿವೆ.
ದೋಷಿ ಎಂದು ಸಾಬೀತಾದರೆ, ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾಜಿ ಅಧ್ಯಕ್ಷರನ್ನು ಒಳಗೊಂಡ ಮೊದಲ ಕ್ರಿಮಿನಲ್ ಪ್ರಕರಣವಾಗಲಿದೆ. ಟ್ರಂಪ್ 2016ರ ಅಧ್ಯಕ್ಷೀಯ ಚುನಾವಣೆ ವೇಳೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಗೊತ್ತೇ ಇದೆ. ಅವರು ಆ ಚುನಾವಣೆಯಲ್ಲಿ ಗೆದ್ದರು.
ಚುನಾವಣೆಯ ಮೊದಲು, ಅವರು ಅಮೆರಿಕದ ಖ್ಯಾತ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸದಂತೆ ಆಕೆಗೆ ಹಣವನ್ನು ನೀಡಿದ್ದರು ಎನ್ನುವ ವಿಚಾರ ಬಯಲಾಗಿದೆ.

ಇದಕ್ಕೆ ಟ್ರಂಪ್ ತನ್ನ ವಕೀಲರನ್ನು ಮಧ್ಯವರ್ತಿಯಾಗಿಟ್ಟುಕೊಂಡು ಆಕೆಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 2006 ರಲ್ಲಿ ಟ್ರಂಪ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಸ್ವತ: ಸ್ಟಾರ್ಮಿ ಡೇನಿಯಲ್ಸ್ ಇತ್ತೀಚೆಗೆ ಬಹಿರಂಗಪಡಿಸಿದರು.
ಅಧ್ಯಕ್ಷೀಯ ಚುನಾವಣೆ ವೇಳೆ ಈ ವಿಚಾರವನ್ನು ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದು, ಬಾಯಿ ಮುಚ್ಚಿಸಲು 1.30 ಲಕ್ಷ ಡಾಲರ್ ನೀಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಮ್ಯಾನ್‌ಹ್ಯಾಟನ್ ಕ್ರಿಮಿನಲ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಮುಂದುವರೆದಿದೆ.
ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣ
ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್ ತಮ್ಮ ಬಂಧನ ಖಚಿತ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಗುರುವಾರ ರಾತ್ರಿ ತಮ್ಮ ಸತ್ಯ ಸಾಮಾಜಿಕ ವೇದಿಕೆಯ ಮೂಲಕ ತಮ್ಮ ಮೇಲಿರುವ ದೋಷಾರೋಪಣೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಟ್ರಂಪ್ ಅವರು ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಜೊತೆಗೆ ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದಾರೆ.
ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ಬಂಧನ ಖಚಿತ ಎಂಬಾರ್ಥದಲ್ಲಿ ಸುಳಿವು ಕೊಟ್ಟಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ ಕೂಡಲೇ ಶರಣಾಗಲು ಟ್ರಂಪ್ ನಿರ್ಧರಿಸಿದ್ದಾರೆ. ನ್ಯಾಯಾಲಯ ಟ್ರಂಪ್ ಅವರು ನ್ಯೂಯಾರ್ಕ್ ತಲುಪಿದ್ದಾರೆ. ಟ್ರಂಪ್ ಅವರು ವಾಸಿಸುವ ವೆಸ್ಟ್ ಪಾಮ್ ಬೀಚ್‌ನಿಂದ ಖಾಸಗಿ ವಿಮಾನದಲ್ಲಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವೈಟ್ ಕಾಲರ್ ಕ್ರಿಮಿನಲ್ ಡಿಫೆನ್ಸ್ ವಕೀಲ ಟಾಡ್ ಬ್ಲಾಂಚೆ ಅವರು ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಟ್ರಂಪ್ ಅವರನ್ನು ಪ್ರತಿನಿಧಿಸಲಿದ್ದಾರೆ.
ಮಾಧ್ಯಮದವರಿಗೆ ನ್ಯಾಯಾಲಯದಲ್ಲಿ ಪ್ರವೇಶ ರದ್ದು
ಕಲಾಪ ನಡೆಯುವಾಗ ಮಾಧ್ಯಮದವರಿಗೆ ನ್ಯಾಯಾಲಯದ ಕೊಠಡಿ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಲಾಗಿದೆ. ವಿಡಿಯೋ, ಫೋಟೋ ಮತ್ತು ರೇಡಿಯೋ ಪ್ರಸಾರಕ್ಕೆ ಅವಕಾಶ ನೀಡದಂತೆ ಕೇಳಿಕೊಳ್ಳಲಾಗಿದೆ. ಶರಣಾದ ನಂತರವೂ ಟ್ರಂಪ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡದಂತೆ ವಿನಂತಿಸಿದರು. ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ. ಟ್ರಂಪ್ ಬಂಧನ ತಪ್ಪು ಎಂದು ಅಮೆರಿಕದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಹಾಗಾಗಿಯೇ ಆತನಿಗೆ ಶಿಕ್ಷೆ ವಿಧಿಸಿದ ಕೂಡಲೇ ಶರಣಾಗಲು ನ್ಯಾಯಾಲಯ ನಿರ್ಧರಿಸಿದೆ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನ್ಯಾಯಾಲಯಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿತ್ತು. ವಿಐಪಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ತೆರಳುವ ರಸ್ತೆಗಳಲ್ಲಿ ಭಾರಿ ಸಶಸ್ತ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications